Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೊಂಬಾಳೆ ಫಿಲ್ಮ್ಸ್ ಮೊದಲ ಚಿತ್ರ 'ನಿನ್ನಿಂದಲೇ'ಗೆ 9 ವರ್ಷ
ಹೊಂಬಾಳೆ ಫಿಲ್ಮ್ಸ್ ಸದ್ಯಕ್ಕೆ ಭಾರತ ಚಲನಚಿತ್ರರಂಗದ ದೊಡ್ಡ ಹಾಗೂ ಅತಿ ನಂಬುಗೆಯ ಚಿತ್ರ ನಿರ್ಮಾಣ ಸಂಸ್ಥೆಗಳ ಸಾಲಿನಲ್ಲಿರುವ ಪ್ರೊಡಕ್ಷನ್ ಹೌಸ್. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಂಡವಾಳ ಹೂಡಿದೆ ಎಂದರೆ ಚಿತ್ರ ಖಂಡಿತ ಸೂಪರ್ ಹಿಟ್ ಎಂಬುದು ಸಿನಿ ರಸಿಕನ ತಲೆಯಲ್ಲಿರುವ ಸಾಮಾನ್ಯ ಅಂಶ.
ಕಳೆದ ವರ್ಷ ಕೆಜಿಎಫ್ ಚಾಪ್ಟರ್ 2 ಹಾಗೂ ಕಾಂತಾರ ಮೂಲಕ ಭಾರತ ಚಿತ್ರರಂಗದ ಗಲ್ಲಾಪೆಟ್ಟಿಗೆಯಲ್ಲಿ ಸುನಾಮಿ ಎಬ್ಬಿಸಿದ್ದ ಹೊಂಬಾಳೆ ಫಿಲ್ಮ್ಸ್ ಮೊದಲು ಬಂಡವಾಳ ಹೂಡಿದ್ದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಚಿತ್ರಕ್ಕೆ. ಹೌದು, 2014ರ ಜನವರಿ 16ರಂದು ತೆರೆಗೆ ಬಂದಿದ್ದ ಪುನೀತ್ ನಟನೆಯ 'ನಿನ್ನಿಂದಲೇ' ಮೂಲಕ ಹೊಂಬಾಳೆ ಫಿಲ್ಮ್ಸ್ ತನ್ನ ಮೊದಲ ಪುಟ್ಟ ಹೆಜ್ಜೆಯನ್ನು ಇಟ್ಟಿತ್ತು. ಇಂದಿಗೆ ( ಜನವರಿ 16 ) ಈ ಚಿತ್ರ ಬಿಡುಗಡೆಯಾಗಿ 9 ವರ್ಷಗಳು ಕಳೆದಿವೆ.
ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡದಿದ್ದರೂ ಆಗಿನ ಸಮಯಕ್ಕೆ ಮೊದಲ ದಿನ 2.5 ಕೋಟಿ ಕಲೆಕ್ಷನ್ ಮಾಡಿ ಕನ್ನಡ ಚಲನಚಿತ್ರರಂಗದ ಅತಿದೊಡ್ಡ ಓಪನಿಂಗ್ ಎಂಬ ದಾಖಲೆ ಬರೆದಿತ್ತು. ತೆಲುಗು ನಿರ್ದೇಶಕ ಜಯಂತ್ ಸಿ ಪರಾಂಜೆ ಹೆಣೆದಿದ್ದ ಸ್ಲೋ ಲವ್ ಟ್ರ್ಯಾಕ್ ಕನ್ನಡ ಸಿನಿ ರಸಿಕರಿಗೆ ಇಷ್ಟವಾಗಿರಲಿಲ್ಲ. ಬಿಡುಗಡೆಗೂ ಮುನ್ನ ದೊಡ್ಡ ನಿರೀಕ್ಷೆ ಹುಟ್ಟುಹಾಕಿದ್ದ ಚಿತ್ರದ ಹಾಡುಗಳು ಇಂದಿಗೂ ಸಹ ಕನ್ನಡ ಸಿನಿ ರಸಿಕರ ಫೇವರಿಟ್. ಈ ಚಿತ್ರದಲ್ಲಿ ನಟ ಪುನೀತ್ ರಾಜ್‍ಕುಮಾರ್ ಯಾವುದೇ ಡ್ಯೂಪ್ ಬಳಸದೇ ಅಪಾಯಕಾರಿ ಸ್ಕೈ ಡೈವಿಂಗ್ ಮಾಡಿದ್ದರು. ಇಂದಿಗೂ ಸಹ ಅದು ದಕ್ಷಿಣದ ಯಾವ ನಟನೂ ಮಾಡಿರದ ಸಾಹಸ.
ಹೀಗೆ ಈ ಚಿತ್ರದ ಮೂಲಕ ಶುರುವಾದ ಹೊಂಬಾಳೆ ಫಿಲ್ಮ್ಸ್ ಸಿನಿ ಜರ್ನಿಯಲ್ಲಿ ಸಂಸ್ಥೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಾಸ್ಟರ್ ಪೀಸ್ ಚಿತ್ರವನ್ನು ನಿರ್ಮಿಸಿತು ನಿರ್ಮಿಸಿತು. ಈ ಚಿತ್ರ ಸಾಧಾರಣ ಎಂಬ ಪ್ರತಿಕ್ರಿಯೆಯನ್ನು ಪಡೆದುಕೊಂಡಿತು. ಬಳಿಕ ಮತ್ತೆ ಪುನೀತ್ ಅವರಿಗೆ ತನ್ನ ಮೂರನೇ ಚಿತ್ರವನ್ನು ನಿರ್ಮಿಸಿದ ಹೊಂಬಾಳೆ ಆ ಬಾರಿ ರಾಜಕುಮಾರ ನಿರ್ಮಿಸಿ ಇಂಡಸ್ಟ್ರಿ ಹಿಟ್ ಬಾರಿಸಿ ಬೃಹತ್ ಯಶಸ್ಸು ಕಂಡಿತು. ಈ ಯಶಸ್ಸಿನ ಮೂಲಕ ಶುರುವಾದ ಹೊಂಬಾಳೆ ಫಿಲ್ಮ್ಸ್ ಗೆಲುವಿನ ನಾಗಾಲೋಟ ನಂತರ ಕೆಜಿಎಫ್ ಚಾಪ್ಟರ್ 1, ಯುವರತ್ನ, ಕೆಜಿಎಫ್ ಚಾಪ್ಟರ್ 2 ಹಾಗೂ ಕಾಂತಾರ ಮೂಲಕ ಎಲ್ಲೂ ನಿಲ್ಲದೇ ಸಾಗಿದೆ.