For Quick Alerts
  ALLOW NOTIFICATIONS  
  For Daily Alerts

  ಯುವರಾಜಕುಮಾರನ ನಿಶ್ಚಿತಾರ್ಥದಲ್ಲಿ ಕಂಡ ಗಣ್ಯರಿವರು

  By Pavithra
  |
  ಯುವ ರಾಜ್‌ಕುಮಾರ್ ನಿಶ್ಚಿತಾರ್ಥದಲ್ಲಿ ಕಂಡ ಗಣ್ಯರು ಇವರೇ...!! | Oneindia Kannada

  ಡಾ ರಾಜ್ ಕುಮಾರ್ ಮೊಮ್ಮಗ ಯುವರಾಜ್ ಕುಮಾರ್ ನಿಶ್ಚಿತಾರ್ಥ ಇತ್ತೀಚಿಗಷ್ಟೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಹುಡುಗಿ ಶ್ರೀ ದೇವಿ ಭೈರಪ್ಪ ಅವರನ್ನು ಇನ್ನು ಕೆಲವೇ ದಿನಗಳಲ್ಲಿ ಯುವರಾಜಕುಮಾರ್ ಕೈ ಹಿಡಿಯಲಿದ್ದಾರೆ.

  ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಶ್ರೀದೇವಿ ಭೈರಪ್ಪ ಹಾಗೂ ಯುವರಾಜ್ ಕುಮಾರ್ ನಿಶ್ಚಿತಾರ್ಥ ಸಂಪ್ರದಾಯ ಬದ್ಧವಾಗಿ ಅದ್ಧೂರಿಯಾಗಿ ನೆರೆವೇರಿದೆ. ಮುಂದಿನ ವರ್ಷದ ಆರಂಭದಲ್ಲಿ ಯುವರಾಜ್ ಕುಮಾರ್ ಚಿತ್ರರಂಗಕ್ಕೆ ಕಾಲಿಡಲಿದ್ದು ಅದಕ್ಕೂ ಮುನ್ನ ವಿವಾಹವಾಗುವ ಸಾಧ್ಯತೆಗಳು ಹೆಚ್ಚಿವೆ.

  ಮೈಸೂರಿಗೂ ಅಣ್ಣಾವ್ರ ಕುಟುಂಬಕ್ಕೂ ಜನುಮ ಜನುಮದ ಅನುಬಂಧಮೈಸೂರಿಗೂ ಅಣ್ಣಾವ್ರ ಕುಟುಂಬಕ್ಕೂ ಜನುಮ ಜನುಮದ ಅನುಬಂಧ

  ತುಂಬಾ ಹತ್ತಿರದವರನ್ನು ಹಾಗೂ ಆತ್ಮೀಯರನ್ನ ಮಾತ್ರ ನಿಶ್ಚಿತಾರ್ತಕ್ಕೆ ಆಹ್ವಾನ ಮಾಡಲಾಗಿತ್ತು. ಸಾಕಷ್ಟು ಕನ್ನಡ ಸಿನಿಮಾರಂಗದ ಕಲಾವಿದರು ನಿಶ್ಚಿತಾರ್ಥದಲ್ಲಿ ಹಾಜರಿದ್ದರು. ಹಾಗಾದರೆ ಯಾರೆಲ್ಲಾ ಯುವ-ಶ್ರೀ ನಿಶ್ಚಿತಾರ್ಥದಲ್ಲಿ ಭಾಗಿ ಆಗಿದ್ದರು ಇಲ್ಲಿದೆ ಮಾಹಿತಿ ಮುಂದೆ ಓದಿ.

   ನಿಶ್ಚಿತಾರ್ಥದಲ್ಲಿ ಅಂಬಿ-ಸುಮಲತಾ

  ನಿಶ್ಚಿತಾರ್ಥದಲ್ಲಿ ಅಂಬಿ-ಸುಮಲತಾ

  ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ನಿಶ್ಚಿತಾರ್ಥದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಕಾಣಿಸಿಕೊಂಡರು. ಇಬ್ಬರು ಹೊಸ ಜೋಡಿಗೆ ಆಶೀರ್ವಾದ ಮಾಡಿ ಶುಭಾಶಯ ತಿಳಿಸಿದರು.

   ಹೇಮಚೌಧರಿ-ರಾಕ್ ಲೈನ್ ವೆಂಕಟೇಶ್

  ಹೇಮಚೌಧರಿ-ರಾಕ್ ಲೈನ್ ವೆಂಕಟೇಶ್

  ರಾಜ್ ಕುಮಾರ್ ಕುಟುಂಬದವರ ಜೊತೆ ಉತ್ತಮ ಒಡನಾಟ ಹೊಂದಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ನಿರ್ದೇಶಕ ಭಗವಾನ್ ಕೂಡ ನಿಶ್ಚಿತಾರ್ಥದಲ್ಲಿ ಭಾಗಿ ಆಗಿದ್ದರು. ಹಿರಿಯ ನಟಿ ಹೇಮಚೌಧರಿ ಕೂಡ ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ ಅವರಿಗೆ ಶುಭ ಕೋರಿದ್ರು.

   ನಿಶ್ಚಿತಾರ್ಥದಲ್ಲಿ ಮಿಲನ ಪ್ರಕಾಶ್ ಜೋಡಿ

  ನಿಶ್ಚಿತಾರ್ಥದಲ್ಲಿ ಮಿಲನ ಪ್ರಕಾಶ್ ಜೋಡಿ

  'ಮಿಲನ' ಹಾಗೂ 'ಸಿದ್ದಾರ್ಥ' ಸಿನಿಮಾ ನಿರ್ದೇಶಕರಾದ ಮಿಲನ ಪ್ರಕಾಶ್ ಕೂಡ ನಿಶ್ಚಿತಾರ್ಥಕ್ಕೆ ಬಂದಿದ್ದರು. ನಿರ್ದೇಶಕರು ಎನ್ನುವುದಕ್ಕಿಂತ ಪ್ರಕಾಶ್ ಅಣ್ಣಾವ್ರ ಕುಟುಂಬದ ಜೊತೆ ಉತ್ತಮ ಬಾಂದವ್ಯ ಹೊಂದಿದ್ದಾರೆ.

   ಪ್ರತಾಪ್ ಸಿಂಹ-ಶ್ರೀಮುಳಿ ದಂಪತಿ

  ಪ್ರತಾಪ್ ಸಿಂಹ-ಶ್ರೀಮುಳಿ ದಂಪತಿ

  ಇನ್ನು ರಾಜಕೀಯ ವಲಯದಿಂದ ಪ್ರತಾಪ್ ಸಿಂಹ ನಿಶ್ಚಿತಾರ್ಥದಲ್ಲಿ ಭಾಗಿ ಆಗಿದ್ದು. ನಟ ಶ್ರೀ ಮುರಳಿ ಹಾಗೂ ಪತ್ನಿ. ವಿಜಯ ರಾಘವೇಂದ್ರ ದಂಪತಿ. ಶಿವರಾಜ್ ಕುಮಾರ್ ಕುಟುಂಬ, ಪುನೀತ್ ರಾಜ್ ಕುಮಾರ್ ಕುಟುಂಬದ ಎಲ್ಲರೂ ಸಂಭ್ರದಲ್ಲಿ ಪಾಲ್ಗೊಂಡಿದ್ದರು.

  English summary
  lot of cinema artists involved in Kannada actor Raghavendra Rajkumar's son Yuvraj Raj Kumar engagement

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X