»   » ಪ್ರಿನ್ಸ್ ಮಹೇಶ್ ಬಾಬು ಕ್ಷಮೆ ಕೇಳಿದ್ದು ಯಾಕೆ?

ಪ್ರಿನ್ಸ್ ಮಹೇಶ್ ಬಾಬು ಕ್ಷಮೆ ಕೇಳಿದ್ದು ಯಾಕೆ?

Posted By:
Subscribe to Filmibeat Kannada

ಟಾಲಿವುಡ್ ನಲ್ಲಿ 'ಬಾಹುಬಲಿ' ಕ್ರೇಜ್ ನಿಧಾನಕ್ಕೆ ಕಡಿಮೆಯಾಗುತ್ತಿದ್ದಂತೆ ಇದೀಗ ಮತ್ತೊಬ್ಬ ಸೂಪರ್ ಸ್ಟಾರ್ ಸೌಂಡ್ ಮಾಡುತ್ತಿದ್ದಾರೆ. ಅವರು ಯಾರು ಅಂತಿರಾ? ಅವರೇ ನಮ್ಮ 'ದೂಕುಡು' ಮಹೇಶ್ ಬಾಬು.

ಹೌದು, ಪ್ರಿನ್ಸ್ ಮಹೇಶ್ ಬಾಬು, ಶೃತಿ ಹಾಸನ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಈ ವರ್ಷದ ಬಹುನಿರೀಕ್ಷಿತ 'ಶ್ರೀಮಂತುಡು' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಜುಲೈ 18 ರಂದು ಹೈದರಾಬಾದ್ ನ 'ಶಿಲ್ಪ ಕಲಾ ವೇದಿಕೆ'ಯಲ್ಲಿ ನೆರವೇರಿದೆ.

ಕೃಷ್ಣ, ವಿಜಯ ನಿರ್ಮಲ, ನಮ್ರತಾ, ಗೌತಮ್ ಕೃಷ್ಣ, ಶ್ರೀಕಾಂತ್ ಅಡ್ಡಾಲ, ವಿ.ವಿ.ವಿನಾಯಕ್, ಶ್ರೀನು, ಮಹೇಶ್ ಬಾಬು, ಶೃತಿ ಹಾಸನ್ ಸೇರಿದಂತೆ ಚಿತ್ರದ ನಿರ್ದೇಶಕ ಕೊರಟಾಲ ಶಿವ ಮುಂತಾದವರು ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.[ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು!]

ಪಕ್ಕಾ ಫ್ಯಾಮಿಲಿ ಎಂರ್ಟಟೈನ್ಮೆಂಟ್ ಚಿತ್ರವಾದ 'ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು'ನಲ್ಲಿ ಮಹೇಶ್ ಬಾಬು ಅಣ್ಣನಾಗಿ ನಟಿಸಿದ ವಿಕ್ಟರಿ ವೆಂಕಟೇಶ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಖ್ಯಾತ ಸಂಗೀತ ನಿರ್ದೇಶಕ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಗೆ ಸಾಥ್ ನೀಡಿದ ಚಿತ್ರದ ನಾಯಕಿ ಶೃತಿ ಹಾಸನ್ ಹಾಡಿನ ಮೂಲಕ ಲೈವ್ ಪರ್ಫಾಮೆನ್ಸ್ ನೀಡಿದರು.[ಪ್ರಿನ್ಸ್ ಮಹೇಶ್ ಜೊತೆ ಕಾಜಲ್, ಸಮಂತಾ ಡ್ಯುಯೆಟ್]

ಇದೇ ಕಾರ್ಯಕ್ರಮದಲ್ಲಿ ಮಹೇಶ್ ಬಾಬು ಅಭಿಮಾನಿಗಳ ಮುಂದೆ ಕ್ಷಮೆಯಾಚಿಸಿದರು. ಅದಕ್ಕೆ ಕಾರಣ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಕ್ಲಿಕ್ ಮಾಡಿ..

''ನನ್ನನ್ನು ಕ್ಷಮಿಸಿ''

ಮಹೇಶ್ ಬಾಬು ಅವರ ರೀಸೆಂಟ್ ಚಿತ್ರಗಳಾದ 'ನೆನೊಕ್ಕಡನೇ' ಹಾಗೂ 'ಆಗಡು' ಅಷ್ಟಾಗಿ ಹಿಟ್ ಕಾಣದ ಕಾರಣ ಅವರು, ಕಾರ್ಯಕ್ರಮದಲ್ಲಿ ನೆರೆದಿರುವ ಅಭಿಮಾನಿಗಳಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಿದರು.

'ವಿಕ್ಟರಿ' ವೆಂಕಟೇಶ್ ಮತ್ತು ಮಹೇಶ್ ಬಾಬು

ವೆಂಟೇಶ್ ಹಾಗೂ ಮಹೇಶ್ ಬಾಬು ರೀಲ್ ನಲ್ಲಿ ಮಾತ್ರವಲ್ಲದೇ ರಿಯಲ್ ನಲ್ಲೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಮಾತ್ರವಲ್ಲದೆ ಇವರಿಬ್ಬರೂ ಒಂದಾಗಿದ್ದ 'ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು' ಚಿತ್ರದಲ್ಲಿ 'ಪೆದ್ದೊಡ', 'ಚಿನ್ನೊಡ' ಅಂತ ಅಣ್ಣ-ತಮ್ಮ ನಾಗಿ ಫೇಮಸ್ ಆಗಿದ್ದರು. ಮಹೇಶ್ ಬಾಬು 'ಶ್ರೀಮಂತುಡು' ಹಿಟ್ ಚಿತ್ರ ಆಗುತ್ತೆ ಅಂತ ವೆಂಕಟೇಶ್ ಭರವಸೆ ನೀಡಿದರು.

ಡಿ.ಎಸ್.ಪಿ (ದೇವಿಶ್ರೀ ಪ್ರಸಾದ್)

ಖ್ಯಾತ ಸಂಗೀತ ನಿರ್ದೇಶಕ 'ರಾಕ್ ಸ್ಟಾರ್' ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಪರ್ಫಾಮೆನ್ಸ್ ಕಾರ್ಯಕ್ರಮದ ಹೈಲೈಟ್ಸ್.

ಶೃತಿ ಹಾಸನ್

ನಟನೆಯೊಂದಿಗೆ ಸಿಂಗರ್ ಕೂಡ ಆಗಿರುವ ನಟಿ ಶೃತಿ ಹಾಸನ್ ಕಾರ್ಯಕ್ರಮದಲ್ಲಿ ದೇವಿಶ್ರೀ ಪ್ರಸಾದ್ ಜೊತೆ 'ಶ್ರೀಮಂತುಡು' ಚಿತ್ರದ 'ಜಾಗೋ' ಹಾಡಿಗೆ ಧ್ವನಿಯಾದರು.

ಹ್ಯಾಪಿ ಫ್ಯಾಮಿಲಿ

ನಾಯಕ ಮಹೇಶ್ ಬಾಬು ಕಾರ್ಯಕ್ರಮದಲ್ಲಿ ಪತ್ನಿ ಹಾಗೂ ಮಗ ಗೌತಮ್ ಜೊತೆ ಹಾಜರಿದ್ದರು.

ಲೀಡ್ ಜೋಡಿ

ಮಹೇಶ್ ಬಾಬು, ಶೃತಿ ಹಾಸನ್ ಇದೇ ಮೊದಲ ಬಾರಿಗೆ ತೆರೆ ಮೇಲೆ ಒಂದಾಗುತ್ತಿದ್ದು, ಇವರಿಬ್ಬರೂ ಯಾವ ಥರಾ ಕಮಾಲ್ ಮಾಡುತ್ತಾರೆ ಅಂತ ಕಾದು ನೋಡಬೇಕು.

English summary
Telugu movie 'Srimanthudu' audio was released on July 18th, in a Grand ceremony at Shilpa Kala Vedika, Hyderabad. The function featured some rocking performences on Mahesh Babu's super hit numbers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada