ಹೊಂಬಾಳೆ ಫಿಲ್ಮ್ಸ್ ಗೆ 6 ವರ್ಷ: ಪಾರ್ಟಿಯಲ್ಲಿ ಪುನೀತ್, ಯಶ್ ಭಾಗಿ

ಕನ್ನಡದ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ 6 ವರ್ಷಗಳನ್ನು ಪೂರೈಸಿದೆ. ಈ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡಿದೆ.

ನಿರ್ಮಾಪಕ ವಿಜಯ್ ಕಿರಗಂದೂರು ಏರ್ಪಾಡು ಮಾಡಿದ್ದ ಈ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಹಾಗೂ ಯಶ್ ಭಾಗಿಯಾಗಿದ್ದರು. ಯಶ್ ಗೆ ರಾಧಿಕಾ ಪಂಡಿತ್ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಕೇಕ್ ಗಳು ಗಮನ ಸೆಳೆದವು.

6 ವರ್ಷದಲ್ಲಿ 6 ಸಿನಿಮಾಗಳನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಪುನೀತ್ ರಾಜ್ ಕುಮಾರ್ ನಟನೆಯ 'ನಿನ್ನಿಂದಲೆ' ಸಿನಿಮಾದ ಮೂಲಕ ಮೊದಲ ಬಾರಿಗೆ ಹೊಂಬಾಳೆ ಫಿಲ್ಮ್ಸ್ ಚಿತ್ರನಿರ್ಮಾಣ ಪ್ರಾರಂಭ ಮಾಡಿತ್ತು. ಮೊದಲ ಸಿನಿಮಾ ಹೇಳಿಕೊಳ್ಳುವ ಮಟ್ಟಿಗೆ ದೊಡ್ಡ ಹಿಟ್ ಆಗಲಿಲ್ಲ.

Hombale Films Celebrated 6 Year Anniversary

ಆ ಬಳಿಕ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಸೇರಿ 'ಮಾಸ್ಟರ್ ಪೀಸ್' ಸಿನಿಮಾದ ನಿರ್ಮಾಣ ಮಾಡಿದರು. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಇದ್ದರೂ, ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಗಳಿಕೆ ಮಾಡಿತು. ಆ ನಂತರ 'ರಾಜಕುಮಾರ' ಸಿನಿಮಾ ಬಂತು.

'ರಾಜಕುಮಾರ' ಕನ್ನಡ ಚಿತ್ರರಂಗದಲ್ಲಿಯೇ ದೊಡ್ಡ ದಾಖಲೆ ಮಾಡಿತು. ಹಣ ಮಾತ್ರವಲ್ಲದೆ, ಒಂದು ಒಳ್ಳೆಯ ಸಿನಿಮಾವನ್ನು ನಿರ್ಮಾಣ ಮಾಡಿದ ಹೆಸರು ಹೊಂಬಾಳೆ ಫಿಲ್ಮ್ಸ್ ಪಡೆಯಿತು. ಸಂತೋಷ್ ಆನಂದ್ ರಾಮ್ ಈ ಸಿನಿಮಾದ ನಿರ್ದೇಶನ ಮಾಡಿದ್ದರು.

ಹೊಂಬಾಳೆ ಫಿಲ್ಮ್ಸ್ ಹೆಸರು ದೇಶ ಮಟ್ಟದಲ್ಲಿ ತಲುಪುವಂತೆ ಮಾಡಿದ್ದು, 'ಕೆಜಿಎಫ್' ಸಿನಿಮಾ. ಈ ಸಿನಿಮಾ ಕನ್ನಡ ಚಿತ್ರರಂಗದ ದಿಕ್ಕನ್ನು ಬದಲು ಮಾಡಿತ್ತು. ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆದರು.

ಈ ಸಿನಿಮಾಗಳ ನಂತರ 'ಕೆಜಿಎಫ್ 2' ಹಾಗೂ 'ಯುವರತ್ನ' ಸಿನಿಮಾಗಳು ಹೊಂಬಾಳೆ ಬ್ಯಾನರ್ ಕಡೆಯಿಂದ ಬರುತ್ತಿವೆ. ಈ ಎರಡು ಚಿತ್ರಗಳು ಏಕಾಕಾಲದಲ್ಲಿ ನಿರ್ಮಾಣ ಆಗುತ್ತಿದೆ. ಮುಂದಿನ ವರ್ಷ ಈ ಎರಡೂ ಸಿನಿಮಾಗಳು ಬಿಡುಗಡೆ ಆಗುತ್ತಿವೆ.

More from Filmibeat

English summary
Hombale films celebrated 6 year anniversary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X