»   » ಚಂದನವನದ ತಾರೆಯರ ಮನೆಯಲ್ಲಿ 'ಯುಗಾದಿ' ಸಂಭ್ರಮ ಹೇಗಿರಲಿದೆ ಗೊತ್ತಾ?

ಚಂದನವನದ ತಾರೆಯರ ಮನೆಯಲ್ಲಿ 'ಯುಗಾದಿ' ಸಂಭ್ರಮ ಹೇಗಿರಲಿದೆ ಗೊತ್ತಾ?

Posted By:
Subscribe to Filmibeat Kannada

ಹಿಂದುಗಳ ಸಾಂಪ್ರದಾಯಿಕ ಹಬ್ಬಗಳು ಸಿಟಿಗಳಲ್ಲಿ ಜನರ ಆಧುನಿಕ ಜೀವನ ಶೈಲಿಯಿಂದ ತಮ್ಮ ತನವನ್ನು ಕಳೆದುಕೊಳ್ಳುತ್ತಿವೆ ಅನ್ನೋ ಬೇಸರ ಜನರಂತೆ, ನಮ್ಮ ಸ್ಯಾಂಡಲ್ ವುಡ್ ತಾರೆಯರನ್ನು ಕೊರೆಯುತ್ತಿದೆ. ಆದರೂ ಸಹ ಯಾವುದೇ ಹಬ್ಬಗಳು ಬಂತೆಂದರೆ ಚಂದನವನವು ಸಹ ಕಲರ್ ಫುಲ್ ಆಗುತ್ತದೆ. ಸೆಲೆಬ್ರಿಟಿಗಳು ಸಹ ವಿಭಿನ್ನವಾಗಿ ಹಬ್ಬಗಳನ್ನು ಆಚರಣೆ ಮಾಡುತ್ತಾರೆ.

ಅದರಲ್ಲೂ ಹಿಂದುಗಳಿಗೆ ಹೊಸ ವರ್ಷ ಆಗಿರುವ 'ಯುಗಾದಿ' ಹಬ್ಬ ಅಂದ್ರೆ ತಾರೆಯರಿಗೂ ಎಲ್ಲಿಲ್ಲದ ಭಾವನಾತ್ಮಕ ಪ್ರೀತಿ. ಆದ್ದರಿಂದ ಈ ಭಾರಿಯೂ ಹಲವು ಸ್ಯಾಂಡಲ್ ವುಡ್ ತಾರೆಯರು ತಮ್ಮದೇ ಆದ ಪ್ಲಾನ್ ಮಾಡಿಕೊಂಡು, ಯುಗಾದಿ ಹಬ್ಬ ಆಚರಣೆ ಮಾಡುತ್ತಿದ್ದಾರೆ.

ಅಂದಹಾಗೆ ನಮ್ಮ ಚಂದನವನದ ಯಾವ್ಯಾವ ತಾರೆಯರು ಹೇಗೆಲ್ಲಾ 'ಯುಗಾದಿ' ಹಬ್ಬ ಆಚರಣೆ ಮಾಡುತ್ತಿದ್ದಾರೆ, 'ಯುಗಾದಿ' ಹಬ್ಬದ ವಿಶೇಷತೆ ಬಗ್ಗೆ ಅವರ ಅನಿಸಿಕೆ ಏನು? ಎಂಬುದು ಅವರೇ ಹೇಳಿದ ಮಾತುಗಳಲ್ಲಿ ಮುಂದೆ ಇದೆ. ಓದಿರಿ...

