For Quick Alerts
  ALLOW NOTIFICATIONS  
  For Daily Alerts

  ಲಕ್ಷ್ಮೀ ರೈ 'ಝಾನ್ಸಿ' ಚಿತ್ರದ ಡಬ್ಬಿಂಗ್ ರೈಟ್ಸ್ ಗೆ ಭಾರಿ ಡಿಮ್ಯಾಂಡ್

  |

  ಬಹುಭಾಷ ನಟಿ ಲಕ್ಷ್ಮೀ ರೈ ಅಭಿನಯದ ಕನ್ನಡದ ಬಹು ನಿರೀಕ್ಷೆಯ ಝಾನ್ಸಿ ಚಿತ್ರ ರಿಲೀಸ್ ಗೆ ರೆಡಿಯಾಗುತ್ತಿದೆ. ಈಗಾಗಲೆ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ 'ಝಾನ್ಸಿ' ಸಧ್ಯದಲ್ಲೆ ತೆರೆಗೆ ಬರಲಿದೆ. ಸದ್ಯ ಡಬ್ಬಿಂಗ್ ಕೆಲಸದಲ್ಲಿ ಬ್ಯುಸಿಯಾಗಿರುವ 'ಝಾನ್ಸಿ' ಚಿತ್ರದ ಬೇರೆ ಭಾಷೆಯ ಡಬ್ಬಿಂಗ್ ರೈಟ್ಸ್ ಗೆ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

  ಈಗಾಗಲೆ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ಮಾರಾಟ ಆಗಿದ್ಯಂತೆ. ಆದ್ರೀಗ ದಕ್ಷಿಣ ಭಾರತೀಯ ಭಾಷೆಗಳಿಗೆ 'ಜಾನ್ಸಿ' ಚಿತ್ರ ಡಬ್ ಮಾಡಲು ಭಾರಿ ಮೊತ್ತಕ್ಕೆ ಡಬ್ಬಿಂಗ್ ಹಕ್ಕನ್ನು ಕೇಳುತ್ತಿದ್ದಾರೆ ಎನ್ನುವ ಮಾತುಗಳು ಚಿತ್ರತಂಡದ ಕಡೆಯಿಂದ ಕೇಳಿ ಬರುತ್ತಿದೆ. ಅಂದ್ಮೇಲೆ ಕನ್ನಡದ 'ಝಾನ್ಸಿ' ತಮಿಳು ಮತ್ತು ತೆಲುಗು ಚಿತ್ರರಂಗದಲ್ಲು ಅಬ್ಬರಿಸಲಿದೆ.

  ಹಬ್ಬಕ್ಕೆ ಮೊದಲೇ ಗಣೇಶನ ಮುಂದೆ ಟಂಪಾಗುಚ್ಚಿ ಸ್ಟೆಪ್ಸ್ ಹಾಕಿದ ಲಕ್ಷ್ಮಿ ರೈ ಹಬ್ಬಕ್ಕೆ ಮೊದಲೇ ಗಣೇಶನ ಮುಂದೆ ಟಂಪಾಗುಚ್ಚಿ ಸ್ಟೆಪ್ಸ್ ಹಾಕಿದ ಲಕ್ಷ್ಮಿ ರೈ

  ಅಂದ್ಹಾಗೆ 'ಝಾನ್ಸಿ' ಚಿತ್ರದಲ್ಲಿ ಲಕ್ಷ್ಮೀ ರೈ ಐಪಿಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು ಚಿತ್ರದಲ್ಲಿ ಸಾಕಷ್ಟು ಆಕ್ಷನ್ ದೃಶ್ಯಗಳು ಇದೆಯಂತೆ. ಹೈ ವೋಲ್ಟೇಜ್ ಫೈಟಿಂಗ್ ದೃಶ್ಯಗಳಲ್ಲಿ ನಟಿ ಲಕ್ಷ್ಮೀ ರೈ ಮಿಂಚಿದ್ದಾರೆ. ಚಿತ್ರಕ್ಕೆ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ.

  'ಝಾನ್ಸಿ' ಪಿ.ವಿ.ಆರ್ ಗುರುಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಈ ಮೊದಲು 'ಮರಿಯಾದೆ ರಾಮಣ್ಣ' ಚಿತ್ರ ನಿರ್ದೇಶನ ಮಾಡಿದ್ದ ಗುರುಪ್ರಸಾದ್ ಅನೇಕ ವರ್ಷಗಳ ಬಳಿಕ 'ಝಾನ್ಸಿ' ಚಿತ್ರದ ಮೂಲಕ ನಿರ್ದೇಶನಕ್ಕೆ ವಾಪಸ್ ಆಗಿದ್ದಾರೆ. ಇನ್ನು ನಟಿ ಲಕ್ಷ್ಮೀ ರೈ ಕೂಡ ಅನೇಕ ವರ್ಷಗಳ ಬಳಿಕ ಕನ್ನಡ ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 2012ರಲ್ಲಿ ರಿಲೀಸ್ ಆಗಿದ್ದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಕಲ್ಪನಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಲಕ್ಷ್ಮೀ ಈಗ 'ಝಾನ್ಸಿ' ಅವತಾರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

  English summary
  High demand for Kannada movie 'Jhansi', to be dubbed in other languages. Multilingual actress Lakshmi Rai starrer 'Jhansi' Kannada movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X