»   » ಕಠಾರಿವೀರ ಚಿತ್ರದಲ್ಲಿ ಹಿಂದು ದೇವತೆಗಳಿಗೆ ಅಪಮಾನ

ಕಠಾರಿವೀರ ಚಿತ್ರದಲ್ಲಿ ಹಿಂದು ದೇವತೆಗಳಿಗೆ ಅಪಮಾನ

Posted By:
Subscribe to Filmibeat Kannada
<ul id="pagination-digg"><li class="next"><a href="/news/katari-veera-hurt-hindu-religious-sentiments-065091.html">Next »</a></li></ul>

'ಕಠಾರಿವೀರ ಸುರಸುಂದರಾಂಗಿ' ಚಿತ್ರದಲ್ಲಿ ಹಿಂದೂ ದೇವತೆಗಳನ್ನು ಅವಹೇಳನಕಾರಿಯಾಗಿ ಬಿಂಬಿಸಿ, ಪೌರಾಣಿಕ ಪಾತ್ರ ಹಾಗೂ ಸಂಭಾಷಣೆಗಳ ಮೂಲಕ ಹಿಂದೂ ದೇವತೆಗಳನ್ನುಅವಮಾನಿಸಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ತೀವ್ರವಾಗಿ ಖಂಡಿಸಿದೆ.

ಚಲನಚಿತ್ರದಲ್ಲಿ ಹಿಂದೂ ದೇವತೆಗಳನ್ನು ಪುರಾಣದ ಆಧಾರದಲ್ಲಿನ ಪಾತ್ರಗಳ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಯುಂಟು ಮಾಡಿದೆ. ಇದರಲ್ಲಿ ಕೇವಲ ಪಾತ್ರಗಳಲ್ಲದೇ ಅನೇಕ ಸಂಭಾಷಣೆಗಳ ಮೂಲಕವೂ ದೇವತೆಗಳನ್ನು ಹೀನ ಮಟ್ಟದಲ್ಲಿ ವಿಡಂಬನೆ ಮಾಡಲಾಗಿದೆ ಎಂದು ಸಮಿತಿ ದೂರಿದೆ. ಹಿಂದೂ ಜನಜಾಗೃತಿ ಸಮಿತಿ ಪಟ್ಟಿ ಮಾಡಿರುವ ಚಿತ್ರದಲ್ಲಿನ ಕೆಲ ಅವಹೇಳನಕಾರಿ ಅಂಶಗಳು ಮುಂದಿನಂತಿವೆ.

1. 'ಶ್ರೀರಾಮ ಮತ್ತು ಶ್ರೀಕೃಷ್ಣನೇ ತಪ್ಪು ಮಾಡಿರುವಾಗ, ಅಲ್ಲದೇ ತಪ್ಪುಗಳನ್ನು ಮಾಡಿಸಿರುವಾಗ ಅವರಿಗೇಕೆ ಶಿಕ್ಷೆ ನೀಡಲಿಲ್ಲ. ಮನುಷ್ಯರಿಗೆ ಮಾತ್ರ ಶಿಕ್ಷೆನಾ' ಎಂಬಂತಹ ಹೇಳಿಕೆಗಳ ಮೂಲಕ ದೇವತೆಗಳೊಂದಿಗೆ ಹುಲು ಮಾನವನ ತುಲನೆ ಮಾಡಿ ಹಿಂದೂಗಳ ಧಾರ್ಮಿಕ ಭಾವನೆಗೆ ಅಳಿಸಲಾರದಂತಹ ಆಘಾತ ಮಾಡಲಾಗಿದೆ.

2. ಚಿತ್ರಗುಪ್ತನು ಪ್ರಾಣಿಮಾತ್ರರ ಪುಣ್ಯಪಾಪದ ಲೆಕ್ಕಾಚಾರವನ್ನಿಟ್ಟು ಅದರಂತೆ ಅವರಿಗೆ ಶಿಕ್ಷೆ ವಿಧಿಸುತ್ತಾನೆ. ಹೀಗಿರುವಾಗ ಇದರಲ್ಲಿ 'ಚಿತ್ರಗುಪ್ತ' ಹಾಗೂ ಸ್ತ್ರೀಯೊಬ್ಬಳು ನಡುವಿನ ಅಸಭ್ಯ ವರ್ತನೆ, ಚಿತ್ರಗುಪ್ತನು ಸ್ತ್ರೀಯೊಬ್ಬಳನ್ನು ನೋಡಿ ಕಣ್ಣು ಹೊಡೆಯುವುದು' ಇಂತಹ ರೀತಿಯಲ್ಲಿ ಅವರ ಸ್ಥಾನಕ್ಕೇ ಅವಹೇಳನ ಮಾಡಲಾಗಿದೆ.

<ul id="pagination-digg"><li class="next"><a href="/news/katari-veera-hurt-hindu-religious-sentiments-065091.html">Next »</a></li></ul>
English summary
Hindu Janajagruti Samiti' (HJS) had strongly condemns Upendra and Ramya lead Kannada film Katari Veera Surasundarangi. The Hindu right wing organisation alleges that the scenes in the film 'Katari Veera' is disrespectful towards Hindu deities and it has hurt Hindu religious sentiments.
Please Wait while comments are loading...