For Quick Alerts
  ALLOW NOTIFICATIONS  
  For Daily Alerts

  'ಮದಗಜ' ಚಿತ್ರಕ್ಕಾಗಿ ಬಂದ್ರು ಸ್ಟಾರ್ ನಟಿ, ಸದ್ದು ಮಾಡ್ತಿದೆ ಫಸ್ಟ್ ಲುಕ್!

  |

  ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ಈಗಾಗಲೆ ಟೈಟಲ್ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಸಿನಿಮಾ ಅನೌನ್ಸ್ ಆಗಿ ತಿಂಗಳುಗಳೆ ಆಗಿದೆ. ಆದರೆ ಇನ್ನು ಚಿತ್ರೀಕರಣ ಪ್ರಾರಂಭವಾಗಿಲ್ಲ ಎನ್ನುವುದು ಅಭಿಮಾನಿಗಳ ಬೇಸರ. ಆದರೆ ಮದಗಜ ಸಿನಿಮಾ ಇದೆ ತಿಂಗಳಿಂದ ಚಿತ್ರೀಕರಣಕ್ಕೆ ಹೊರಡಲಿದೆ.

  ಈಗಾಗಲೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುವ ಚಿತ್ರತಂಡ ಈಗ ನಾಯಕಿಯ ಆಯ್ಕೆ ಮಾಡಿದೆ. ಜೊತೆಗೆ ನಾಕಿಯ ಪೋಸ್ಟರ್ ಅನ್ನು ರಿಲೀಸ್ ಮಾಡಿ ಕುತೂಹಲ ಮತ್ತಷ್ಟು ಹೆಚ್ಚಿಸದೆ. ಈ ನಾಯಕಿ ಯಾರೆಂದು ಗುರುತಿಸಬೇಕೆಂದು ಚಿತ್ರತಂಡ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದೆ. ಶ್ರೀಮುರಳಿ ಜೊತೆ ರೋಮ್ಯಾನ್ಸ್ ಮಾಡುವ ಆ ಸುಂದರಿ ಯಾರೆಂದು ಕುತೂಹಲದಿಂದ ಗುರುತಿಸುತ್ತಿದ್ದಾರೆ.

  ಶ್ರೀಮುರಳಿ 'ಮದಗಜ' ಸಿನಿಮಾದ ಟೈಟಲ್ ಬದಲಾವಣೆಶ್ರೀಮುರಳಿ 'ಮದಗಜ' ಸಿನಿಮಾದ ಟೈಟಲ್ ಬದಲಾವಣೆ

   ಗಮನ ಸೆಳೆಯುತ್ತಿದೆ ಪೋಸ್ಟರ್

  ಗಮನ ಸೆಳೆಯುತ್ತಿದೆ ಪೋಸ್ಟರ್

  ಮದಗಜ ಚಿತ್ರದ ನಾಯಕಿಯ ಮೊದಲ ಫೋಸ್ಟರ್ ರಿಲೀಸ್ ಮಾಡಲಾಗಿದೆ. ಆದರೆ ಈ ಪೋಸ್ಟರ್ ನಲ್ಲಿ ನಾಯಕಿ ಯಾರೆಂಬುದು ಗುರುತು ಸಿಗುವುದಿಲ್ಲ. ತಿರುಗಿ ನಿಂತಿರುವ ನಟಿಯ ಫೋಟೋ ಇದಾಗಿದೆ. ಸೀರೆಯಲ್ಲಿ ಮಿಂಚಿರುವ ಈ ಸುಂದರಿ ಉದ್ದ ಜಡೆ ಹಾಕಿ ಹೂ ಮುಡಿದು ನಿಂತಿದ್ದಾರೆ. ಈ ಪೋಸ್ಟರ್ ನೋಡಿ ಯಾರೆಂದು ಗುರುತಿಸಿ ಎಂದು ಚಿತ್ರತಂಡ ಹೇಳಿದೆ.

   ಯಾರಿರಬಹುದು?

  ಯಾರಿರಬಹುದು?

