For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಮುದ್ದು ನಟಿ ನಿರ್ದೇಶಕಿ ಆದ್ರು.!

  By Bharathkumar
  |

  ನಟಿಯರು ನಿರ್ದೇಶಕಿಯರಾಗುವುದು ಅಪರೂಪ. ನಿರ್ದೇಶನ ಮಾಡುವ ಕನಸು ಹೊಂದಿದ್ದರು ತಮ್ಮ ಬ್ಯುಸಿ ನಟನೆಯಿಂದ ಆ ಕನಸನ್ನ ನನಸು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ರೆ, ಕನ್ನಡದ ಈ ಮುದ್ದು ನಟಿ ತಮ್ಮ ಬಹುದಿನದ ಆಸೆಯನ್ನ ಈಗ ಈಡೇರಿಸಿಕೊಳ್ಳುತ್ತಿದ್ದಾರೆ.

  ನಾವು ಹೇಳ್ತಿರುವುದು ಐಶಾನಿ ಶೆಟ್ಟಿ ಬಗ್ಗೆ. ನೀನಾಸಂ ಸತೀಶ್ ಅಭಿನಯದ 'ರಾಕೆಟ್' ಚಿತ್ರದಲ್ಲಿ ನಾಯಕಿ ಆಗಿದ್ದ ಐಶಾನಿ ಶೆಟ್ಟಿ ನಂತರ ಭಟ್ಟರ 'ವಾಸ್ತುಪ್ರಕಾರ'ದಲ್ಲಿ ಮಿಂಚಿದ್ದರು. ಆಮೇಲೆ, ಅಲ್ಲೊಂದು ಇಲ್ಲೊಂದು ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಮಧ್ಯೆ ತಮ್ಮ ನಿರ್ದೇಶನದ ಕನಸನ್ನ ನನಸು ಮಾಡಿಕೊಳ್ಳುವ ಸಾಹಸಕ್ಕೆ ಕೈಹಾಕಿದ್ದಾರೆ.

  ಹೌದು, ಐಶಾನಿ ಶೆಟ್ಟಿ ಕಿರುಚಿತ್ರವೊಂದನ್ನ ನಿರ್ದೇಶನ ಮಾಡುತ್ತಿದ್ದು, ಇದು ಮಹಿಳಾ ಪ್ರಧಾನ ಕಥೆಯಾಗಿದೆ. ಈ ಚಿತ್ರಕ್ಕೆ ಈಗ ನಾಯಕಿ ಆಗಿ ಹಿತಾ ಚಂದ್ರಶೇಖರ್ ಅವರನ್ನ ಆಯ್ಕೆ ಮಾಡಿಕೊಂಡಿದ್ದಾರೆ. ನೀನಾಸಂ ಸತೀಶ್ ಈ ಕಿರುಕುಚಿತ್ರಕ್ಕೆ ಬೆನ್ನಲುಬಾಗಿದ್ದಾರೆ. ಇನ್ನು ಚಿತ್ರಕ್ಕೆ 'ಕುಪ್ಪಿ' ಎಂದು ಟೈಟಲ್ ಕೂಡ ಫಿಕ್ಸ್ ಆಗಿದ್ದು, ಇದು ಕನಕಪುರದ ಒಂದು ಗ್ರಾಮದ ಹೆಸರಂತೆ.

  ಅಂದ್ಹಾಗೆ, ಹಳ್ಳಿಯಲ್ಲಿರುವ ತಾರತಮ್ಯದ ಕುರಿತು ಈ ಕಿರುಚಿತ್ರವಾಗಿದ್ದು, ಮನೋಹರ್ ಜೋಶಿ ಛಾಯಗ್ರಾಹಕರಾಗಿ ಕೆಲಸ ನಿರ್ವಹಿಸಲಿದ್ದಾರೆ. ಇನ್ನು 'ಕಹಿ' ಮತ್ತು 'ಶ್ರೀನಿವಾಸ ಕಲ್ಯಾಣ' ಚಿತ್ರಗಳಿಗೆ ಸಂಗೀತ ನೀಡಿದ್ದ ಮಿಥುನ್ ಮುಕುಂದನ್ ಅವರು ಸಂಗೀತ ಒದಗಿಸಿಲಿದ್ದಾರೆ.

  English summary
  Actress Aishani Shetty is currently Directing a women-centric short film titled Kuppi in a village in Kanakapura. She has chosen Hitha Chandrashekhar as the lead actress for her film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X