For Quick Alerts
  ALLOW NOTIFICATIONS  
  For Daily Alerts

  ಚಾಪ್ಲಿನ್ ಚಿತ್ರಗಳ ಸಾಲಿನಲ್ಲಿ ಹೇಮಂತ್ 'ನಿಂಬೆಹುಳಿ'

  By Mahesh
  |

  ನಟ, ನಿರ್ದೇಶಕ ಹೇಮಂತ್ ಹೆಗ್ಡೆ ಅವರ ಇನ್ನೂ ಬಿಡುಗಡೆಗೊಳ್ಳದ ಚಿತ್ರ 'ನಿಂಬೆಹುಳಿ' ಈ ಬಾರಿ ದೊಡ್ಡ ಸುದ್ದಿಯನ್ನು ಮಾಡಿದೆ. ಹೇಮಂತ್ ಸಿನಿಮಾ ಎಂದರೆ ಬರೀ ವಿವಾದದ್ದೇ ದೊಡ್ಡ ಸುದ್ದಿಯಾಗುತ್ತಿತ್ತು. ಆದರೆ, ಹೇಮಂತ್ ಚಿತ್ರ ಈಗ ವಿಶ್ವಖ್ಯಾತ ನಟ, ನಿರ್ದೇಶಕ ಚಾರ್ಲಿ ಚಾಪ್ಲಿನ್ ಅವರ ಚಿತ್ರಗಳ ಸಾಲಿನಲ್ಲಿ ನಿಂತಿದೆ.

  ವಿಶ್ವದ ಟಾಪ್ 25 ಕಾಮಿಡಿ ಚಿತ್ರ ಪೋಸ್ಟರ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಇದರಲ್ಲಿ 'ನಿಂಬೆಹುಳಿ' ಚಿತ್ರದ ಪೋಸ್ಟರ್ ಕೂಡಾ ಸ್ಥಾನ ಪಡೆದಿದೆ. ವಿಶ್ವದ ಅಗ್ರಗಣ್ಯ ಕಾಮಿಡಿ ಚಿತ್ರಗಳ ಸಾಲಿನಲ್ಲಿ ಕನ್ನಡದ ಏಕೈಕ ಎಂಟ್ರಿಯಾಗಿ ನಿಂಬೆಹುಳಿ ಕಾಣಿಸಿಕೊಂಡಿದೆ. ಉಳಿದಂತೆ ಹಿಂದಿ ಚಿತ್ರ 3 ಈಡಿಯಟ್ಸ್ ಪೋಸ್ಟರ್ ಕೂಡಾ ಸ್ಥಾನ ಪಡೆದಿದೆ.

  "ಹಾಗೆ ಸುಮ್ಮನೆ ಬ್ರೌಸ್ ಮಾಡುವಾಗ ಈ ವೆಬ್ ಸೈಟ್ ಬಗ್ಗೆ ತಿಳಿಯಿತು. ನಿಂಬೆಹುಳಿ ಚಿತ್ರದ ಪ್ರಚಾರದ ಸಲುವಾಗಿ ಸುಮ್ಮನೆ ಒಂದು ಪೋಸ್ಟರ್ ಕಳಿಸಿ, ಮರೆತು ಬಿಟ್ಟಿದ್ದೆ. ಆದರೆ, ಬ್ರೂಸ್ ಆಲ್ ಮೈಟಿ, ಟಾಯ್ ಸ್ಟೋರಿ, ಚಾಪ್ಲಿನ್ ಅವರ ಮಾಡರ್ನ್ ಟೈಮ್ಸ್ ಚಿತ್ರಗಳ ಪೋಸ್ಟರ್ಸ್ ಜತೆ ನಿಂಬೆಹುಳಿ ಚಿತ್ರದ ಪೋಸ್ಟರ್ ಕಾಣಿಸಿದ್ದು ನನಗೆ ನಂಬಲು ಸಾಧ್ಯವಾಗಲಿಲ್ಲ. ಒಟ್ಟಾರೆ ಸೃಜನಶೀಲತೆಗೆ ಬೆಲೆ ಇದೆ ಎಂಬುದಕ್ಕೆ ಇದು ದೊಡ್ಡ ಉದಾಹರಣೆ" ಎಂದು ನಿರ್ದೇಶಕ ಹೇಮಂತ್ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.

  ಟಾಪ್ 25 ಕಾಮಿಡಿ ಮೂವಿ ಪೋಸ್ಟರ್.ಕಾಂ ನಲ್ಲಿ ಎಲ್ಲಾ 25 ಚಿತ್ರಗಳ ಪೋಸ್ಟರ್ ಗಳನ್ನು ಪ್ರದರ್ಶಿಸಲಾಗಿದೆ. ಇಲ್ಲಿ ಪ್ರದರ್ಶಿಸಿರುವ ಚಿತ್ರಗಳಿಗಿಂತ ಹೆಚ್ಚು ನಗಿಸಬಲ್ಲ ಪೋಸ್ಟರ್ ನಿಮಗೆ ಗೊತ್ತಿದ್ದರೆ ಇ ಮೇಲ್ ಮಾಡಿ ಎಂದು ಎಡ್ವರ್ಡ್ ಫಿಲಿಫ್ ಎಂಬುವವರು ಇಮೇಲ್ ವಿಳಾಸ ನೀಡಿದ್ದಾರೆ. 25 ಕಾಮಿಡಿ ಚಿತ್ರ ಪೋಸ್ಟರ್ ಗಳು ಇಲ್ಲಿವೆ ನೋಡಿ..

