ರಕ್ಷಿತ್ ಶೆಟ್ಟಿಗೆ ನೀವು ಹೀರೋಯಿನ್ ಆಗಬಹುದು.!

By Bharath Kumar

ನೀವು ಸಿನಿಮಾದಲ್ಲಿ ನಟಿಸಬೇಕು ಅಂದುಕೊಂಡಿದ್ದೀರಾ...ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಂದ್ರೆ ನಿಮಗೆ ಇಷ್ಟನಾ....ರಕ್ಷಿತ್ ಶೆಟ್ಟಿ ಜೊತೆ ನಟಿಸುವ ಅವಕಾಶಕ್ಕಾಗಿ ಕಾಯುತ್ತಿದ್ದೀರಾ....ಹಾಗಂದ್ರೆ ಈಗೊಂದು ಒಳ್ಳೆಯ ಸಮಯ ಬಂದಿದೆ ನೋಡಿ. ರಕ್ಷಿತ್ ಶೆಟ್ಟಿಗೆ ನಾಯಕಿ ಬೇಕಾಗಿದ್ದಾರೆ ಎಂದು ನಿರ್ಮಾಪಕರು ಕೇಳುತ್ತಿದ್ದಾರೆ.

ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಲಿರುವ 'ಚಾರ್ಲಿ 777' ಚಿತ್ರದಲ್ಲಿ ನಾಯಕಿಯಾಗಲು ಹೊಸ ನಟಿಯಯನ್ನ ಹುಡುಕುತ್ತಿದ್ದು, ನಿಮ್ಮಲ್ಲಿ ಆಸಕ್ತಿ ಇದ್ದರೇ ಪ್ರಯತ್ನ ಪಡಬಹುದು. [email protected] ಈ ಮೇಲ್ ನಲ್ಲಿ ಚಿತ್ರತಂಡವನ್ನ ಸಂಪರ್ಕಿಸಬಹುದು.

ಅಂದ್ಹಾಗೆ, ಈ ಚಿತ್ರವನ್ನ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿದ್ದು, ಅವರೇ ತಮ್ಮ ಫೇಸ್ ಬುಕ್ ನಲ್ಲಿ ನಾಯಕಿ ಪಾತ್ರಕ್ಕಾಗಿ ಆಹ್ವಾನ ನೀಡಿದ್ದಾರೆ.

'777 ಚಾರ್ಲಿ' ಸಿನಿಮಾ ಶ್ವಾನ ಮತ್ತು ಮನುಷ್ಯನ ಬಾಂಡಿಂಗ್ ಹೇಳುವಂತಹ ಕಥೆಯನ್ನು ಹೊಂದಿದೆ. ಚಿತ್ರದಲ್ಲಿ ಶ್ವಾನದ ಹೆಸರು ಚಾರ್ಲಿ ಆಗಿದ್ದು, ಶ್ವಾನದ ಲೈಸನ್ಸ್ ನಂಬರ್ 777 ಅಂತೆ. ಹೀಗಾಗಿ ಚಿತ್ರಕ್ಕೆ '777 ಚಾರ್ಲಿ' ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ.

ಈ ಮೊದಲು ಈ ಚಿತ್ರದಲ್ಲಿ 'ಕಿರಿಕ್ ಪಾರ್ಟಿ' ಖ್ಯಾತಿಯ ಅರವಿಂದ್ ಅಯ್ಯರ್ ನಾಯಕನಾಗಿದ್ರು. ನಂತರ ಆ ಜಾಗಕ್ಕೆ ರಕ್ಷಿತ್ ಶೆಟ್ಟಿ ಬಂದ್ರು. ಇನ್ನು ರಕ್ಷಿತ್ ಶೆಟ್ಟಿ ಜೊತೆ ಕೆಲಸ ಮಾಡಿರುವ ಕಿರಣ್ ರಾಜ್‌ ಎಂಬುವವರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್‌ಗೆ ಪರಿಚಿತವಾಗುತ್ತಿದ್ದಾರೆ.

More from Filmibeat

English summary
Producer Pushkara Mallikarjunaiah serching heroine for Rakshith shetty starrer New movie Charlie 777. the movie directed by kiran raj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X