ಶ್ವೇತಾ ಪಂಡಿತ್, ನಟಿ

- ಅಕ್ಚುಲಿ ನನಗೆ ಆಚರಣೆ ಬಗ್ಗೆ ಅಷ್ಟೊಂದು ಗೊತ್ತಿಲ್ಲ. ಅಮ್ಮನೇ ಎಲ್ಲಾ ಫಾಲೋ ಮಾಡೋದು. ಚಿಕ್ಕಂದಿನಿಂದಲೂ ನನಗೆ ಬೇವು-ಬೆಲ್ಲ ಮಿಕ್ಸ್ ಮಾಡಿ ತಿನ್ನೋ ಕಾನ್ಸೆಪ್ಟ್ ತುಂಬಾ ಇಷ್ಟ.ಆದ್ರೆ ನನಗೆ ತಿನ್ನೋದು ಕಷ್ಟ. ಎಷ್ಟೋ ಸಾರಿ ತಿನ್ನೋಕೆ ಆಗದೇ ಅಮ್ಮ ನನಗೆ ಬೈದಿದ್ದಾರೆ. ನನಗೆ ಅಚರಣೆ ಬಗ್ಗೆ ಗೊತ್ತಿಲ್ಲ ಅಂದ್ರು ಅಮ್ಮ ಏನ್ ಹೇಳ್ತಾರೋ ಅದನ್ನೆಲ್ಲ ಮಾಡ್ತೀನಿ. ಅಡಿಗೆ ಮಾಡಲು ಸಹಾಯ ಮಾಡ್ತೀನಿ. ಹಬ್ಬ ಅಂದ್ರೆ ಅವತ್ತು ತುಂಬಾ ಫ್ರೀ ಆಗಿ ಇರ್ತೀನಿ. ಹೆಚ್ಚು ಹರಟೆ ಹೊಡಿತೀನಿ. ನಾನು ಪ್ರತಿನಿತ್ಯ ಹಿರಿಯರ ಆಶೀರ್ವಾದ ತೆಗೆದುಕೊಂಡೆ ಮನೆಯಿಂದ ಹೊರಗಡೆ ಹೋಗುವುದರಿಂದ ಯುಗಾದಿ ದಿನ ಏನ್ ಸ್ಪೆಷಲ್ಲಾಗಿ ಆಶೀರ್ವಾದ ಪಡೆಯಬೇಕು ಅಂತ ಅನಿಸಲ್ಲ.

ಶೃತಿ, ನಟಿ

ನಮ್ಮ ಫ್ಯಾಮಿಲಿ ಎಲ್ಲಾ ಒಟ್ಟಾಗಿ ಮಾಗಡಿ ಹತ್ತಿರ ಇರುವ ನಮ್ಮ ತೋಟದ ಮನೆಗೆ ಸೇರಿಕೊಳ್ಳುತ್ತೇವೆ. ಯಾಕಂದ್ರೆ ಸಿಟಿಯಲ್ಲಿ ಹಬ್ಬಗಳು ಮಾಯವಾಗಿವೆ ಅನಿಸುತ್ತೆ. ಹಬ್ಬದ ವಾತಾವರಣ ಅಂತಲೇ ಕಾಣಿಸೋದಿಲ್ಲ. ಅಲ್ಲದೇ ಅಷ್ಟೊಂದು ಭಾವನಾತ್ಮವಾಗಿ ಫೀಲ್ ಸಿಗೋದಿಲ್ಲ. ಹಳ್ಳಿಯೋರು ಮಾತ್ರ ಇಂದಿಗೂ ಒಂದು ಹಬ್ಬದ ಸಂಪ್ರದಾಯವನ್ನು ಸಹಜವಾಗಿಯೇ ಉಳಿಸಿಕೊಂಡಿದ್ದಾರೆ. ನಾನು, ನನ್ನ ತಂಗಿ, ನಮ್ ಅಣ್ಣ 'ಯುಗಾದಿ'ಗೆ ಒಟ್ಟಿಗೆ ಸೇರೋಣ ಅಂತ ತೋಟದ ಮನೆಗೆ ಹೋಗ್ತೀವಿ. ಅಲ್ಲಿ ಈಗ್ಲೂ ಸಹ ನಮ್ಮ ಅಮ್ಮನೇ ವಿಶೇಷವಾಗಿ ಬೇವು-ಬೆಲ್ಲ ಮಿಶ್ರಣ ಮಾಡಿ ನಮಗೆ ತಿನ್ನಲು ಕೊಡೋದು.

ಸಂಜನಾ ಗರ್ಲಾನಿ, ನಟಿ

-ನಾನು ರಿಲೇಷನ್ ಗಳಿಗೆಲ್ಲಾ ಹಬ್ಬಕ್ಕೆ ಅಹ್ವಾನ ಮಾಡಿದ್ದೀನಿ. ಆದ್ರೆ ಅರ್ಧದಿನ ಮನೆಯಲ್ಲಿ, ಇನ್ನರ್ಧ ದಿನ ನಮ್ಮ ಕೋರಮಂಗಲದಲ್ಲಿರುವ 'ಅಕ್ಷರ್ ಪವರ್ ಯೋಗ ಅಕಾಡೆಮಿ'ಯಲ್ಲಿ ನಮ್ಮ ಎಲ್ಲಾ ಸದಸ್ಯರು, ಕ್ಲೈಂಟ್ಸ್ ಜೊತೆ ಹಬ್ಬ ಆಚರಣೆ ಮಾಡ್ತೀನಿ. ಇನ್ನೊಂದು ವಿಶೇಷ ಅಂದ್ರೆ ಯುಗಾದಿ ಹಬ್ಬದ ಪ್ರಯುಕ್ತ ಮಾರ್ಚ್ 28, 29, 30 ನೇ ತಾರೀಖು ಮೂರು ದಿನಗಳ ಕಾಲ ನಮ್ಮ ಯೋಗ ಅಕಾಡೆಮಿಯಲ್ಲಿ ಉಚಿತ ಯೋಗ
ತರಬೇತಿ ನೀಡಲಾಗುತ್ತದೆ. ಯಾರು ಬೇಕಾದರೂ ಬರಬಹುದು. ಇದು 'ಯುಗಾದಿ'ಗೆ ನನ್ನ ಕೊಡುಗೆ.

ವಿಳಾಸ: ಅಕ್ಷರ್ ಪವರ್ ಯೋಗ ಆಕಾಡೆಮಿ, ಕೋರಮಂಗಲ ಬ್ರ್ಯಾಂಚ್ -ಕಾನ್ಫಿಡೆಂಟ್ ಅಕ್ವಿಲ, #32, ಸ್ಟಾಗ್ ಎಕ್ಸ್ ಟೆನ್ಶನ್, ಮಹಾರಾಜ ಹೋಟೆಲ್, ಕೋರಮಂಗಲ. ಸಂಪರ್ಕಿಸಿ-08041162479

ಇಂದ್ರಜಿತ್ ಲಂಕೇಶ್, ನಿರ್ದೇಶಕ

- ಜೀವನದಲ್ಲಿ ಸಿಹಿ ಮತ್ತು ಕಹಿ ಅನ್ನೋದು ಸಮವಾಗಿ ಇರಲಿ ಅಂತ ಯುಗಾದಿಯಲ್ಲಿ ಬೇವು-ಬೆಲ್ಲ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮಿಶ್ರಣ ಮಾಡಿ ತಿನ್ನುತ್ತಾರೆ. ಯುಗಾದಿ ಅಂದ್ರೆ ನಮಗೆ ತುಂಬಾ ವಿಶೇಷ. ಯಾಕಂದ್ರೆ ನಮ್ಮ ಅಕ್ಕನ ಕುಟುಂಬ, ಅಣ್ಣನ ಕುಟುಂಬ, ನಮ್ಮ ಹೆಂಡತಿ ಮನೆಯವರ ಕುಟುಂಬ ಎಲ್ಲರೂ ಒಂದು ಕಡೆ ಸೇರಿ ಹಬ್ಬ ಆಚರಣೆ ಮಾಡ್ತೀವಿ. ಮಕ್ಕಳಿಗೆ ಎರಡು ದಿನ ರಜೆ ಹಾಕಿಸಿ ಹಬ್ಬದ ವಾತಾವರಣವನ್ನು ಎಂಜಾಯ್ ಮಾಡ್ತೀವಿ. ಯಾಕಂದ್ರೆ ಮಕ್ಕಳಿಗೂ ಸಂಸ್ಕೃತಿ, ಸಂಸ್ಕಾರ ಅನ್ನೋದು ಗೊತ್ತಾಗಬೇಕು.

