For Quick Alerts
  ALLOW NOTIFICATIONS  
  For Daily Alerts

  ಯಾವ ನಟ-ನಟಿಯರು ಎಲ್ಲೆಲ್ಲಿ ಮತದಾನ ಮಾಡಲಿದ್ದಾರೆ ?

  By Pavithra
  |

  ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದುಕೊಂಡಿವೆ. ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದು ಪಕ್ಷದ ಅಭ್ಯರ್ಥಿಗಳೆಲ್ಲರೂ ಮನೆ ಮನೆ ಬಾಗಿಲಿಗೆ ಹೋಗಿ ನಮ್ಮ ಪಕ್ಷಕ್ಕೆ ಮತ ಹಾಕಿ ಎಂದು ಮನವಿ ಮಾಡುತ್ತಿದ್ದಾರೆ. ಇಂದು ಸಂಜೆ ವೇಳೆಗೆ ಮನೆ ಮನೆ ಪ್ರಚಾರವೂ ಕೊನೆಯಾಗಲಿದೆ.

  ಮತದಾನ ಶ್ರೇಷ್ಠವಾದದ್ದು ಐದು ವರ್ಷ ಅಧಿಕಾರ ಪಡೆದುಕೊಳ್ಳುವರನ್ನ ಆಯ್ಕೆ ಮಾಡುವ ಸಮಯ ಈಗ ಜನ ಸಾಮಾನ್ಯರ ಕೈನಲ್ಲಿದೆ. ರಾಜ್ಯ ಚುನಾವಣಾ ಆಯೋಗದವರು ವೋಟಿಂಗ್ ಹೆಚ್ಚು ಮಾಡಲು ವಿವಿಧ ರೀತಿಯ ಪ್ರತಯ್ನಗಳನ್ನು ಮಾಡಿದ್ದಾರೆ.

  'ಉತ್ತಮ ಪ್ರಜಾಕೀಯ ಪಕ್ಷ' ನೋಂದಣಿ ಮಾಡಿಸಿದ ಉಪೇಂದ್ರ'ಉತ್ತಮ ಪ್ರಜಾಕೀಯ ಪಕ್ಷ' ನೋಂದಣಿ ಮಾಡಿಸಿದ ಉಪೇಂದ್ರ

  ಮತದಾನ ಮಾಡಿ ಅಂತ ಇಷ್ಟು ದಿನಗಳ ಕಾಲ ಜಾಗೃತಿ ಮೂಡಿಸಿದ ಸ್ಯಾಂಡಲ್ ವುಡ್ ನ ಸ್ಟಾರ್ ಗಳು ಎಲ್ಲೆಲ್ಲಿ ವೋಟು ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇರಲಿದೆ. ಹಾಗಾದ್ರೆ ಯಾವ ಕಲಾವಿದರು ಯಾವ ಏರಿಯಾದಲ್ಲಿ ಮತದಾನ ಮಾಡುತ್ತಾರೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

  ಅಣ್ಣಾವ್ರ ಮಕ್ಕಳ ಮತದಾನ

  ಅಣ್ಣಾವ್ರ ಮಕ್ಕಳ ಮತದಾನ

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಹಾಗೂ ರಾಘವೇಂದ್ರ ರಾಜ್ ಕುಮಾರ್ , ವಿನಯ್ ರಾಜ್ ಕುಮಾರ್ ಸೇರಿದಂತೆ ಡಾ ರಾಜ್ ಕುಮಾರ್ ಕುಟುಂಬದವರು ಸದಾಶಿವ ನಗರದ ಪೂರ್ಣಪ್ರಜ್ಞ ಶಾಲೆಯಲ್ಲಿ ಮತದಾನ ಮಾಡುತ್ತಿದ್ದಾರೆ.

  ಕತ್ರಿಗುಪ್ಪೆ ಯಲ್ಲಿ ಉಪೇಂದ್ರ ಮತದಾನ

  ಕತ್ರಿಗುಪ್ಪೆ ಯಲ್ಲಿ ಉಪೇಂದ್ರ ಮತದಾನ

  ನಟ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಕತ್ರಿಗುಪ್ಪೆ ಬಳಿ ಇರುವ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಲಿದ್ದಾರೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಕೂಡ ಕತ್ರಿಗುಪ್ಪೆ ಯಲ್ಲೇ ವೋಟ್ ಮಾಡುತ್ತಾರೆ. ಆದರೆ ರಾಧಿಕಾ ಪಂಡಿತ್ ಮಾತ್ರ ಮಲ್ಲೇಶ್ವರಂ ನಲ್ಲಿ ಮತದಾನ ಮಾಡುತ್ತಾರೆ.

  ಕಿಚ್ಚ ಸುದೀಪ್ ಮತದಾನ

  ಕಿಚ್ಚ ಸುದೀಪ್ ಮತದಾನ

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪುಟ್ಟೇನಹಳ್ಳಿಯಲ್ಲಿ ತಮ್ಮ ಕುಟುಂಬದ ಜೊತೆಯಲ್ಲಿ ಮತದಾನ ಮಾಡಿ ಅಭಿಮಾನಿಗಳಲ್ಲಿ ಜಾಗೃತಿ ಮೂಡಿಸಲಿದ್ದಾರೆ.

  ರಾಜರಾಜೇಶ್ವರಿ ನಗರದಲ್ಲಿ ದರ್ಶನ್ ಮತದಾನ

  ರಾಜರಾಜೇಶ್ವರಿ ನಗರದಲ್ಲಿ ದರ್ಶನ್ ಮತದಾನ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ದಿನಕರ್ ತೂಗುದೀಪ ರಾಜರಾಜೇಶ್ವರಿ ನಗರದಲ್ಲಿ ಮತದಾನ ಮಾಡಲಿದ್ದಾರೆ. ಇನ್ನು ದರ್ಶನ್ ಅವರ ತಾಯಿ ಮೀನಾ ತೂಗುದೀಪ ಮೈಸೂರಿನಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ.

  ತಾರಾ, ಮೇಘನಾ ಒಟ್ಟಿಗೆ ಮತದಾನ

  ತಾರಾ, ಮೇಘನಾ ಒಟ್ಟಿಗೆ ಮತದಾನ

  ಇತ್ತೀಚಿಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಮೇಘನಾ ರಾಜ್ ಹಾಗೂ ನಟಿ ತಾರಾ ಅನುರಾಧ ಮತ್ತು ಕುಟುಂಬಸ್ಥರು ಎಲ್ಲರೂ ಜೆಪಿ ನಗರದಲ್ಲಿ ಮತದಾನ ಮಾಡಲಿದ್ದಾರೆ.

  ಕುಮಾರಣ್ಣನ ಪರವಾಗಿ ನಿಂತರು ಧಾರಾವಾಹಿ ನಾಯಕಿಯರುಕುಮಾರಣ್ಣನ ಪರವಾಗಿ ನಿಂತರು ಧಾರಾವಾಹಿ ನಾಯಕಿಯರು

  ಮಾಗಡಿಯಲ್ಲಿ ನಿಖಿಲ್ ವೋಟಿಂಗ್

  ಮಾಗಡಿಯಲ್ಲಿ ನಿಖಿಲ್ ವೋಟಿಂಗ್

  ಜಾಗ್ವಾರ್ ಹೀರೋ ನಟ ನಿಖಿಲ್ ಕುಮಾರ್ ಪದ್ಮನಾಬ ನಗರದಲ್ಲಿ ವೋಟ್ ಮಾಡುತ್ತಾರೆ ಎನ್ನುವುದು ಹಲವರ ಊಹೆ ಆಗಿರುತ್ತದೆ. ಆದರೆ ನಿಖಿಲ್ ಮಾಗಡಿ ಕ್ಷೇತ್ರಕ್ಕೆ ಸೇರುವ ಕೇತಕನಹಳ್ಳಿಯಲ್ಲಿ ಮತದಾನ ಮಾಡಲಿದ್ದಾರೆ.

  ಅರಸಿಕೆರೆಯಲ್ಲಿ ಡಾಲಿ ಮತದಾನ

  ಅರಸಿಕೆರೆಯಲ್ಲಿ ಡಾಲಿ ಮತದಾನ

  ಸ್ಪೆಷಲ್ ಸ್ಟಾರ್ ಧನಂಜಯ ತಮ್ಮ ಹುಟ್ಟುರಿನಲ್ಲಿ ಮತದಾನ ಮಾಡಲಿದ್ದಾರೆ. ವೋಟ್ ಮಾಡುವುದಕ್ಕಾಗಿಯೇ ಬಿಡುವು ಮಾಡಿಕೊಂಡು ನಾಳೆ ಊರಿಗೆ ಪ್ರಯಾಣ ಬೆಳೆಸಿ ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಮತದಾನ ಮಾಡುತ್ತಾರೆ.

  ನಾಗವಾರದಲ್ಲಿ ಶಿವಣ್ಣ ಮತದಾನ

  ನಾಗವಾರದಲ್ಲಿ ಶಿವಣ್ಣ ಮತದಾನ

  ಶಿವರಾಜ್ ಕುಮಾರ್ ಗೀತಾ ಶಿವರಾಜ್ ಕುಮಾರ್ ಹಾಗೂ ಪುತ್ರಿಯರು ನಾಗಾವಾರದಲ್ಲಿ ಮತದಾನ ಮಾಡಲಿದ್ದಾರೆ. ಶಿವರಾಜ್ ಕುಮಾರ್ ಪ್ರತಿ ಚುನಾವಣೆಯಲ್ಲೂ ತಪ್ಪದೆ ಮತದಾನ ಮಾಡುತ್ತಾ ಬಂದಿದ್ದಾರೆ.

  ಮತದಾನ ಮಾಡಲಿದ್ದಾರೆ ಸೋನು ಗೌಡ

  ಮತದಾನ ಮಾಡಲಿದ್ದಾರೆ ಸೋನು ಗೌಡ

  ನಟಿ ಸೋನು ಗೌಡ ಹಾಗೂ ನಟಿ ನೇಹಾ ಗೌಡ ಇಬ್ಬರ ನಾಳೆ ಪದ್ಮನಾಬ ನಗರದಲ್ಲಿ ಮತದಾನ ಮಾಡಲಿದ್ದಾರೆ. ಒಟ್ಟಾರೆ ಸ್ಟಾರ್ ಗಳೆಲ್ಲರೂ ನಾಳೆ ವೋಟು ಮಾಡುವ ಮೂಲಕ ಸಾಮಾನ್ಯ ಜನರಿಗೆ ಮಾದರಿ ಆಗಲಿದ್ದಾರೆ.

  English summary
  Karnataka Assembly Elections 2018: Here is a complete information about How and Where Kannada cinema stars voting tomorrow (May 12th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X