  ಮಾಡರ್ನ್ ಟೈಮ್ಸ್

  ಮಾಡರ್ನ್ ಟೈಮ್ಸ್

  ಕೈಗಾರಿಕಾ ಕ್ರಾಂತಿ ಸಂದರ್ಭದಲ್ಲಿ 1936ರಲ್ಲಿ ತೆರೆಕಂಡ ಚಾರ್ಲಿ ಚಾಪ್ಲಿನ್ ನಟನೆಯ ಚಿತ್ರ

  ದಿ ಗ್ರೇಟ್ ಡಿಕ್ಟೇಟರ್

  ದಿ ಗ್ರೇಟ್ ಡಿಕ್ಟೇಟರ್

  1940ರಲ್ಲಿ ತೆರೆ ಕಂಡ ಚಾರ್ಲಿ ಚಾಪ್ಲಿನ್ ಅಭಿನಯದ ಅಡಾಲ್ಫ್ ಹಿಟ್ಲರ್ ಕುರಿತ ಅಣಕು ಚಿತ್ರ

  ಸಮ್ ಲೈಕ್ ಇಟ್ ಹಾಟ್

  ಸಮ್ ಲೈಕ್ ಇಟ್ ಹಾಟ್

  ಮರ್ಲಿನ್ ಮನ್ರೋ ಅಭಿನಯದ 1959ರ ಚಿತ್ರ

  ಟಾಯ್ ಸ್ಟೋರಿ

  ಟಾಯ್ ಸ್ಟೋರಿ

  2010ರಲ್ಲಿ ತೆರೆ ಕಂಡ ಅನಿಮೇಷನ್ ಚಿತ್ರ

  ಮೀಟ್ ದ ಫಾಕರ್ಸ್

  ಮೀಟ್ ದ ಫಾಕರ್ಸ್

  2004ರಲ್ಲಿ ತೆರೆಕಂಡ ಮೀಟ್ ದ ಫಾಕರ್ಸ್ ಚಿತ್ರದ ಪೋಸ್ಟರ್

  ಹ್ಯಾಂಗೋವರ್

  ಹ್ಯಾಂಗೋವರ್

  2009 ರಲ್ಲಿ ತೆರೆ ಕಂಡ ಚಿತ್ರದ ಪೋಸ್ಟರ್

  ಮಾನ್ ಸ್ಟರ್ಸ್ ಯೂನಿವರ್ಸಿಟಿ

  ಮಾನ್ ಸ್ಟರ್ಸ್ ಯೂನಿವರ್ಸಿಟಿ

  2013 ಮಾನ್ ಸ್ಟರ್ಸ್ ಯೂನಿವರ್ಸಿಟಿ ಅನಿಮೇಷನ್ ಚಿತ್ರ

  ಬ್ಸೂಸ್ ಆಲ್ ಮೈಟಿ

  ಬ್ಸೂಸ್ ಆಲ್ ಮೈಟಿ

  2003ರಲ್ಲಿ ತೆರೆ ಕಂಡ ಜಿಮ್ ಕ್ಯಾರಿ, ಮಾರ್ಗನ್ ಫ್ರೀಮನ್ ಅಭಿನಯದ ಚಿತ್ರ

  Mrs. ಡೌಟ್ ಫೈರ್

  Mrs. ಡೌಟ್ ಫೈರ್

  1993 ರಲ್ಲಿ ಮಿ. ಡೌಟ್ ಫೈರ್ ಚಿತ್ರದ ಪೋಸ್ಟರ್

  ಆಸ್ಟಿನ್ ಪರ್ವರ್ಸ್

  ಆಸ್ಟಿನ್ ಪರ್ವರ್ಸ್

  2002ರಲ್ಲಿ ತೆರೆ ಕಂಡ ಆಸ್ಟಿನ್ ಪರ್ವರ್ಸ್ ಗೋಲ್ಡ್ ಮೆಂಬರ್ ಚಿತ್ರದ ಪೋಸ್ಟರ್

  ನಿಂಬೆಹುಳಿ

  ನಿಂಬೆಹುಳಿ

  2013ರಲ್ಲಿ ತೆರೆ ಕಾಣಬೇಕಿರುವ ಹೇಮಂತ್ ಹೆಗ್ಡೆ ನಿರ್ದೇಶನದ ಚಿತ್ರ ಇನ್ನಷ್ಟು ನಿರೀಕ್ಷಿಸಿ

  ಕ್ಯಾರಿ ಆನ್ ಅಗೇನ್ ಡಾಕ್ಟರ್

  ಕ್ಯಾರಿ ಆನ್ ಅಗೇನ್ ಡಾಕ್ಟರ್

  1969 ರಲ್ಲಿ ತೆರೆ ಕಂಡ ಕ್ಯಾರಿ ಆನ್ ಅಗೇನ್ ಡಾಕ್ಟರ್ ಚಿತ್ರದ ಪೋಸ್ಟರ್

  ದಿ ಪ್ರೊಪೊಸಲ್

  ದಿ ಪ್ರೊಪೊಸಲ್

  2009ರಲ್ಲಿ ತೆರೆ ಕಂಡ ದಿ ಪ್ರೊಪೊಸಲ್ ಚಿತ್ರದ ಪೋಸ್ಟರ್

  ಸ್ಕೇರಿ ಮೂವಿ

  ಸ್ಕೇರಿ ಮೂವಿ

  2000ರಲ್ಲಿ ತೆರೆಕಂಡ ಸ್ಕೇರಿ ಮೂವಿ ಚಿತ್ರದ ಪೋಸ್ಟರ್

  15 ದೇರ್ ಇಸ್ ಸಮಥಿಂಗ್ ಅಬೌಟ್ ಮೇರಿ

  15 ದೇರ್ ಇಸ್ ಸಮಥಿಂಗ್ ಅಬೌಟ್ ಮೇರಿ

