»   » ತುಂಬಿದ ಸಭೆಯಲ್ಲಿ ಗಳಗಳನೆ ಅತ್ತ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ತುಂಬಿದ ಸಭೆಯಲ್ಲಿ ಗಳಗಳನೆ ಅತ್ತ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

Posted By:
Subscribe to Filmibeat Kannada

15 ಕೆ.ಜಿ ತೂಕ ಕಡಿಮೆ ಮಾಡಿಕೊಂಡು ಸಖತ್ ಸ್ಲಿಮ್ ಬ್ಯೂಟಿ ಆಗಿರುವ ಸ್ಯಾಂಡಲ್ ವುಡ್ ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರು ನಿನ್ನೆ ನಡೆದ ಸಮಾರಂಭವೊಂದರಲ್ಲಿ ಗಳಗಳನೆ ಅತ್ತಿದ್ದಾರೆ.

ನಿನ್ನೆ (ಮೇ 2) ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ರಾಗಿಣಿ ದ್ವಿವೇದಿ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ವೀರ ರಣಚಂಡಿ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.


ಈ ಕಾರ್ಯಕ್ರಮದಲ್ಲಿ ನಟಿ ರಾಗಿಣಿ ಅವರು ಮಾತನಾಡುತ್ತಾ-ಮಾತನಾಡುತ್ತಾ ಬಹಳ ಎಮೋಷನಲ್ ಆಗಿ ಅತ್ತೇ ಬಿಟ್ಟರು. ಇವರು ಒಂದೇ ಸಮನೆ ಕಣ್ಣೀರು ಹಾಕಿದ್ದನ್ನು ಕಂಡು ಅಲ್ಲಿ ನೆರೆದಿದ್ದವರು ಒಂದು ಕ್ಷಣ ಗಾಬರಿಯಾದರು.[ಮತ್ಸ್ಯಕನ್ಯೆ ರಾಗಿಣಿ ದ್ವಿವೇದಿ ಡೈವ್ ಹೊಡೆದಿದ್ದೆಲ್ಲಿ.?]


Here Is Why Ragini Dwivedi Broke Into Tears

ಅಷ್ಟಕ್ಕೂ ನಟಿ ರಾಗಿಣಿ ಅವರು ಕಣ್ಣೀರು ಹಾಕಲು ಅಸಲು ಕಾರಣ ಏನು ಅಂತ ಗೊತ್ತಿಲ್ಲ. ರಾಗಿಣಿ ಅವರು ಬಹಳ ಆಸೆಪಟ್ಟು ಕನ್ನಡ ಚಿತ್ರರಂಗದ ಎಲ್ಲಾ ತಲೆಮಾರಿನ ಜನಪ್ರಿಯ ನಟಿಯರನ್ನು ಸಮಾರಂಭಕ್ಕೆ ಕರೆಸಿ ಅವರ ಕೈಯಲ್ಲಿ ಬಹು ನಿರೀಕ್ಷೆಯ ಆಡಿಯೋ ಬಿಡುಗಡೆ ಮಾಡಿಸಲು ಯೋಜನೆ ಹಾಕಿಕೊಂಡಿದ್ದರು.


ಅದಕ್ಕೆ ಸರಿಯಾಗಿ ಅವರು ಅವರೆಲ್ಲರಿಗೂ ಖುದ್ದಾಗಿ ತಾವೇ ಫೋನ್ ಮಾಡಿ ಆಮಂತ್ರಣ ನೀಡಿದ್ದರು. ಅವರು ಕೂಡ ಬರುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಕಾರ್ಯಕ್ರಮಕ್ಕೆ ಬಂದಿದ್ದು ಕೇವಲ ನಟಿ ಭಾವನಾ, ನಟಿ ರಮ್ಯಾ ಬಾರ್ನಾ ಮತ್ತು ವಿಜಯಲಕ್ಷ್ಮಿ ಸಿಂಗ್ ಮಾತ್ರ.[ಬಿಡುವಿನ ವೇಳೆ ಚಿತ್ರಕಲೆ ಮಾಡಲು ರಾಗಿಣಿಗೆ ಇವರೇ ಸ್ಫೂರ್ತಿ]


Here Is Why Ragini Dwivedi Broke Into Tears

ಇದರಿಂದ ಬೇಸರಗೊಂಡ ನಟಿ ರಾಗಿಣಿ ಅವರು ಮಾತನಾಡುತ್ತಾ, ಕಣ್ಣೀರು ಹಾಕಿದರೂ ಜೊತೆಗೆ ಇದೇ ಸಂದರ್ಭದಲ್ಲಿ ತಮ್ಮ ಸಿನಿ ಜೀವನವನ್ನು ನೆನೆಸಿಕೊಂಡು, ತಾವು ಬೆಳೆದು ಬಂದ ದಾರಿಯನ್ನು ಹೇಳುತ್ತಾ ಕಣ್ಣೀರು ಸುರಿಸಿದರು.[ವಾವ್.! ರಾಗಿಣಿ ಸಖತ್ ಸ್ಲಿಮ್ ಬ್ಯೂಟಿ ಆದ್ರು ಕಣ್ರೀ]


ಇದೀಗ ಇವರು ನಟಿಸಿರುವ 'ವೀರ ರಣಚಂಡಿ' ಸಿನಿಮಾದಲ್ಲಿ ನಾಯಕಿಯೇ ಕೇಂದ್ರ ಬಿಂದುವಾಗಿದ್ದು, ಈ ಸಿನಿಮಾವನ್ನು ಸಾಕಷ್ಟು ರಿಸ್ಕ್ ತೆಗೆದುಕೊಂಡು ಮಾಡಿದ್ದಾರಂತೆ. ಒಟ್ನಲ್ಲಿ ಏನೋ ಬೇಸರ ಆಗಿಯೋ ಅಥವಾ ಆನಂದ ಭಾಷ್ಪ ಸುರಿಸಿದರೋ ಗೊತ್ತಿಲ್ಲ. ಒಟ್ನಲ್ಲಿ ತುಂಬಿದ ಸಭೆಯಲ್ಲಿ ಗ್ಲಾಮರ್ ಡಾಲ್ ಕಣ್ಣೀರು ಹಾಕಿದ್ದು ಮಾತ್ರ ಸತ್ಯ.

English summary
Talking at the audio launch of Veera Ranachandi, Ragini Dwivedi almost broke into tears and this left the guests present at the event, clueless, since nobody knew what was going through her mind.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada