»   » ಕಲೆಕ್ಷನ್ ವಿಚಾರದಲ್ಲಿ ಗೊಂದಲ: 'ಮುಂಗಾರು ಮಳೆ' ವರ್ಸಸ್ 'ರಾಜಕುಮಾರ'!

ಕಲೆಕ್ಷನ್ ವಿಚಾರದಲ್ಲಿ ಗೊಂದಲ: 'ಮುಂಗಾರು ಮಳೆ' ವರ್ಸಸ್ 'ರಾಜಕುಮಾರ'!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಇಂಡಸ್ಟ್ರಿ ಬೆಳೆಯುತ್ತಿದೆ. ಕನ್ನಡ ಚಿತ್ರಗಳು ಕನ್ನಡ ನೆಲದಲ್ಲಿ ಮಾತ್ರವಲ್ಲ, ಹೊರ ರಾಜ್ಯ, ಹೊರ ದೇಶಗಳಲ್ಲೂ ಮಿಂಚುತ್ತಿದೆ. ಆದ್ರೆ, ಕಲೆಕ್ಷನ್ ವಿಚಾರಕ್ಕೆ ಬಂದ್ರೆ, ಈಗಲೂ ಕನ್ನಡ ಚಿತ್ರಗಳಲ್ಲಿ ಸ್ವಷ್ಟತೆಯಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ.

ಹೌದು, ಇದುವರೆಗೂ ಕನ್ನಡದಲ್ಲಿ ಬೆರಳೆಣಿಕೆಯ ಚಿತ್ರಗಳು ಮಾತ್ರ ತಮ್ಮ ಚಿತ್ರಗಳ ಒಟ್ಟು ಕಲೆಕ್ಷನ್ ಬಹಿರಂಗ ಪಡಿಸಿ ದಾಖಲೆಯಾಗಿದ್ದವು. ಆದ್ರೀಗ ಎಲ್ಲ ಚಿತ್ರಗಳು ನಾವು ಅತಿ ಹೆಚ್ಚು, ನಾವು ಅತಿ ಹೆಚ್ಚು ಎಂದು ಪೈಪೋಟಿ ಬಿದ್ದಿವಿ. ಇದರಿಂದ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಗೊಂದಲ ಉಂಟಾಗಿದೆ. ಯಾರು ನಂಬರ್ ಒನ್ ಎಂಬುದು ದೊಡ್ಡ ಚರ್ಚೆಯಾಗಿದೆ.

ಹಾಗಾದ್ರೆ, ಕನ್ನಡದಲ್ಲಿ ಅತಿ ಹೆಚ್ಚು ಗಳಿಸಿರುವ ಸಿನಿಮಾಗಳು ಯಾವುದು ಅಂತ? ಮುಂದೆ ಓದಿ.....

ಆಲ್ ಟೈಮ್ ರೆಕಾರ್ಡ್ ಮಾಡಿದ 'ರಾಜಕುಮಾರ'

ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಎಲ್ಲ ದಾಖಲೆಗಳನ್ನ ಉಡೀಸ್ ಮಾಡಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಕನ್ನಡದ ಇತಿಹಾಸದಲ್ಲಿ 'ರಾಜಕುಮಾರ' ಅತಿ ಹೆಚ್ಚ ಗಳಿಕೆ ಕಂಡಿದೆಯಂತೆ.

60 ಕೋಟಿ ಗಳಿಸಿದ 'ರಾಜಕುಮಾರ'

ಮೊದಲ ವಾರಾಂತ್ಯದಲ್ಲಿ 30 ಕೋಟಿ ಗಡಿ ದಾಟಿದ್ದ 'ರಾಜಕುಮಾರ', ಈಗ 60 ಕೋಟಿ ಗಳಿಸಿದೆ ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ವಿಕಿಪೀಡಿಯದಲ್ಲಿ 'ರಾಜಕುಮಾರ' ಮೊದಲ ಸ್ಥಾನದಲ್ಲಿರುವ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

'ಮುಂಗಾರು ಮಳೆ'ನೇ ನಂಬರ್ ಒನ್!

ಆದ್ರೆ, ವಿಕಿಪೀಡಿಯದಲ್ಲಿ ಚೆಕ್ ಮಾಡಿದಾಗ ಈಗಲೂ ನಂಬರ್ ಒನ್ ಸ್ಥಾನದಲ್ಲಿ 'ಮುಂಗಾರು ಮಳೆ' ಚಿತ್ರವೇ ಇದೆ. ಅದರ ಒಟ್ಟು ಕಲೆಕ್ಷನ್ 75 ಕೋಟಿ ಎಂದು ವರದಿಯಾಗಿದೆ.

'ಮುಂಗಾರು ಮಳೆ' 75 ಕೋಟಿ ಗಳಿಸಿತ್ತಾ?

ಮೂಲಗಳ ಪ್ರಕಾರ ಮುಂಗಾರು ಮಳೆ ಸಿನಿಮಾ ಇದುವರೆಗೂ 50 ಕೋಟಿ ಗಳಿಸಿ ಕನ್ನಡದಲ್ಲಿ ಅತಿ ಹೆಚ್ಚು ಗಳಿಸಿದ ಸಿನಿಮಾ ಎಂದು ಗುರುತಿಸಿಕೊಂಡಿತ್ತು. ಆದ್ರೆ, ದಿಢೀರ್ ಎಂದು 75 ಕೋಟಿ ಕೆಲಕ್ಷನ್ ಯಾವಾಗ ಆಯಿತು ಎಂಬುದು ಕೂಡ ಕನ್ ಫ್ಯೂಶನ್ ಉಂಟು ಮಾಡಿದೆ.

'ಕಿರಿಕ್ ಪಾರ್ಟಿ' ಎರಡನೇ ಸ್ಥಾನ

ಸದ್ಯ, ಶತದಿನ ಪೂರೈಸಿ ಯಶಸ್ಸಿನಲ್ಲಿರುವ 'ಕಿರಿಕ್ ಪಾರ್ಟಿ' ಚಿತ್ರ 50 ದಿನ ಪೂರೈಸಿದ್ದಾಗಲೇ 40 ಕೋಟಿ ಗಳಿಸಿದೆ ಎಂದು ಚಿತ್ರದ ನಿರ್ಮಾಪಕರೇ ಬಹಿರಂಗ ಪಡಿಸಿದ್ದರು. ಆದ್ರೆ, ವಿಕಿಪೀಡಿಯ ದಾಖಲೆಯ ಪ್ರಕಾರ 'ಕಿರಿಕ್ ಪಾರ್ಟಿ' ಈಗ 50 ಕೋಟಿ ಗಳಿಸಿ ಎರಡನೇ ಸ್ಥಾನದಲ್ಲಿದೆ.['ಕಿರಿಕ್ ಪಾರ್ಟಿ' ಗಳಿಕೆಯಲ್ಲಿ ದಾಖಲೆ: ಕಲೆಕ್ಷನ್ ಗುಟ್ಟು ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ]

ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ 50 ಕೋಟಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರವೂ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿತ್ತು. ಇದರ ಪರಿಣಾಮ 50 ಕೋಟಿ ಕ್ಲಬ್ ನಲ್ಲಿ ಹೆಸರು ಪಡೆದುಕೊಂಡಿತ್ತು.

'ಹೆಬ್ಬುಲಿ' ಇಲ್ಲವೇ ಇಲ್ಲ!

'ಹೆಬ್ಬುಲಿ' ಚಿತ್ರದ ವಿತರಕರು ಹಾಗೂ ನಿರ್ಮಾಪಕರು ಹೇಳಿರುವ ಪ್ರಕಾರ 'ಹೆಬ್ಬುಲಿ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ 50 ಕೋಟಿ ಗಳಿಸಿದೆ. ಆದ್ರೆ, ವಿಕಿಪೀಡಿಯದಲ್ಲಿ 'ಹೆಬ್ಬುಲಿ' ಚಿತ್ರದ ಹೆಸರೇ ಇಲ್ಲ. ಇದು ಮತ್ತಷ್ಟು ಗೊಂದಲ ಸೃಷ್ಠಿಸಿದೆ.[ಕೊನೆಗೂ 'ಹೆಬ್ಬುಲಿ' ಒಟ್ಟು ಕಲೆಕ್ಷನ್ ಬಹಿರಂಗ: ಈ ಸಂಸ್ಕೃತಿ ಬಗ್ಗೆ ಸುದೀಪ್ ಬೇಸರ!]

ಟಾಪ್-10 ನಲ್ಲಿ ಯಾವ ಯಾವ ಚಿತ್ರಗಳಿವೆ?

ವಿಷ್ಣುವರ್ಧನ್ ಅಭಿನಯಿಸಿದ್ದ 'ಯಜಮಾನ' ಚಿತ್ರ 42 ಕೋಟಿ, ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' 40 ಕೋಟಿ, ಉಪೇಂದ್ರ ಅಭಿನಯದ 'ಉಪ್ಪಿ-2' 40 ಕೋಟಿ, ಪುನೀತ್ ಅಭಿನಯದ 'ದೊಡ್ಮನೆ ಹುಡ್ಗ' 35 ಕೋಟಿ, ಸುದೀಪ್ ಅಭಿನಯದ 'ಕೋಟಿಗೊಬ್ಬ-2 'ಮತ್ತು 'ಮಾಣಿಕ್ಯ' ಚಿತ್ರಗಳು ತಲಾ 35 ಕೋಟಿ ಗಳಿಸಿದೆ ಎಂಬುದು ವಿಕಿಪೀಡಿಯದಲ್ಲಿ ದಾಖಲಾಗಿದೆ.

ಯಾವುದು ಸುಳ್ಳು? ಯಾವುದು ನಿಜಾ?

ಇದು ಎಷ್ಟರ ಮಟ್ಟಿಗೆ ನಿಜಾ ಅಥವಾ ಸುಳ್ಳು ಎಂಬುದು ಗೊತ್ತಿಲ್ಲ. ಆದ್ರೆ, ಕನ್ನಡ ಸಿನಿಮಾಗಳ ಕಲೆಕ್ಷನ್ ವಿಚಾರಕ್ಕೆ ಬಂದ್ರೆ, ಅದೇಷ್ಟೋ ಜನ ವಿಕಿಪೀಡಿಯ ನೋಡಿ ಲೆಕ್ಕಾಚಾರ ಹಾಕುತ್ತಾರೆ. ಹೀಗಾಗಿ, ವಿಕಿಪೀಡಿಯ ರಿಪೋರ್ಟ್ ನಲ್ಲಿ ಎಷ್ಟು ಸರಿ ಎಂಬುದನ್ನ ಚಿತ್ರರಂಗದವರೇ ಹೇಳಬೇಕು.

English summary
According to Wikipedia, Highest Grossing Films All Time in Kannada Industry.
Please Wait while comments are loading...