twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್ ಒದ್ದಾಡುತ್ತಿದೆ, ಹಿಂದಿ ರಾಷ್ಟ್ರಭಾಷೆಯಾಗಿ ಉಳಿದಿಲ್ಲ: ಸುದೀಪ್

    |

    ಪ್ಯಾನ್ ಇಂಡಿಯಾ ಸಿನಿಮಾ, ಹಿಂದಿ ಪ್ರದೇಶದಲ್ಲಿ ದಕ್ಷಿಣ ಭಾರತ ಸಿನಿಮಾಗಳ ಕಮಾಲ್ ಇತರೆ ವಿಷಯಗಳು ಬಹುವಾಗಿ ಚರ್ಚೆಯಾಗುತ್ತಿವೆ.

    ಹಲವು ವರ್ಷಗಳಿಂದ ಏಕಮೇವತ್ವ ಮೆರೆದಿದ್ದ ಬಾಲಿವುಡ್‌ ಮೇಲೆ ದಕ್ಷಿಣ ಭಾರತ ಸಿನಿಮಾಗಳು ದಿಗ್ವಿಜಯ ಸಾಧಿಸಿರುವುದನ್ನು ಪ್ರೇಕ್ಷಕರು ಮಾತ್ರವಲ್ಲ ಸಿನಿಮಾ ಮಂದಿ ಸಹ ಸಂಭ್ರಮಿಸುತ್ತಿದ್ದಾರೆ.

    ಕನ್ನಡದ 'ಕೆಜಿಎಫ್ 2' ಸಿನಿಮಾ ಮಾಡಿರುವ ಸಾಧನೆಯಂತೂ ಚಿತ್ರರಂಗಕ್ಕೆ, ಕನ್ನಡ ಪ್ರೇಕ್ಷಕರಿಗೆ ಹೆಮ್ಮೆ ತಂದಿದೆ. ಕೆಲವು ದಿನಗಳ ಹಿಂದೆ ಉಪೇಂದ್ರ ನಟನೆಯ 'R' ಸಿನಿಮಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಸುದೀಪ್, ಕನ್ನಡ ಸಿನಿಮಾಗಳು, ಕನ್ನಡ ಚಿತ್ರರಂಗ, ಬಾಲಿವುಡ್, ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಆಡಿರುವ ಮಾತುಗಳು ಬಹಳ ವೈರಲ್ ಆಗಿವೆ.

    'ನಾವೆಲ್ಲ ಉದ್ದ ಇದ್ದೀವಷ್ಟೆ, ನಿಜ ಸಾಧಕರು ಅವರು' ಹಿರಿಯ ನಟನ ಹೊಗಳಿದ ಸುದೀಪ್'ನಾವೆಲ್ಲ ಉದ್ದ ಇದ್ದೀವಷ್ಟೆ, ನಿಜ ಸಾಧಕರು ಅವರು' ಹಿರಿಯ ನಟನ ಹೊಗಳಿದ ಸುದೀಪ್

    'R' ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ''ಕನ್ನಡ ಚಿತ್ರರಂಗವನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ ಆದರೆ 'ಕೆಜಿಎಫ್ 2' ಸಿನಿಮಾ ಬಂದು ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದೆ'' ಎಂದು ಹೊಗಳಿದರು. ಕಾರ್ಯಕ್ರಮದ ನಿರೂಪಕರು ಸಹ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಹೊಗಳಿ ಮಾತನಾಡಿದರು.

    ಹಿಂದಿ ರಾಷ್ಟ್ರಭಾಷೆಯಾಗಿ ಉಳಿದಿಲ್ಲ: ಸುದೀಪ್

    ಹಿಂದಿ ರಾಷ್ಟ್ರಭಾಷೆಯಾಗಿ ಉಳಿದಿಲ್ಲ: ಸುದೀಪ್

    ಬಳಿಕ ಮಾತನಾಡಿದ ನಟ ಸುದೀಪ್, ''ಕನ್ನಡದ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಸಿನಿಮಾ ಎನ್ನಬೇಡಿ, ಹಿಂದಿ ರಾಷ್ಟ್ರಭಾಷೆಯಾಗಿ ಉಳಿದಿಲ್ಲ. ಬಾಲಿವುಡ್‌ನವರು ಹೇಳಬೇಕು ನಾವು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದೇವೆ ಎಂದು. ತೆಲುಗು, ತಮಿಳಿಗೆಲ್ಲ ಡಬ್ ಮಾಡಿ ಏನೇನೋ ಸಾಹಸ ಮಾಡುತ್ತಿದ್ದಾರೆ ಆದರೆ ಯಾವುದೂ ಸಹ ವರ್ಕ್‌ ಆಗುತ್ತಿಲ್ಲ ಬಹಳ ಕಷ್ಟಪಡುತ್ತಿದ್ದಾರೆ. ಆದರೆ ಪ್ಯಾನ್ ಇಂಡಿಯಾ ಸಿನಿಮಾ ಎಂಬುದು ಹಿಂದಿ ಸಿನಿಮಾ, ನಮ್ಮದಲ್ಲ, ನಾವು ಕೇವಲ ಸಿನಿಮಾ ಮಾಡುತ್ತಿದ್ದೇವೆ, ಅದು ವಿಶ್ವದೆಲ್ಲೆಡೆ ರೀಚ್ ಆಗುತ್ತಿದೆ ಅಷ್ಟೆ'' ಎಂದರು ಸುದೀಪ್.

    ''ಬಹಳ ವರ್ಷಗಳ ಮುಂಚೆಯೇ ಚೀನಾ ಈ ಕೆಲಸ ಮಾಡಿತ್ತು''

    ''ಬಹಳ ವರ್ಷಗಳ ಮುಂಚೆಯೇ ಚೀನಾ ಈ ಕೆಲಸ ಮಾಡಿತ್ತು''

    ''1970-60 ರಲ್ಲಿಯೇ ಚೀನಾ ಈ ಪ್ಯಾನ್ ವರ್ಲ್ಡ್ ಕಾನ್ಸೆಪ್ಟ್ ಪ್ರಾರಂಭ ಮಾಡಿತು. ಚೀನಾ ಚಿತ್ರರಂಗದವರು ಚೀನಿ ಭಾಷೆಯಲ್ಲಿ ಸಿನಿಮಾ ಮಾಡಿ ಅದನ್ನು ಇಂಗ್ಲೀಷ್‌ಗೆ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದರು. ಆ ಸಿನಿಮಾಗಳನ್ನು ವಿಶ್ವದೆಲ್ಲೆಡೆ ನೋಡಲಾಗುತ್ತಿತ್ತು. ನಾವು ತುಸು ತಡವಾಗಿ ಇದನ್ನು ಮಾಡುತ್ತಿದ್ದೇವೆ'' ಎಂದು ಪ್ಯಾನ್ ವರ್ಲ್ಡ್ ಸಿನಿಮಾ, ಪರಭಾಷೆಯಲ್ಲಿ ಸಿನಿಮಾ ಡಬ್ ಮಾಡುವ ಪದ್ಧತಿಯ ಇತಿಹಾಸದ ಬಗ್ಗೆ ತಿಳಿಸಿಕೊಟ್ಟರು ಸುದೀಪ್.

    'ಕೆಜಿಎಫ್ 2' ಬಗ್ಗೆ ಮಾತಾಡಿದ್ರಾ ನಟ ಸುದೀಪ್?, ವೈರಲ್ ವಿಡಿಯೋ ಅಸಲಿಯತ್ತೇನು?'ಕೆಜಿಎಫ್ 2' ಬಗ್ಗೆ ಮಾತಾಡಿದ್ರಾ ನಟ ಸುದೀಪ್?, ವೈರಲ್ ವಿಡಿಯೋ ಅಸಲಿಯತ್ತೇನು?

    ''ನಮ್ಮ ಚಿತ್ರರಂಗ ಹೋಗುತ್ತಿರುವ ರೀತಿ ಖುಷಿ ನೀಡುತ್ತಿದೆ''

    ''ನಮ್ಮ ಚಿತ್ರರಂಗ ಹೋಗುತ್ತಿರುವ ರೀತಿ ಖುಷಿ ನೀಡುತ್ತಿದೆ''

    ಮುಂದುವರೆದು ಮಾತನಾಡಿ, ''ಇಂದು ನಮ್ಮ ಚಿತ್ರರಂಗ ಹೋಗುತ್ತಿರುವ ರೀತಿ ನೋಡಿದರೆ ಬಹಳ ಖುಷಿಯಾಗುತ್ತದೆ. ಭಾಷೆ ಎಂಬುದು ಕೇವಲ ಮಾಧ್ಯಮವಷ್ಟೆ, ಆ ಗಡಿಯನ್ನು ಒಡೆದು ನಮ್ಮ ಸಿನಿಮಾಗಳು ಮುಂದೆ ಹೋಗುತ್ತಿವೆ. ಇನ್ನು ಮುಂದೆ ನಮ್ಮ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲ, ಕೇವಲ ಸಿನಿಮಾಗಳಷ್ಟೆ. ಪ್ಯಾನ್ ಇಂಡಿಯಾ ಸಿನಿಮಾಗಳು ಬರುತ್ತಿರುವುದು ಮುಂಬೈನಿಂದ. ಇಲ್ಲಿಂದ ಅಲ್ಲ'' ಎಂದರು.

    'ವಿಕ್ರಾಂತ್ ರೋಣ' ಸಹ ಪ್ಯಾನ್ ಇಂಡಿಯಾ ಸಿನಿಮಾ

    'ವಿಕ್ರಾಂತ್ ರೋಣ' ಸಹ ಪ್ಯಾನ್ ಇಂಡಿಯಾ ಸಿನಿಮಾ

    ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ಸಹ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಿದೆ. ಸಿನಿಮಾವನ್ನು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಮಾತ್ರವೇ ಅಲ್ಲದೆ ಇಂಗ್ಲೀಷ್ ಭಾಷೆಗೂ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ಜೊತೆಗೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಸುದೀಪ್ ಹಾಗೂ 'ವಿಕ್ರಾಂತ್ ರೋಣ' ತಂಡ ಯೋಜಿಸಿದೆ. ಸಿನಿಮಾವು ಜುಲೈ 28 ಕ್ಕೆ ಬಿಡುಗಡೆ ಆಗಲಿದೆ.

    English summary
    Kichcha Sudeep said Hindi is no more national language. He said Bollywood is struggling in front of south Indian movies. They are making pan India movie, we are making just films.
    Tuesday, April 26, 2022, 9:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X