ಗಾಡ್ ಆಫ್ ಕ್ರಿಕೆಟ್ ಜೊತೆ ಸಿಹಿ ಕಹಿ ಚಂದ್ರು ಪುತ್ರಿ

''ಇದು ನನ್ನ ಜೀವನದ ಮೋಸ್ಟ್ ಮೆಮೋರೆಬಲ್ ಮೂಮೆಂಟ್'' ಎಂದು ತಮ್ಮ ಖುಷಿಯ ಕ್ಷಣವನ್ನು ನಮ್ಮ ಜೊತೆಗೆ ಹಂಚಿಕೊಂಡರು ನಟಿ ಹಿತಾ ಚಂದ್ರಶೇಖರ್.

ನಟ ಸಿಹಿ ಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಖರ್ ಕಳೆದ ವರ್ಷ ವಿವಾಹವಾದರು. ನಟ ಕಿರಣ್ ಜೊತೆಗೆ ಮದುವೆಯಾದ ಮೇಲೆ ಈಗ ಅವರು ಮುಂಬೈಗೆ ಶಿಫ್ಟ್ ಆಗಿದ್ದಾರೆ. ಅಲ್ಲಿ ಜಾಹಿರಾತುಗಳಲ್ಲಿ ನಟಿಸುತ್ತಿದ್ದಾರೆ.

ಹೀಗಿರುವಾಗ ಹಿತಾಗೆ ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಜಾಹಿರಾತು ಒಂದರಲ್ಲಿ ಅವರ ಜೊತೆಗೆ ನಟಿಸಿದ್ದಾರೆ. ಫ್ಯಾನ್ ಕಂಪನಿವೊಂದರ ಜಾಹಿರಾತು ಇದಾಗಿದ್ದು, ನಿನ್ನೆ ಅದರ ಚಿತ್ರೀಕರಣ ನಡೆದಿದೆ.

 Hitha Chandrashekar Did Ad Shot With Sachin Tendulkar

''ಒಂದು ವಾರದ ಮುಂಚೆ ಈ ಜಾಹಿರಾತು ಮಾಡುತ್ತೇನೆ ಎಂದು ನಿಗದಿಯಾಗಿತ್ತು. ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ. ಅಂತು ಸಚಿನ್ ರನ್ನು ನೋಡುವ ಅವರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ತುಂಬ ಖುಷಿ ಆಗುತ್ತದೆ. ಇದು ನನ್ನ ಜೀವನದ ಮೋಸ್ಟ್ ಮೆಮೋರೆಬಲ್ ಮೂಮೆಂಟ್'' ಎಂದರು ಹಿತಾ.

''ಸಚಿನ್ ಯಾರಿಗೆ ಇಷ್ಟ ಇಲ್ಲ ಹೇಳಿ.. ಚಿಕ್ಕ ವಯಸ್ಸಿನಿಂದ ನಾನು ಅವರ ಫ್ಯಾನ್. ಎಷ್ಟೋ ಅಭಿಮಾನಿಗಳು ಅವರನ್ನು ನೋಡಲು ಎಷ್ಟೊಂದು ಕಷ್ಟಪಡುತ್ತಾರೆ. ನನಗೆ ಈ ಜಾಹಿರಾತಿನ ಮೂಲಕ ಈ ಅದೃಷ್ಟ ಸಿಕ್ಕಿದೆ.'' ಎಂದು ಸಂತಸ ಹಿತಾ ಹಂಚಿಕೊಂಡಿದ್ದಾರೆ.

ಹಿತಾ ಚಂದ್ರಶೇಖರ್ '1/4 ಕೆಜಿ ಪ್ರೀತಿ', 'ಯೋಗಿ ದುನಿಯಾ', 'ಪ್ರೀಮಿಯರ್ ಪದ್ಮಿನಿ' ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

English summary
Kannada actress Hitha Chandrashekar did ad shot with Sachin Tendulkar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X