»   » ನಟಿ ಪೂಜಾ ವಿರುದ್ಧ ಸುರೇಶ್ ಶರ್ಮಾ ನೀಡಿರುವ ದೂರಿನಲ್ಲೇನಿದೆ?

ನಟಿ ಪೂಜಾ ವಿರುದ್ಧ ಸುರೇಶ್ ಶರ್ಮಾ ನೀಡಿರುವ ದೂರಿನಲ್ಲೇನಿದೆ?

Posted By:
Subscribe to Filmibeat Kannada

ನಟಿ ಪೂಜಾ ಗಾಂಧಿ ವಿರುದ್ಧ ಒಂದು ಕೋಟಿ ರೂಪಾಯಿ ಸಾಲ ತೀರಿಸದ ಆರೋಪ ಕೇಳಿಬಂದಿದೆ. 'ಅಭಿನೇತ್ರಿ' ಚಿತ್ರದಿಂದಾಗಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದಾಗ, ಆ ಸಿನಿಮಾ ಕಂಪ್ಲೀಟ್ ಮಾಡುವುದಕ್ಕೆ ಮಳೆ ಹುಡುಗಿ ಪೂಜಾ ಗಾಂಧಿ ಮತ್ತು ಆಕೆಯ ತಂದೆ ಪವನ್ ಗಾಂಧಿ, ಡಾ.ಸುನೀಲ್ ಶರ್ಮಾ ಅವರಿಂದ ಒಂದು ಕೋಟಿ ರೂಪಾಯಿ ಸಾಲ ಪಡೆದಿದ್ದರು.

Highlights of Suresh Sharma complaint on Actress Pooja Gandhi

'ಅಭಿನೇತ್ರಿ' ಸಿನಿಮಾದ ಸ್ಯಾಟಲೈಟ್ ಹಕ್ಕು ಮಾರಿ ಬಂದ ಹಣದಲ್ಲಿ ಸಾಲ ತೀರಿಸುವುದಾಗಿ ಹೇಳಿದ್ದ ಪೂಜಾ ಗಾಂಧಿ ಈವರೆಗೂ ಹಣ ಹಿಂದಿರುಗಿಸಿಲ್ಲ ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟ, ನಿರ್ಮಾಪಕ ಮತ್ತು ಫೈನಾನ್ಶಿಯರ್ ಸುನೀಲ್ ಶರ್ಮಾ ದೂರು ನೀಡಿದ್ದಾರೆ. ಅವರ ದೂರಿನಲ್ಲೇನಿದೆ? ಮುಂದೆ ಓದಿ....


ಗೆ, ಅಧ್ಯಕ್ಷರು/ಕಾರ್ಯದರ್ಶಿಗಳು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಬೆಂಗಳೂರು


ಮಾನ್ಯರೇ,
ವಿಷಯ :- ಪೂಜಾ ಗಾಂಧಿ ಪ್ರೊಡಕ್ಷನ್ಸ್ ರವರ 'ಅಭಿನೇತ್ರಿ' ಕನ್ನಡ ವರ್ಣ ಚಿತ್ರದ ಬಗ್ಗೆ


ಡಾ: ಸುರೇಶ್ ಶರ್ಮಾ ಆದ ನಾನು ಪೂಜಾ ಗಾಂಧಿ ಹಾಗೂ ಅವರ ತಂದೆಯಾದ ಪವನ್ ಗಾಂಧಿಯವರು ವಿನಯದಿಂದ ಬಂದು ತಮ್ಮ ಚಿತ್ರದ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರೈಸಲು ರೂ.1,00,00,000/- (ಒಂದು ಕೋಟಿ ರೂಪಾಯಿಗಳು) ಹಣ ಬೇಕೆಂದು ಕೇಳಲು, ನಾನು ಅವರಿಗೆ ಹಣವನ್ನು ಕೊಟ್ಟೆ.


