For Quick Alerts
  ALLOW NOTIFICATIONS  
  For Daily Alerts

  ಗಾಂಧಿನಗರದಲ್ಲಿ ಒಂದು ಸುತ್ತು : ಈ ದಿನದ ಟಾಪ್ 5 ಸುದ್ದಿಗಳು

  |

  ಕನ್ನಡ ಚಿತ್ರರಂಗದಲ್ಲಿ ಪ್ರತಿದಿನ ಸಿನಿಮಾಗಳ ಕೆಲಸಗಳು ನಡೆಯುತ್ತಲೇ ಇರುತ್ತದೆ. ಯಾವುದೋ ಸಿನಿಮಾದ ಮುಹೂರ್ತ, ಇನ್ಯಾವುದೋ ಸಿನಿಮಾದ ಬಿಡುಗಡೆ, ಮತ್ತೊಂದು ಕಡೆ ವಿವಾದ, ಇನ್ನೊಂದು ಕಡೆ ವಿವಾಹ ಹೀಗೆ ಒಂದೇ ದಿನ ಸಾಕಷ್ಟು ಬೆಳವಣಿಗೆಗಳು ಆಗುತ್ತದೆ.

  ಸದ್ಯಕ್ಕೆ, ಇಂದು ಮಕ್ಕಳ ದಿನಾಚರಣೆ ಆಗಿದ್ದು, ಸಾಕಷ್ಟು ನಟ ನಟಿಯರು ತಮ್ಮ ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ಕಡೆ 'ನಟ ಸಾರ್ವಭೌಮ' ಸಿನಿಮಾದ ಹೊಸ ಫೋಟೋಗಳು ಹೊರ ಬಂದಿವೆ. ಜೊತೆಗೆ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದ ವಿಡಿಯೋ ಹಾಡು ರಿಲೀಸ್ ಆಗಿದೆ. 'ದಿ ವಿಲನ್' ಸಿನಿಮಾದ ಶಿವಣ್ಣನ ಹಾಡಿನ ವಿಡಿಯೋ ಬಿಡುಗಡೆಯಾಗಿದೆ.

  ಗಾಂಧಿನಗರದಲ್ಲಿ ಒಂದ್ ರೌಂಡ್ : ಈ ದಿನದ ಐದು ಸುದ್ದಿಗಳು

  ಅಂದಹಾಗೆ, ಕನ್ನಡ ಚಿತ್ರರಂಗದ ಈ ದಿನದ ಸಣ್ಣ ಸಣ್ಣ ಸುದ್ದಿಗಳ ಸಂಗ್ರಹ ಮುಂದಿದೆ ಓದಿ...

  'ಹೇ ಶಾರದೆ..' ವಿಡಿಯೋ ಹಾಡು

  'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾದ 'ಹೇ ಶಾರದೆ..' ಹಾಡಿನ ವಿಡಿಯೋ ಬಿಡುಗಡೆಯಾಗಿದೆ. ಮಕ್ಕಳ ದಿನಾಚರಣೆಯ ವಿಶೇಷವಾಗಿ ಹಾಡಿನ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಕೆ ಕಲ್ಯಾಣ್ ಈ ಹಾಡನ್ನು ಬರೆದಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ರಿಷಬ್ ಶೆಟ್ಟಿ ಚಿತ್ರದ ನಿರ್ದೇಶಕರಾಗಿದ್ದಾರೆ.

  'ನಟ ಸಾರ್ವಭೌಮ' ಫೋಟೋಗಳು

  ನಟ ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಸಿನಿಮಾ ಹೊಸ ಹೊಸ ಫೋಟೋಗಳು ಹೊರಬಂದಿವೆ. ರಚಿತಾ ರಾಮ್ ಹಾಗೂ ಅನುಪಮ ಇಬ್ಬರ ಜೊತೆಗೆ ಅಪ್ಪು ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಡಬ್ಬಿಂಗ್ ಅನ್ನು ಪುನೀತ್ ಮುಗಿಸಿದ್ದಾರೆ. ಪವನ್ ಒಡೆಯರ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.

  ಕನ್ನಡದ 8 ಸ್ಟಾರ್ ನಟರ ಮಕ್ಕಳು, ಅವರ ಹೆಸರುಗಳು

  'ಮುದ್ದು ಮುದ್ದಾಗಿ' ಪೋಸ್ಟರ್

  'ಮುದ್ದು ಮುದ್ದಾಗಿ' ಪೋಸ್ಟರ್

  'ಮುದ್ದು ಮುದ್ದಾಗಿ' ಎಂಬ ಕಿರುಚಿತ್ರದ ಪೋಸ್ಟರ್ ಮಕ್ಕಳ ದಿನಾಚರಣೆ ವಿಶೇಷವಾಗಿ ಹೊರಬಂದಿದೆ. ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರ ಪುತ್ರ ಸಾಯಿ ಕೃಷ್ಣ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಹೆಸರಿಗೆ ತಕ್ಕ ಹಾಗಿಯೇ ಪೋಸ್ಟರ್ ಮುದ್ದು ಮುದ್ದಾಗಿದೆ.

  'ದಿ ವಿಲನ್' ಹಾಡು

  'ದಿ ವಿಲನ್' ಸಿನಿಮಾದ ಮತ್ತೊಂದು ವಿಡಿಯೋ ಹಾಡು ರಿಲೀಸ್ ಆಗಿದೆ. ಶಿವಣ್ಣನ 'ಬೊಲೊ ಬೊಲೊ ರಾಮಪ್ಪ..' ಹಾಡು ಯೂ ಟ್ಯೂಬ್ ಗೆ ಬಂದಿದೆ. ಅಂದಹಾಗೆ, ಈ ಹಾಡು ಸದ್ಯ ಟ್ರೆಂಡಿಂಗ್ 7 ನಲ್ಲಿ ಇದೆ. ಪ್ರೇಮ್ ಈ ಹಾಡನ್ನು ಬರೆದಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದರು.

  ಈ ವಾರ 4 ಚಿತ್ರಗಳು ರಿಲೀಸ್ : ಒಂದಕ್ಕಿಂತ ಒಂದು ವಿಭಿನ್ನ

  ಪುನೀತ್‌ ಬಾಲ್ಯದ ಫೋಟೋ

  ಮಕ್ಕಳ ದಿನಾಚರಣೆಯ ವಿಶೇಷವಾಗಿ ಪುನೀತ್ ರಾಜ್ ಕುಮಾರ್ ತಮ್ಮ ಬಾಲ್ಯದ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪುನೀತ್ ಫೋಟೋವನ್ನು ಅವರ ಸಾಕಷ್ಟು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅನೇಕರು ಈ ಹಿಂದೆ ನೋಡಿರದ ಬಾಲ್ಯದ ಫೋಟೋವನ್ನು ಪುನೀತ್ ಶೇರ್ ಮಾಡಿದ್ದಾರೆ.

  English summary
  Highlights todays kannada movie news.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X