twitter
    For Quick Alerts
    ALLOW NOTIFICATIONS  
    For Daily Alerts

    ಸ್ಟಾರ್ ನಟರಿಗಿಂತ ಹೆಚ್ಚಿದೆ 'ಅಮ್ಮ'ನ ಪಾತ್ರ ಮಾಡುವ ಇವರ ಸಂಭಾವನೆ!

    |

    ಒಂದು ಸಮಯದಲ್ಲಿ ಸ್ಟಾರ್ ಹೀರೋಯಿನ್ ಗಳಾಗಿ ಮೆರೆದ ನಟಿಯರು, ಕಾಲಕ್ರಮೇಣ ವಯಸ್ಸು ಆಗ್ತಿದ್ದಂತೆ ಕೆಲವರು ಇಂಡಸ್ಟ್ರಿಯಿಂದ ದೂರ ಆಗ್ತಾರೆ. ಇನ್ನು ಕೆಲವರು ಪೋಷಕ ನಟಿಯರಾಗಿ ಮುಂದುವರಿಯುತ್ತಾರೆ.

    ಸ್ಟಾರ್ ನಟ-ನಟಿಯರಿಗೆ ಅಮ್ಮನಾಗಿ, ಅಕ್ಕನಾಗಿ, ಅತ್ತೆಯಾಗಿ, ಅತ್ತಿಗೆಯಾಗಿ ನಟಿಸಲು ಬೇಡಿಕೆ ಉಳಿಸಿಕೊಂಡಿರುತ್ತಾರೆ. ಇಂತಹ ಪಾತ್ರಗಳಿಗೆ ಕೆಲವು ನಟಿಯರು ಫಿಕ್ಸ್ ಆಗಿಬಿಟ್ಟಿದ್ದಾರೆ. ಇದಕ್ಕೆ ಬಹುದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ ಈ ನಟಿಯರು.

    'ರೊಮ್ಯಾಂಟಿಕ್' ಸಿನಿಮಾದಲ್ಲಿ ನಟಿ ರಮ್ಯಾ ಕೃಷ್ಣ'ರೊಮ್ಯಾಂಟಿಕ್' ಸಿನಿಮಾದಲ್ಲಿ ನಟಿ ರಮ್ಯಾ ಕೃಷ್ಣ

    Recommended Video

    ಅ*ನ್..! ಅಕ್ಕ*..! ಇದು ಯಾಕೊ ಜಾಸ್ತಿ ಆಯ್ತು..? | FILMIBEAT KANNADA

    ನಟ, ನಟಿಯರು ಅಮ್ಮನ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಬೇಕು ಅಂದ್ರೆ ಈ ನಟಿಯರು ಕಾಲ್ ಶೀಟ್ ಬೇಕೆ ಬೇಕು ಎಂದು ಪಟ್ಟು ಹಿಡಿಯುತ್ತಾರೆ ನಿರ್ದೇಶಕ, ನಿರ್ಮಾಪಕರು. ಅದೇ ರೀತಿ, ಅಮ್ಮನ ಪಾತ್ರ ಮಾಡೋಕೆ ಈ ನಟಿಯರು ಪಡೆಯುವ ಸಂಭಾವನೆ ಕಡಿಮೆ ಅಂತೂ ಅಲ್ಲ. ದಿನದ ಲೆಕ್ಕದಲ್ಲಿ ಲಕ್ಷಾಂತರ ರೂಪಾಯಿ ಸಂಭಾವನೆಯಾಗಿ ಪಡೆಯುತ್ತಾರೆ. ಅಷ್ಟಕ್ಕೂ, ಸೌತ್ ಇಂಡಸ್ಟ್ರಿಯಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ಅಮ್ಮನ ಪಾತ್ರಧಾರಿ ಯಾರು? ಮುಂದೆ ಓದಿ....

    ರಮ್ಯಕೃಷ್ಣ ಸಂಭಾವನೆ ಎಷ್ಟು?

    ರಮ್ಯಕೃಷ್ಣ ಸಂಭಾವನೆ ಎಷ್ಟು?

    ಒಂದು ಸಮಯದಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ರಮ್ಯಕೃಷ್ಣ ಈಗ ಸೌತ್ ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ಪೋಷಕ ನಟಿ. ಬಾಹುಬಲಿ ಚಿತ್ರದ ಶಿವಗಾಮಿ ಪಾತ್ರ ಆದ ಬಳಿಕವಂತೂ ರಮ್ಯಕೃಷ್ಣ ಬೇಡಿಕೆ ಗಗನಕ್ಕೇರಿದೆ. ಮೂಲಗಳ ಪ್ರಕಾರ ರಮ್ಯಕೃಷ್ಣ ಅವರು ಒಂದು ದಿನಕ್ಕೆ 2 ರಿಂದ 3 ಲಕ್ಷ ಸಂಭಾವನೆ ಪಡೆಯುತ್ತಾರಂತೆ. ಕೆಲವು ಚಿತ್ರಗಳಿಗೆ ದಿನಕ್ಕೆ 6 ಲಕ್ಷ ಪಡೆದಿರುವುದಾಗಿಯೂ ಸುದ್ದಿಯಾಗಿದೆ.

    'ಅಂಜನಿಪುತ್ರ' ಸೆಟ್ ನಲ್ಲಿ ಕಾಣಿಸಿಕೊಂಡ ಶಿವಗಾಮಿ ರಮ್ಯ ಕೃಷ್ಣ'ಅಂಜನಿಪುತ್ರ' ಸೆಟ್ ನಲ್ಲಿ ಕಾಣಿಸಿಕೊಂಡ ಶಿವಗಾಮಿ ರಮ್ಯ ಕೃಷ್ಣ

    ರಮ್ಯಾ ಬಿಟ್ಟರೆ ನಾಧಿಯಾ

    ರಮ್ಯಾ ಬಿಟ್ಟರೆ ನಾಧಿಯಾ

    90ರ ದಶಕ ಟಾಪ್ ನಟಿ ನಾಧಿಯಾ ಈಗ ಸೌತ್ ಇಂಡಸ್ಟ್ರಿಯ ಬೇಡಿಕೆ ಪೋಷಕ ನಟಿ. ಅಮ್ಮ, ಅತ್ತೆ, ಅತ್ತಿಗೆ ಅಂತಹ ಪಾತ್ರಗಳಿಗೆ ಹೇಳಿ ಮಾಡಿಸಿದ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ನಾಧಿಯಾ ಅವರ ಸಂಭಾವನೆ ಒಂದು ದಿನಕ್ಕೆ 2 ಲಕ್ಷ ರೂಪಾಯಿವರೆಗೂ ಪಡೆಯುತ್ತಾರಂತೆ.

    ಹಿರಿಯ ನಟಿ ಜಯಸುಧಾ

    ಹಿರಿಯ ನಟಿ ಜಯಸುಧಾ

    ತೆಲುಗು ಮತ್ತು ತಮಿಳಿನಲ್ಲಿ ಹೆಚ್ಚು ಗುರುತಿಸಿಕೊಂಡಿರುವ ನಟಿ ಜಯಸುಧಾ ಅವರು, ಒಂದು ಚಿತ್ರಕ್ಕೆ 2 ಲಕ್ಷದವರೆಗೂ ಚಾರ್ಜ್ ಮಾಡ್ತಾರಂತೆ. ಮೊದಲ ಹತ್ತು ದಿನದವರೆಗೂ 20 ಲಕ್ಷ ಸಂಭಾವನೆ ಪಡೆಯುವ ನಟಿ, ಆಮೇಲೆ ದಿನಕ್ಕೆ ಒಂದು ಲಕ್ಷಕ್ಕೆ ಕಡಿತಗೊಳಿಸುತ್ತಾರಂತೆ.

    ತೆಲುಗು ಸಿನಿಮಾ ಹಿಟ್ ಆಗುತ್ತಿದ್ದಂತೆ ಸಂಭಾವನೆ ಹೆಚ್ಚಿಸಿಕೊಂಡ ನಟಿ ನಭಾ ನಟೇಶ್ತೆಲುಗು ಸಿನಿಮಾ ಹಿಟ್ ಆಗುತ್ತಿದ್ದಂತೆ ಸಂಭಾವನೆ ಹೆಚ್ಚಿಸಿಕೊಂಡ ನಟಿ ನಭಾ ನಟೇಶ್

    ಮಧು ಸಂಭಾವನೆ ಎಷ್ಟು?

    ಮಧು ಸಂಭಾವನೆ ಎಷ್ಟು?

    ಸುದೀಪ್ ಅಭಿನಯದ ರನ್ನ ಚಿತ್ರದಲ್ಲಿ ನಟಿಸಿರುವ ಮಧು ಒಂದು ಚಿತ್ರಕ್ಕೆ 50 ರಿಂದ 70 ಸಾವಿರ ರೂಪಾಯಿವರೆಗೂ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಮದುವೆ ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಮಧು, ಈಗ ಪೋಷಕ ನಟಿಯಾಗಿ ನಟಿಸುತ್ತಿದ್ದಾರೆ.

    ಶರಣ್ಯಗೂ ಹೆಚ್ಚಿದೆ ಬೇಡಿಕೆ

    ಶರಣ್ಯಗೂ ಹೆಚ್ಚಿದೆ ಬೇಡಿಕೆ

    ತಮಿಳು ಇಂಡಸ್ಟ್ರಿಯ ಖ್ಯಾತ ನಟಿ ಶರಣ್ಯ ಅವರಿಗೂ ಸಿಕ್ಕಾಪಟ್ಟೆ ಬೇಡಿಕೆ ಇದೆ. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸುದೀಪ್ ಮತ್ತು ಶಿವಣ್ಣ ನಟಿಸಿದ್ದ ದಿ ವಿಲನ್ ಚಿತ್ರದಲ್ಲಿ ಸುದೀಪ್ ಅವರ ತಾಯಿ ಪಾತ್ರ ನಿರ್ವಹಿಸಿದ್ದರು. ಒಂದು ಸಿನಿಮಾಗೆ 40 ರಿಂದ 50 ಸಾವಿರ ಪಡೆಯುತ್ತಾರಂತೆ.

    ಸಂಭಾವನೆ ಹೆಚ್ಚಿಸಿಕೊಂಡ ನಟಿ ರಶ್ಮಿಕಾ ಮಂದಣ್ಣಸಂಭಾವನೆ ಹೆಚ್ಚಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ

    ಪವಿತ್ರಾ ಲೋಕೇಶ್

    ಪವಿತ್ರಾ ಲೋಕೇಶ್

    ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾದಲ್ಲಿ ಗುರುತಿಸಿಕೊಂಡಿರುವ ಪವಿತ್ರಾ ಲೋಕೇಶ್ ಅವರು, ಒಂದು ದಿನಕ್ಕೆ 50 ರಿಂದ 70 ಸಾವಿರ ರೂಪಾಯಿವರೆಗೂ ಚಾರ್ಜ್ ಮಾಡ್ತಾರಂತೆ. ಇತ್ತೀಚಿನ ದಿನಗಳಲ್ಲಿ ಪವಿತ್ರಾ ಲೋಕೇಶ್ ಅವರಿಗೆ ಹೆಚ್ಚು ಹೆಚ್ಚು ಅವಕಾಶಗಳು ಬರ್ತಿದೆ.

    ಕೋಟಿ ದಾಟಿದೆ ಹೇಮಾ ಮಾಲಿನಿ ಸಂಭಾವನೆ

    ಕೋಟಿ ದಾಟಿದೆ ಹೇಮಾ ಮಾಲಿನಿ ಸಂಭಾವನೆ

    ತೆಲುಗಿನಲ್ಲಿ ನಟಿಸಿದ್ದ ಗೌತಮಪುತ್ರ ಶಾತಕರ್ಣಿ ಸಿನಿಮಾದಲ್ಲಿ ರಾಜಮಾತ ಪಾತ್ರದಲ್ಲಿ ನಟಿಸಿದ್ದ ಬಾಲಿವುಡ್ ಡ್ರೀಮ್ ಗರ್ಲ್‌ ಹೇಮಾ ಮಾಲಿನಿ 1.5 ರಿಂದ 2 ಕೋಟಿವರೆಗೂ ಸಂಭಾವನೆ ಪಡೆದುಕೊಂಡಿದ್ದರಂತೆ.

    English summary
    Here is the highest paid Supporting Actress of the South Indian Film Industry.
    Monday, October 21, 2019, 13:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X