For Quick Alerts
  ALLOW NOTIFICATIONS  
  For Daily Alerts

  ಹೊಂಬಾಳೆ ಹೊಸ ಸಿನಿಮಾ: ಮತ್ತೆ ಸ್ಟಾರ್ ನಟನ ಕಡೆ ಅಭಿಮಾನಿಗಳ ಕಣ್ಣು

  |

  ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಬ್ಯಾಕ್ ಟು ಬ್ಯಾಕ್ ಹೊಸ ಹೊಸ ಪ್ರಾಜೆಕ್ಟ್‌ ಘೋಷಣೆ ಮಾಡುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು 'ಲೂಸಿಯಾ' ಪವನ್ ಕುಮಾರ್ ಕಾಂಬಿನೇಷನ್‌ನಲ್ಲಿ 'ದ್ವಿತ್ವ' ಸಿನಿಮಾ ಪ್ರಕಟಿಸಿ ಎರಡು ತಿಂಗಳು ಆಗಿಲ್ಲ. ಅಷ್ಟರೊಳಗೆ ರಕ್ಷಿತ್ ಶೆಟ್ಟಿ ಜೊತೆ 'ರಿಚರ್ಡ್ ಆಂಟೋನಿ' ಚಿತ್ರ ಅನೌನ್ಸ್ ಮಾಡಿದ್ದರು.

  ಕಾಂತಾರ ಹೊಸ ಸಿನಿಮಾ ಘೋಷಿಸಿ ಅಚ್ಚರಿ ಮೂಡಿಸಿದ KGF ನಿರ್ಮಾಪಕ

  'ಸಿಂಪಲ್ ಸ್ಟಾರ್' ಜೊತೆಗಿನ ಸಿನಿಮಾ ಘೋಷಣೆ ಮಾಡಿ ತಿಂಗಳು ಕಳೆದಿಲ್ಲ, ಅಷ್ಟರಲ್ಲಿ ಮತ್ತೊಂದು ಚಿತ್ರ ಕೈಗೆತ್ತಿಕೊಂಡಿದ್ದಾರೆ ವಿಜಯ್ ಕಿರಗಂದೂರ್. ಹೌದು, ಹೊಂಬಾಳೆ ಸಂಸ್ಥೆ 11ನೇ ