For Quick Alerts
  ALLOW NOTIFICATIONS  
  For Daily Alerts

  ಪಲ್ಲಕ್ಕಿ ನಿರ್ದೇಶನದಲ್ಲಿ 'ಶೂರ ಸಿಂಧೂರ ಲಕ್ಷ್ಮಣ'

  By Rajendra
  |

  ಈ ಹಿಂದೆ ಶ್ರೀ ಕ್ಷೇತ್ರ ಕೈವಾರ ತಾತಯ್ಯ, ದೇವನಹಳ್ಳಿ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದ ಪಲ್ಲಕ್ಕಿ ಈಗ ಮತ್ತೊಂದು ಐತಿಹಾಸಿಕ ಚಲನಚಿತ್ರಕ್ಕೆ ಕೈಹಾಕಿದ್ದಾರೆ. ಉತ್ತರ ಕರ್ನಾಟಕದಾದ್ಯಂತ ನಾಟಕದ ಮೂಲಕ ಮನೆ ಮಾತಾದ ಶೂರ ಸಿಂಧೂರ ಲಕ್ಷ್ಮಣ ಸ್ವಾತಂತ್ರ್ಯ ಯೋಧನ ಕಥೆಯನ್ನು ತೆರೆಯ ಮೇಲೆ ತರಲು ಸಿದ್ಧತೆ ನಡೆಸಿದ್ದಾರೆ.

  ಬಡ ಜನತೆಯ ಅನ್ನದಾತನಾಗಿ ದೀನ ದಲಿತರನ್ನು ತೆರಿಗೆಯಿಂದ ಮುಕ್ತಗೊಳಿಸಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೆಚ್ಚೆದೆಯಿಂದ ಹೋರಾಡಿದ ಶೂರ ಸಿಂಧೂರ ಲಕ್ಷ್ಮಣ. ಅವರ ದೇಶ ಪ್ರೇಮವನ್ನು ಸಾರುವ ನೈಜ ಕಥೆ ಇದಾಗಿದ್ದು ಈ ಯೋಧನ ಬಗ್ಗೆ ಇದುವರೆಗೆ ಯಾರೂ ಅರಿಯದ ಇನ್ನೂ ಹಲವಾರು ಸಂಗತಿಗಳನ್ನು ಸಂಗ್ರಹಿಸಿ ಈ ಚಿತ್ರದಲ್ಲಿ ಪಲ್ಲಕ್ಕಿ ಅಳವಡಿಸಿಕೊಳ್ಳಲಿದ್ದಾರೆ. [ಭಗತ್ ಬಗ್ಗೆ ಗೊತ್ತಿಲ್ಲದ ಸಣ್ಣಸಣ್ಣ ಸಂಗತಿಗಳು]

  ಈ ಬಗ್ಗೆ ಸತತವಾಗಿ 6 ವರ್ಷಗಳ ಕಾಲ ಅಧ್ಯಯನ ನಡೆಸಿ ಹಿಂದೆ ಬಂದ ನಾಟಕದಲ್ಲಿ, ಸಾಹಿತ್ಯ ಗ್ರಂಥಗಳಲ್ಲಿ ಇಲ್ಲದ ಹಲವಾರು ವಿಶೇಷ ಸಂಗತಿಗಳನ್ನು ಈ ಚಿತ್ರದಲ್ಲಿ ನಿರ್ದೇಶಕ ಪಲ್ಲಕ್ಕಿ ತೋರಿಸಲಿದ್ದಾರೆ.

  ತಾತಾ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಲಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಪಲ್ಲಕ್ಕಿಯವರೇ ಹೊತ್ತಿದ್ದಾರೆ. ಈಗಾಗಲೇ ಸಾಮಾಜಿಕ ಹಾಗೂ ಪೌರಾಣಿಕ ಚಿತ್ರಗಳನ್ನು ನಿರ್ದೇಶಿಸಿ ಅನುಭವ ಪಡೆದಿರುವ ಪಲ್ಲಕ್ಕಿ ಇದೇ ಮೊದಲ ಬಾರಿಗೆ ಐತಿಹಾಸಿಕ ಚಿತ್ರ ನಿರ್ದೇಶಿಸ ಹೊರಟಿದ್ದಾರೆ.

  ಸಿಂಧೂರ ಲಕ್ಷ್ಮಣನ ಕುಟುಂಬವೇ ಇಲ್ಲವಾಗಿದೆ ಎಂದುಕೊಂಡಿದ್ದ ಸಮಯದಲ್ಲಿ ದೇವನಹಳ್ಳಿ ಚಿತ್ರದ ಮುಹೂರ್ತಕ್ಕೆ ಅವರ ಕುಟುಂಬದವರನ್ನು ಕರೆಸಿ ಪತ್ರಕರ್ತರಿಗೆ ಪರಿಚಯಿಸಿದ ಪಲ್ಲಕ್ಕಿ ಈಗ ಅದೇ ಚಿತ್ರವನ್ನು ಮಾಡಲು ಹೊರಟಿದ್ದಾರೆ.

  ಆಶಾಡ ಮುಗಿದ ನಂತರ ಚಿತ್ರೀಕರಣ ಪ್ರಾರಂಭವಾಗಲಿರುವ ಈ ಚಿತ್ರದಲ್ಲಿ ಅಲ್ಲಮಪ್ರಭು ಹಾಗೂ ಬಸವಣ್ಣನವರ ವಚನಗಳನ್ನೂ ಸಹ ಬಳಸಿಕೊಳ್ಳಲಾಗುವುದು. ಚಿತ್ರಕ್ಕೆ ಬಿ.ಎಲ್. ವೇಣು ಸಂಭಾಷಣೆ, ಎಂ.ಆರ್. ಸೀನು ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ಸುರೇಶ್ ಅರಸ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ, ಡಾ. ಬರಗೂರು ರಾಮಚಂದ್ರಪ್ಪ, ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಡಾ.ದೊಡ್ಡರಂಗೇಗೌಡರ ಸಾಹಿತ್ಯವಿದ್ದು ತಾರಾಬಳಗದ ಆಯ್ಕೆ ನಡೆಯುತ್ತಿದೆ. (ಒನ್ಇಂಡಿಯಾ ಕನ್ನಡ)

  English summary
  Kannada film director Pallakki all set to direct a historical film on Sindhura Lakshmana (1898 - 1922) was an revolutionary Indian freedom fighter who engaged in violent freedom movement against British Colonial Government in India. The movie titled as 'Shoora Sindhura Lakshmana'. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X