ರಮೇಶ್ ಅರವಿಂದ್. ನಟ, ನಿರ್ದೇಶಕ

-ನಮ್ಮ ಮನೆ ಎಲ್ಲಾ ಹಬ್ಬ ಆಚರಣೆಗಳು ಸಿಂಪಲ್ಲಾಗೆ ಆಗೋದು. ಆದ್ರೆ ಯುಗಾದಿ ಕಾನ್ಸೆಪ್ಟ್ ತುಂಬಾ ಇಷ್ಟಾ. ಯಾಕಂದ್ರೆ ಬರಿ ಬೆಲ್ಲ(ಸಿಹಿ)ನೇ ಅಲ್ಲಾ ಜೀವನ, ಬರೀ ಬೇವು(ಕಹಿ) ಅಲ್ಲಾ ಜೀವನ. ಇವೆರಡರ ಮಿಶ್ರಣವೇ ಜೀವನ. ಯಾರದ್ರು ಲೈಫ್ ಅಂದ್ರೆ ಏನು ಅಂತ ಕೇಳಿದ್ರೆ ಬೇವು-ಬೆಲ್ಲ ಅಂತ ಹೇಳಿಬಿಡಬಹುದು. ಇದನ್ನ ಪ್ರತಿದಿನ ನೆನಸಿಕೊಳ್ಳಿ ಅಂತ ವರ್ಷದ ಮೊದಲು ಹೇಳ್ತಾರೆ ಅಷ್ಟೇ.

ತಾರಾ ನಟಿ.

- ನಮಗೆ ಯುಗಾದಿ ಹಬ್ಬ ಹೊಸ ವರ್ಷ. ಸಂಪ್ರದಾಯದಂತೆ ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ಮನೆಯಲ್ಲಿ ಪೂಜೆ ಮಾಡಿ ದೇವಸ್ಥಾನಕ್ಕೆ ಹೋಗ್ತೀವಿ. ಅಲ್ಲಿಂದ ಬಂದು ಬೇವು ಬೆಲ್ಲ, ಎಳೆ ಮಾವಿನ ಕಾಯಿ, ಬೇವಿನ ಹೂವು, ಹುಣಸೆ ಚಿಗುರು, ಜೇನು ತುಪ್ಪ ಎಲ್ಲಾ ಮಿಕ್ಸ್ ಮಾಡಿ ಪ್ರಸಾದ ತಯಾರು ಮಾಡಿ ಕುಟುಂಬದವರೆಲ್ಲಾ ಒಟ್ಟಿಗೆ ಕುಳಿತು ತಿನ್ನುತ್ತಾ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡ್ತೀವಿ. ನಂತರ ತಿರುಪತಿಗೆ ಹೋಗಿ ದೇವರ ದರ್ಶನ ಮಾಡಿ ಬರ್ತೀವಿ. ಹಬ್ಬದ ದಿನ ಮೊದಲೆಲ್ಲ ಪಗಡೆ, ಕುಂಟೆಪಿಲ್ಲೆ ಅಂತ ಹಾಡೋರು. ಆದರೆ ಈಗ ಅದೆಲ್ಲಾ ಆಡೋದಿಲ್ಲ. ಮಾರನೇ ದಿನ ವರ್ಷದೊಡ್ಕು ಅಂತ ನಾನ್ ವೆಜ್ ಮಾಡ್ತೀವಿ.

ಗುರುನಂದನ್, ನಟ

ನಾನು ಯುಗಾದಿ ಹಬ್ಬದ ದಿನ ಹೊರಗಡೆ ಎಲ್ಲೂ ಹೋಗೋದಿಲ್ಲ. ಫ್ಯಾಮಿಲಿ ಜೊತೆಯಲ್ಲೇ ಇದ್ದುಕೊಂಡು ಬೇವು-ಬೆಲ್ಲ ತಿಂದುಕೊಂಡು ಹಬ್ಬ ಆಚರಣೆ ಮಾಡ್ತೀನಿ. ಹಾಗೆ ಅಕ್ಕಪಕ್ಕದ ದೇವಸ್ಥಾನಕ್ಕೆ ಹೋಗೋದು ರೂಢಿ. ಆದ್ರೆ ನಮಗೆ ಪ್ರತಿದಿನ ಕೆಲಸ ಇದ್ರೆ ಅದೇ ಒಂದು ಹಬ್ಬ. ಆದ್ರೆ ದಿನನಿತ್ಯ ಬೇವು ಬೆಲ್ಲ ತಿನ್ನೊಲ್ಲ ಅಷ್ಟೇ.

English summary
Kannada Film industry's celebrities reveal plans for the festival that marks the auspicious start of the Hindu Religions new year.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada