For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರಳತೆಗೆ ಇದಕ್ಕಿಂತ ಸಾಕ್ಷಿ ಬೇಕಾ.?

  By Harshitha
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ರನ್ನ ಮೀಟ್ ಮಾಡೋಕೆ ಸಾಧ್ಯ ಇದ್ಯಾ.? ಅವರು ಕನ್ನಡ ಚಿತ್ರರಂಗದ ದೊಡ್ಡ ನಟ.. ಜನಸಾಮಾನ್ಯರನ್ನು ಭೇಟಿ ಮಾಡುವಷ್ಟು ಸಮಯ ಅವರಿಗೆ ಎಲ್ಲಿದೆ.? ಒಂದ್ವೇಳೆ ಭೇಟಿ ಮಾಡಿದ್ರೂ, ಚೆನ್ನಾಗಿ ಮಾತನಾಡಿಸ್ತಾರಾ.? - ಇಂತಹ ಹತ್ತು ಹಲವು ಪ್ರಶ್ನೆಗಳು ಅನೇಕರಿಗೆ ಕಾಡಬಹುದು.

  ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ತಮ್ಮನ್ನ ಆರಾಧಿಸುವ ಅಭಿಮಾನಿಗಳನ್ನ ದರ್ಶನ್ ಸದಾ ಗೌರವದಿಂದ ಕಾಣುತ್ತಾರೆ. ತಾವು ದೊಡ್ಡ ತಾರೆ ಎಂಬ ಜಂಭ ಇಲ್ಲದೆ, ಎಲ್ಲರೊಂದಿಗೂ ಸರಳತೆಯಿಂದಲೇ ನಡೆದುಕೊಳ್ಳುತ್ತಾರೆ.

  ಮೊನ್ನೆ ಮೊನ್ನೆಯಷ್ಟೇ ನಡೆದ ಘಟನೆಯನ್ನೇ ತೆಗೆದುಕೊಳ್ಳಿ... ಕಳೆದ ಶುಕ್ರವಾರ ಮೈಸೂರಿನ ತಮ್ಮ ಫಾರ್ಮ್ ಹೌಸ್ ಗೆ ದರ್ಶನ್ ಭೇಟಿ ಕೊಟ್ಟಿದ್ದರು. ಈ ವೇಳೆ ದರ್ಶನ್ ರನ್ನು ಭೇಟಿ ಆಗಲು ವಿಕಲಚೇತನ ಅಭಿಮಾನಿಯೊಬ್ಬರು ಬಂದಿದ್ದರು.

  ದರ್ಶನ್ ವಿಚಾರಕ್ಕೆ ರಜನಿಕಾಂತ್ ಅವರನ್ನ ನೆನಪಿಸಿಕೊಂಡ ನಟದರ್ಶನ್ ವಿಚಾರಕ್ಕೆ ರಜನಿಕಾಂತ್ ಅವರನ್ನ ನೆನಪಿಸಿಕೊಂಡ ನಟ

  ಆ ಅಭಿಮಾನಿಯನ್ನು ನೋಡಿ ಪ್ರೀತಿಯಿಂದ ಮಾತನಾಡಿಸಿ, ಔತಣ ಕೊಟ್ಟು, ಸೆಲ್ಫಿ ಕ್ಲಿಕ್ಕಿಸಿಕೊಂಡು ಕಳುಹಿಸಿಕೊಟ್ಟಿದ್ದಾರೆ ನಟ ದರ್ಶನ್. ಈ ವಿಚಾರವನ್ನ ಸ್ವತಃ ದರ್ಶನ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಫೋಟೋ ಸಮೇತ ಹಂಚಿಕೊಂಡಿದ್ದಾರೆ.

  ದರ್ಶನ್ ಗೆ ಇರುವ ಮಾನವೀಯತೆ ಹಾಗೂ ಸರಳತೆಯನ್ನ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕೊಂಡಾಡುತ್ತಿದ್ದಾರೆ.

  ಪುನೀತ್, ದರ್ಶನ್, ಸುದೀಪ್ ಬಗ್ಗೆ ನಟಿ ರಶ್ಮಿಕಾ 'ಹೀಗೆ' ಹೇಳಿದರು.! ಪುನೀತ್, ದರ್ಶನ್, ಸುದೀಪ್ ಬಗ್ಗೆ ನಟಿ ರಶ್ಮಿಕಾ 'ಹೀಗೆ' ಹೇಳಿದರು.!

  ಇದೊಂದೇ ಅಲ್ಲ, ಅಭಿಮಾನಿಗಳನ್ನು ಭೇಟಿ ಮಾಡಲು ದರ್ಶನ್ ಮನೆ ಬಾಗಿಲು ಸದಾ ತೆರೆದಿರುತ್ತದೆ. 'ದಾಸ'ನ ಜೊತೆಗೆ ಫೋಟೋ ಕ್ಲಿಕ್ ಮಾಡಿಕೊಳ್ಳಬೇಕು ಎಂದು ಬರುವ ಅಭಿಮಾನಿಗಳಿಗೆ ದರ್ಶನ್ ಎಂದೂ ನೋಯಿಸಿಲ್ಲ.

  ಅಂದ್ಹಾಗೆ, ಸದ್ಯ 'ಯಜಮಾನ' ಚಿತ್ರೀಕರಣದಲ್ಲಿ ದರ್ಶನ್ ಬಿಜಿಯಾಗಿದ್ದಾರೆ. ಮುಂದಿನ ವಾರ 'ಒಡೆಯ' ಸಿನಿಮಾ ಸೆಟ್ಟೇರಲಿದೆ. ದರ್ಶನ್ ಅಭಿನಯದ 50ನೇ ಸಿನಿಮಾ 'ಕುರುಕ್ಷೇತ್ರ' ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

  English summary
  Here is an example for Challenging Star Darshan's simplicity.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X