»   » 'ಕುರುಕ್ಷೇತ್ರ'ದಲ್ಲಿ ದರ್ಶನ್ ಗೆ ನಾಯಕಿಯಾಗುವ ಚಾನ್ಸ್ ಯಾರಿಗೆ ಸಿಗುತ್ತೆ?

'ಕುರುಕ್ಷೇತ್ರ'ದಲ್ಲಿ ದರ್ಶನ್ ಗೆ ನಾಯಕಿಯಾಗುವ ಚಾನ್ಸ್ ಯಾರಿಗೆ ಸಿಗುತ್ತೆ?

Posted By:
Subscribe to Filmibeat Kannada

ದರ್ಶನ್ ಅಭಿನಯಿಸುತ್ತಿರುವ 'ಕುರುಕ್ಷೇತ್ರ' ಚಿತ್ರದಲ್ಲಿ ಬಹುತೇಕ ಎಲ್ಲ ಪಾತ್ರಗಳು ಅಂತಿಮವಾಗಿದೆ. ಈಗಾಗಲೇ ಇಡೀ ಚಿತ್ರತಂಡ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಮಾಡುತ್ತಿದೆ. ಆದ್ರೆ, 'ಕುರುಕ್ಷೇತ್ರ'ದ ಒಂದು ಪಾತ್ರಕ್ಕೆ ಮಾತ್ರ ಇನ್ನು ಕಲಾವಿದರು ಸಿಕ್ಕಿಲ್ಲ.

ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್, ದುರ್ಯೋಧನ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ದುರ್ಯೋಧನ ದೃಷ್ಠಿಕೋನದಲ್ಲೇ ಇಡೀ ಸಿನಿಮಾ ಮೂಡಿಬರಲಿದೆ. ಹಾಗಿದ್ದ ಮೇಲೆ ದರ್ಶನ್ ಗೆ ನಾಯಕಿ ಒಬ್ಬರು ಬೇಕು ಅಲ್ಲವೇ? ಆ ನಾಯಕಿಯೇ ಇನ್ನು ಸಿಕ್ಕಿಲ್ಲ.

'ಕುರುಕ್ಷೇತ್ರ'ದಲ್ಲಿ ದುರ್ಯೋಧನನಿಗೆ ಜೋಡಿ ಯಾರು? ಈ ಪಾತ್ರವನ್ನ ಯಾರು ನಿಭಾಯಿಸಲಿದ್ದಾರೆ? ಮುಂದೆ ಓದಿ....

'ಭಾನುಮತಿ' ಸಿಕ್ಕಿಲ್ಲ

ಭಾನುಮತಿ, ದುರ್ಯೋಧನನ ಪತ್ನಿ. ಶ್ರೀ ಕೃಷ್ಣನ ಪರಮ ಭಕ್ತೆ. ದುರ್ಯೋಧನ ಪತ್ನಿ ಭಾನುಮತಿ ಪಾತ್ರಕ್ಕೆ ಇನ್ನೂ ಯಾವ ನಟಿಯೂ ಆಯ್ಕೆ ಆಗಿಲ್ಲ.

ಕುರುಕ್ಷೇತ್ರದಲ್ಲಿ ದರ್ಶನ್ ದುರ್ಯೋಧನನ 'ಗದೆ' ಎಷ್ಟು ಕೆಜಿ ಇದೆ?

ರೆಜಿನಾ ಹೆಸರು ಕೇಳಿಬಂದಿತ್ತು

ಭಾನುಮತಿ ಪಾತ್ರದಲ್ಲಿ ಬಹುಭಾಷಾ ನಟಿ ರೆಜಿನಾ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಈ ಹಿಂದೆ ಕೇಳಿ ಬಂದಿತ್ತು. ಆದ್ರೆ, ಅದು ಅಂತಿಮವಾಗಿಲ್ಲ.

ಕೊನೆಗೂ 'ಕುರುಕ್ಷೇತ್ರ' ಚಿತ್ರಕ್ಕೆ ನಾಯಕಿಯಾದ ಪರಭಾಷಾ ನಟಿ..!

ದರ್ಶನ್ ನಾಯಕಿಯ ಹುಡುಕಾಟ

ಹೀಗಾಗಿ, ದುರ್ಯೋಧನ ದರ್ಶನ್ ಗೆ ನಾಯಕಿಯನ್ನಾಗಿ ಯಾರನ್ನ ಕರೆ ತರಬೇಕು ಎಂದು ಯೋಚಿಸುತ್ತಾ ಚಿತ್ರತಂಡ ಹುಡುಕಾಟ ನಡೆಸುತ್ತಿದೆ. ಮೂಲಗಳ ಪ್ರಕಾರ ಕನ್ನಡದ ನಟಿಯನ್ನ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದ್ರೆ, ಅಧಿಕೃತವಾಗುವರೆಗೂ ಕುತೂಹಲ ಹಾಗೆ ಇರುತ್ತೆ.

'ದುರ್ಯೋಧನ' ಪಾತ್ರದ ಬಗ್ಗೆ ಜಗ್ಗೇಶ್ ಏನಂದ್ರು ನೋಡಿ?

ನಾಯಕಿ ಬಗ್ಗೆ ದರ್ಶನ್ ಏನಂದ್ರು?

ಇತ್ತೀಚೆಗಷ್ಟೇ ನಟ ದರ್ಶನ್ ಅವರು ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ನಾಯಕಿ ಬಗ್ಗೆ ಮಾತನಾಡಿದ ದರ್ಶನ್ ''ನನಗೆ ನಾಯಕಿ ಅವರೇ ಬೇಕು, ಇವರೇ ಬೇಕು ಎನ್ನುವುದಿಲ್ಲ, ಒಂದು ಮುದ್ದು ಕೋತಿ ಮರಿ ತಂದು ಇದೇ ಹೀರೋಯಿನ್ ಅಂದ್ರು ನಾನು ಮುದ್ದಾಡುತ್ತೇನೆ'' ಎಂದಿದ್ದರು.

ನೋಡೋಣ ಯಾರಿಗೆ ಒಲಿಯಲಿದೆ ಅದೃಷ್ಟ!

ಕನ್ನಡ ಪ್ರೇಕ್ಷಕರು ಕೂಡ ಭಾನುಮತಿ ಪಾತ್ರವನ್ನ ಅವರು ನಿರ್ವಹಿಸಲಿ, ಇವರು ಮಾಡಲಿ ಎಂಬ ಆಶಯವನ್ನ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ, ಅಂತಿಮವಾಗಿ ದುರ್ಯೋಧನನ ರಾಣಿ ಯಾರಾಗ್ತಾರೆ ಎಂಬುದನ್ನ ಕಾದು ನೋಡೋಣ.

English summary
Heroine has not yet been finalised for Darshan starrer 'Kurukshetra'. The Movie directed by Naganna and produced by Munirathna.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada