For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್ ಜೊತೆ ಹೊಂಬಾಳೆ 12ನೇ ಸಿನಿಮಾ: ಸಂತೋಷ್ ನಿರ್ದೇಶಕ

  |

  ಹೊಂಬಾಳೆ ಫಿಲಂಸ್ ಅಡಿಯಲ್ಲಿ ತಯಾರಾಗಲಿರುವ 12ನೇ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಣೆಯಾಗಿದ್ದು, ನವರಸ ನಾಯಕ ಜಗ್ಗೇಶ್ ಜೊತೆ ಹೊಸ ಚಿತ್ರ ಆರಂಭಿಸಿದ್ದಾರೆ. ಈ ಚಿತ್ರವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡ್ತಿದ್ದು, 'ರಾಘವೇಂದ್ರ ಸ್ಟೋರ್ಸ್' ಎಂದು ಹೆಸರಿಡಲಾಗಿದೆ.

  ಈ ಕುರಿತು ಹೊಂಬಾಳೆ ಫಿಲಂಸ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಸಿದ್ದು, ''ಅನ್ನದಾತೋ ಸುಖೀಭವ, ನಮ್ಮ ಮುಂದಿನ ಚಿತ್ರ ನವರಸ ನಾಯಕ ಜಗ್ಗೇಶ್ ಅವರ ಜೊತೆ. ಸಂತೋಷ್ ಆನಂದ್ ರಾಮ್ ನಿರ್ದೇಶಕ. ನವೆಂಬರ್ 22 ರಿಂದ ಚಿತ್ರೀಕರಣ ಅರಂಭ'' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

  ಸಂತೋಷ್ ಆನಂದರಾಮ್ ರಾತ್ರೋರಾತ್ರಿ ನಟ ಜಗ್ಗೇಶ್ ಗೆ ಫೋನ್ ಮಾಡಿ ಹೇಳಿದ್ದೇನು? ಸಂತೋಷ್ ಆನಂದರಾಮ್ ರಾತ್ರೋರಾತ್ರಿ ನಟ ಜಗ್ಗೇಶ್ ಗೆ ಫೋನ್ ಮಾಡಿ ಹೇಳಿದ್ದೇನು?

  ಹೊಸ ಚಿತ್ರದ ಬಗ್ಗೆ ನಟ ಜಗ್ಗೇಶ್ ಸಹ ಟ್ವೀಟ್ ಮಾಡಿದ್ದು, ''ನಗಬೇಕು ನಗಿಸಬೇಕು ಇದೆ ನನ್ನ ಧರ್ಮ..ಫುಲ್‌ಮೀಲ್ಸ್ ಹಬ್ಬದೂಟ'' ಎಂದಿದ್ದಾರೆ. ಸಂತೋಷ್ ಅನಂದ್ ರಾಮ್ ಕೆಲಸದ ಬಗ್ಗೆ ಬಹಳ ಸಲ ಜಗ್ಗೇಶ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ, ಅವರ ಜೊತೆಯಲ್ಲಿಯೇ ಸಿನಿಮಾ ಮಾಡ್ತಾರೆ ಎನ್ನುವುದು ಊಹಿಸಿರಲಿಲ್ಲ. ಇದೀಗ, ಈ ಕಾಂಬಿನೇಷನ್‌ನಲ್ಲಿ ಬರಲಿರುವ 'ರಾಘವೇಂದ್ರ ಸ್ಟೋರ್ಸ್' ಥ್ರಿಲ್ ಹೆಚ್ಚಿಸಿದೆ. ಮುಂದೆ ಓದಿ...

  ಹೊಂಬಾಳೆ ಫಿಲಂಸ್ 12ನೇ ಚಿತ್ರ: ತಲೆಗೆ ಹುಳ ಬಿಟ್ಕೊಂಡ ಫ್ಯಾನ್ಸ್ಹೊಂಬಾಳೆ ಫಿಲಂಸ್ 12ನೇ ಚಿತ್ರ: ತಲೆಗೆ ಹುಳ ಬಿಟ್ಕೊಂಡ ಫ್ಯಾನ್ಸ್

  ರಾಘವೇಂದ್ರ ಸ್ಟೋರ್ಸ್ ಸಿನ್ಸ್ 1972

  'ರಾಘವೇಂದ್ರ ಸ್ಟೋರ್ಸ್ ಸಿನ್ಸ್ 1972' ಚಿತ್ರ ಔಟ್ ಅಂಡ್ ಔಟ್ ಕಾಮಿಡಿ ಜಾನರ್ ಎನ್ನುವುದು ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ನಲ್ಲೇ ಗೊತ್ತಾಗುತ್ತಿದೆ. ಅದಕ್ಕೆ ಜಗ್ಗೇಶ್ ಅವರು ಹೀರೋ ಅಂದ್ಮೇಲೆ ಸಹಜವಾಗಿ ನಿರೀಕ್ಷೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ರಾಜಕುಮಾರ, ಯುವರತ್ನ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಸಂತೋಷ್ ಆನಂದ್ ರಾಮ್ ನಿರ್ದೇಶನ ಅಂದ್ರೆ ಕುತೂಹಲ ಗಗನಕ್ಕೇರುತ್ತದೆ.

  ಹೊಂಬಾಳೆ ಜೊತೆ ಜಗ್ಗೇಶ್ ಮೊದಲ ಚಿತ್ರ

  ಅಂದ್ಹಾಗೆ, ಹೊಂಬಾಳೆ ಫಿಲಂಸ್ ಜೊತೆ ಜಗ್ಗೇಶ್ ಅವರದ್ದು ಮೊದಲ ಸಿನಿಮಾ. ಸಂತೋಷ್ ಆನಂದ್ ರಾಮ್ ಅವರದ್ದು ಅಧಿಕೃತವಾಗಿ ಮೂರನೇ ಚಿತ್ರ. ಯುವರತ್ನ ನಂತರ ಮತ್ತೊಮ್ಮೆ ಪುನೀತ್ ರಾಜ್ ಕುಮಾರ್‌ಗೆ ಸಂತೋಷ್ ಆನಂದ್ ಸಿನಿಮಾ ಮಾಡ್ತಿದ್ದು, ಅದಕ್ಕೆ ಹೊಂಬಾಳೆ ಅವರೇ ಬಂಡವಾಳ ಹಾಕಲಿದ್ದಾರೆ. ಈ ಪ್ರಾಜೆಕ್ಟ್ ಆರಂಭವಾಗಲು ಇನ್ನು ಸಮಯಬೇಕಾಗಿದೆ. ಹಾಗಾಗಿ, ಅದಕ್ಕೂ ಮೊದಲು ವಿಭಿನ್ನವಾದ ಪ್ರಯತ್ನಕ್ಕೆ ರಾಜಕುಮಾರ ನಿರ್ದೇಶಕ ಕೈ ಹಾಕಿದ್ದಾರೆ.

  ಒಳ್ಳೆಯ ಸದಭಿರುಚಿ ಸಿನಿಮಾ ಆಗಲಿದೆ

  ಒಳ್ಳೆಯ ಸದಭಿರುಚಿ ಸಿನಿಮಾ ಆಗಲಿದೆ

  ಔಟ್ ಅಂಡ್ ಔಟ್ ಕಮರ್ಷಿಯಲ್ ಕಥೆಗಳಿಗೆ ಪ್ರಾಮುಖ್ಯತೆ ಕೊಡ್ತಿದ್ದ ಸಂತೋಷ್ ಆನಂದ್ ರಾಮ್ ಇದೇ ಮೊದಲ ಸಲ ವಿಭಿನ್ನವಾದ ಹಾಗೂ ಸದಭಿರುಚಿಯ ಸ್ಕ್ರಿಪ್ಟ್‌ಗೆ ಚಾಲನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ಮೂಲಕ ಹೊಂಬಾಳೆ ಸಂಸ್ಥೆ ಸಹ ವಿಶೇಷವಾದ ಪ್ರಾಜೆಕ್ಟ್‌ವೊಂದು ತಯಾರಿಸಲು ನಿರ್ಧರಿಸಿದೆ. ನವೆಂಬರ್ 22 ರಿಂದ ಈ ಚಿತ್ರ ಅಧಿಕೃತವಾಗಿ ಆರಂಭವಾಗಲಿದ್ದು, ಇನ್ನುಳಿದಂತೆ ನಾಯಕಿ ಅಥವಾ ಪ್ರಮುಖ ಕಲಾವಿದರು ಯಾರು ಎನ್ನುವುದು ತಿಳಿದಿಲ್ಲ.

  ಹೊಂಬಾಳೆ ಮುಂದಿನ ಸಿನಿಮಾಗಳು

  ಹೊಂಬಾಳೆ ಮುಂದಿನ ಸಿನಿಮಾಗಳು

  ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಮುಗಿಸಿದ್ದು, ಏಪ್ರಿಲ್ 2022ರಲ್ಲಿ ತೆರೆಗೆ ಬರಲಿದೆ. ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್‌ನಲ್ಲಿ ಸಲಾರ್ ಚಿತ್ರ ಬರ್ತಿದೆ. ಇದು 7ನೇ ಚಿತ್ರ. ಎಂಟನೇ ಸಿನಿಮಾ ಶ್ರೀಮುರಳಿ ಜೊತೆ 'ಬಘೀರಾ'. ಒಂಬತ್ತನೇ ಚಿತ್ರ ಪುನೀತ್ ರಾಜ್ ಕುಮಾರ್ ಮತ್ತು ಲೂಸಿಯಾ ಪವನ್ ಕುಮಾರ್ ಜೋಡಿಯ ದ್ವಿತ್ವ. ಹತ್ತನೇ ಚಿತ್ರ ರಕ್ಷಿತ್ ಶೆಟ್ಟಿ ನಿರ್ದೇಶನದ ರಿಚರ್ಡ್ ಆಂಟೋನಿ. ಹನ್ನೊಂದನೇ ಚಿತ್ರ ರಿಷಬ್ ಶೆಟ್ಟಿಯ ಕಾಂತಾರ. ಈಗ ಹನ್ನೊಂದನೇ ಸಿನಿಮಾ ಆರಂಭ. ಏಕಕಾಲಕ್ಕೆ ಆರು ಚಿತ್ರಗಳನ್ನು ಹೊಂಬಾಳೆ ಸಂಸ್ಥೆ ನಿರ್ಮಿಸುತ್ತಿದೆ.

  English summary
  Hombale Films signs Jaggesh for their 12th film titled, Raghavendra Stores, directed by Santhosh Ananddram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X