  ಈ ಫೋಸ್ಟರ್ ನೋಡಿ ಸಾಕಷ್ಟು ಮಂದಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ಪಕ್ಕಾ ಆಶಿಕಾ ರಂಗನಾಥ್ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ದೀಪಾ ಸನ್ನಿಧಿ ಎಂದರೆ, ಕೆಲವರು ತೆಲುಗು ನಟಿಯರಾದ ಸಮಂತಾ, ಕೀರ್ತಿ ಸುರೇಶ್ ಎಂದೆಲ್ಲ ಹೇಳುತ್ತಿದ್ದಾರೆ. ಆದರೆ ಬಹುತೇಕರು ಆಶಿಕಾ ರಂಗನಾಥ್ ಮತ್ತು ಶಾನ್ವಿ ಶ್ರೀವಾತ್ಸವ್ ಇರಬಹುದು ಎಂದು ಕಮೆಂಟ್ ಮಾಡುತ್ತಿದ್ದಾರೆ.

  'ಮದಗಜ' ಟೈಟಲ್ ಅಧಿಕೃತ: ಸಂಕ್ರಾಂತಿಗೆ ಮುಹೂರ್ತ'ಮದಗಜ' ಟೈಟಲ್ ಅಧಿಕೃತ: ಸಂಕ್ರಾಂತಿಗೆ ಮುಹೂರ್ತ

   ನಾಯಕಿ ಬಗ್ಗೆ ನಾಳೆ ರಿವೀಲ್

  ನಾಯಕಿ ಬಗ್ಗೆ ನಾಳೆ ರಿವೀಲ್

  ಶ್ರೀಮುರಳಿ ಜೊತೆ ರೋಮ್ಯಾನ್ಸ್ ಮಾಡಲಿರುವ ಸುಂದರಿ ಯಾರು ಎಂದು ಚಿತ್ರತಂಡ ನಾಳೆ ರಿವೀಲ್ ಮಾಡಲಿದೆ. ವಿಶೇಷ ಅಂದರೆ ಫೆಬ್ರವರಿ 14 ಪ್ರೇಮಿಗಳ ದಿನಾಚರಣೆಯ ದಿನವೆ ನಾಯಕಿಯ ಫೋಟೋ ರಿವೀಲ್ ಆಗಲಿದೆ.

   ವಿಶೇಷ ದಿನದಂದು ಮುಹೂರ್ತ

  ವಿಶೇಷ ದಿನದಂದು ಮುಹೂರ್ತ

  ಮದಗಜ ಸಿನಿಮಾ ಇದೆ ತಿಂಗಳು 21ಕ್ಕೆ ಅಂದರೆ ಶಿವರಾತ್ರಿಯ ದಿನ ಸೆಟ್ಟೇರಲಿದೆ. ಫೆಬ್ರವರಿ 21ಕ್ಕೆ ಮುಹೂರ್ತ ಆಗುತ್ತಿದ್ದಂತೆ ಚಿತ್ರೀಕರಣಕ್ಕೆ ಹೊರಡಲಿದೆ ಮದಗಜ ಟೀಂ. ವಾರಣಾಸಿಯಲ್ಲಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಸದ್ಯ ಶ್ರೀಮುರಳಿ ಬಿಟ್ಟರೆ ಚಿತ್ರಕ್ಕೆ ಉಳಿದ ಕಲಾವಿದರು ಮತ್ತು ತಂತ್ರಜ್ಞರು ಫೈನಲ್ ಆಗಿಲ್ಲ.

  ಶ್ರೀಮುರಳಿ ಮುಂದಿನ ಸಿನಿಮಾಗೆ ಮುಹೂರ್ತ ಫಿಕ್ಸ್: ವಿಶೇಷ ದಿನ ಸೆಟ್ಟೇರಲಿದೆ ಸಿನಿಮಾಶ್ರೀಮುರಳಿ ಮುಂದಿನ ಸಿನಿಮಾಗೆ ಮುಹೂರ್ತ ಫಿಕ್ಸ್: ವಿಶೇಷ ದಿನ ಸೆಟ್ಟೇರಲಿದೆ ಸಿನಿಮಾ

   ಅಯೋಗ್ಯ ಖ್ಯಾತಿಯ ಮಹೇಶ್ ನಿರ್ದೇಶನ

  ಅಯೋಗ್ಯ ಖ್ಯಾತಿಯ ಮಹೇಶ್ ನಿರ್ದೇಶನ

  ಆಯೋಗ್ಯ ಖ್ಯಾತಿಯ ಮಹೇಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ಮಾಪಕ ಉಮಾಪತಿ ಬಂಡವಾಳ ಹೂಡುತ್ತಿದ್ದಾರೆ. ಟೈಟಲ್ ಮೂಲಕವೆ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ.

  English summary
  The Heroine has been selected for Kannada Actor Srimurali starrer Madagaja movie. This movie is directed by Mahesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X