  1998ರಲ್ಲಿ ತೆರೆಕಂಡ ದೇರ್ ಇಸ್ ಸಮಥಿಂಗ್ ಅಬೌಟ್ ಮೇರಿ ಚಿತ್ರದ ಪೋಸ್ಟರ್

  #16 ಮಿ ವೆರಾನೊ ಕಾನ್ ಅಮಾಂಡ

  #16 ಮಿ ವೆರಾನೊ ಕಾನ್ ಅಮಾಂಡ

  2011ರಲ್ಲಿ ತೆರೆಕಂಡ ಮಿ ವೆರಾನೊ ಕಾನ್ ಅಮಾಂಡ ಚಿತ್ರದ ಪೋಸ್ಟರ್

  As Good As It Gets

  As Good As It Gets

  1997ರಲ್ಲಿ ತೆರೆ ಕಂಡ As Good As It Gets ಚಿತ್ರದ ಪೋಸ್ಟರ್

  ದಿ ಡಿಕ್ಟೇಟರ್

  ದಿ ಡಿಕ್ಟೇಟರ್

  2012ರಲ್ಲಿ ತೆರೆ ಕಂಡ ದಿ ಡಿಕ್ಟೇಟರ್ ಚಿತ್ರದ ಪೋಸ್ಟರ್

  Anger Management

  Anger Management

  2003ರಲ್ಲಿ ತೆರೆ ಕಂಡ Anger Management ಚಿತ್ರದ ಪೋಸ್ಟರ್

  3 ಈಡಿಯಟ್ಸ್

  3 ಈಡಿಯಟ್ಸ್

  2009ರಲ್ಲಿ ತೆರೆ ಕಂಡ ಹಿಂದಿ ಚಿತ್ರ 3 ಈಡಿಯಟ್ಸ್

  ದಿ ನಟ್ಟಿ ಪ್ರೊಫೆಸರ್

  ದಿ ನಟ್ಟಿ ಪ್ರೊಫೆಸರ್

  1996ರಲ್ಲಿ ತೆರೆ ಕಂಡ ದಿ ನಟ್ಟಿ ಪ್ರೊಫೆಸರ್ ಚಿತ್ರದ ಪೋಸ್ಟರ್

  ದಿ ಮಾಸ್ಕ್

  ದಿ ಮಾಸ್ಕ್

  1994 ರಲ್ಲಿ ತೆರೆ ಕಂಡ ಜಿಮ್ ಕ್ಯಾರಿ ದಿ ಮಾಸ್ಕ್ ಚಿತ್ರದ ಪೋಸ್ಟರ್

  #23 Mon Oncle

  #23 Mon Oncle

  1958ರಲ್ಲಿ ತೆರೆ ಕಂಡ Mon Oncle ಚಿತ್ರದ ಪೋಸ್ಟರ್

  #24 ದಿ 40 ಇಯರ್ ಓಲ್ಡ್ ವರ್ಜಿನ್

  #24 ದಿ 40 ಇಯರ್ ಓಲ್ಡ್ ವರ್ಜಿನ್

  2005ರಲ್ಲಿ ತೆರೆ ಕಂಡ 'ದಿ 40 ಇಯರ್ ಓಲ್ಡ್ ವರ್ಜಿನ್' ಚಿತ್ರದ ಪೋಸ್ಟರ್

  #25 ವೆಡ್ಡಿಂಗ್ ಕ್ರಶರ್ಸ್

  #25 ವೆಡ್ಡಿಂಗ್ ಕ್ರಶರ್ಸ್

  2005ರಲ್ಲಿ ತೆರೆ ಕಂಡ 'ವೆಡ್ಡಿಂಗ್ ಕ್ರಶರ್ಸ್' ಚಿತ್ರದ ಪೋಸ್ಟರ್

  English summary
  The film poster of actor-director Hemanth Hegde's upcoming Kannada film Nimbe Huli has been featured on the list of top 25 comedy movie posters in the world. This is the only Kannada film poster that has managed to secure a place on such a list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X