ಅವರು ಒಂದು ತಿಂಗಳಲ್ಲಿ ಹಿಂತಿರುಗಿಸಿ ಕೊಡುತ್ತೇವೆಂದು ಭರವಸೆ ಕೊಡಲು ಹಾಗೂ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನ ಮಾರಾಟ ಮಾಡಿ ಬರುವ ಹಣವನ್ನ ಒಂದು ತಿಂಗಳಲ್ಲಿ ಕೊಡುತ್ತೇವೆಂದು ಹೇಳಿದರು. ಪೂಜಾಗಾಂಧಿ ಅವರು ಚಲನಚಿತ್ರ ರಂಗದಲ್ಲಿ ಉತ್ತುಂಗದಲ್ಲಿ ಇದ್ದಾರೆಂದು ನಂಬಿ ನಾನು ಅಷ್ಟು ದೊಡ್ಡ ಮೊತ್ತವಾದ ರೂ.1,00,00,000/- (ಒಂದು ಕೋಟಿ ರೂಪಾಯಿಗಳು) ಕೊಟ್ಟೆ. [ಪೂಜಾ ಗಾಂಧಿ ಮುಚ್ಚಿಡುತ್ತಿರುವ 'ಆ' ವಿಷಯವೇನು?]


ಈಗ 'ಅಭಿನೇತ್ರಿ' ಚಲನಚಿತ್ರ ಬಿಡುಗಡೆಯಾಗಿದೆ. ಸ್ಯಾಟಲೈಟ್ ರೈಟ್ಸ್ ನಿಂದ ಹಣ ಬಂದಿದೆ. ಆದ್ರೆ, ಅಪ್ಪ-ಮಗಳು ಇಬ್ಬರೂ ಕೈಗೆ ಸಿಗದೆ ಸತಾಯಿಸುತ್ತಿದ್ದಾರೆ. ಇಂದು ನಾಳೆ ಎಂದು ಸತಾಯಿಸುತ್ತ ಹಣ ಕೊಡುವ ಮಾತನ್ನೇ ಆಡುತ್ತಿಲ್ಲ.


ನಾನು ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುವುದೇನೆಂದ್ರೆ, ಶ್ರೀ ಪವನ್ ಗಾಂಧಿ ಮತ್ತು ಅವರ ಮಗಳು ಪೂಜಾ ಗಾಂಧಿ ಇಬ್ಬರನ್ನೂ ವಾಣಿಜ್ಯ ಮಂಡಳಿಗೆ ಕರೆಯಿಸಿ ನಾನು ಅವರಿಗೆ ಕೊಟ್ಟಿರುವ ಹಣವನ್ನ ನನಗೆ ವಾಪಸ್ ಕೊಡಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಕೋರುತ್ತೇನೆ. [ಕೋಟಿ ರೂಪಾಯಿ ಪಂಗನಾಮ ಹಾಕಿದ ಪೂಜಾಗಾಂಧಿ!?]


ಚಲನಚಿತ್ರರಂಗದಲ್ಲಿ ಪೂಜಾಗಾಂಧಿಯವರಿಗೆ ಒಳ್ಳೆಯ ಹೆಸರಿರುವುದರಿಂದ ಅವರ ವ್ಯಕ್ತಿತ್ವಕ್ಕೆ ಯಾವುದೇ ರೀತಿಯ ಕುಂದುಂಟಾಗಬಾರದೆಂಬ ಮಾನವೀಯತೆಯ ದೃಷ್ಟಿಯಿಂದ ನಾನು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರನ್ನ ಸಲ್ಲಿಸುತ್ತಿದ್ದೇನೆ.


ನಮ್ಮಿಬ್ಬರಲ್ಲಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಈ ಸಮಸ್ಯೆಯನ್ನ ಬಗೆಹರಿಸಿಕೊಡುತ್ತೀರೆಂದು ನಂಬಿ ಯಾವುದೇ ಇತರೆ ಕಾನೂನು ರೀತಿಯ ಮಾರ್ಗಗಳನ್ನ ಉಪಯೋಗಿಸದೆ, ನಿಮ್ಮ ಮಂಡಳಿಗೆ ಬಂದು ಇತ್ಯರ್ಥಪಡಿಸಿಕೊಳ್ಳುವ ನಂಬಿಕೆಯಿಂದ ಈ ದೂರನ್ನ ಸಲ್ಲಿಸುತ್ತಿದ್ದೇನೆ.


ವಂದನೆಗಳೊಂದಿಗೆ,
ಇಂತಿ ತಮ್ಮ
ಡಾ:ಸುರೇಶ್ ಶರ್ಮಾ

English summary
Producer, Actor cum Financier Suresh Sharma has filed a complaint in KFCC against Actress Pooja Gandhi for not returning Rs.1 Crore. Here is the highlights of the complaint written by Suresh Sharma.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada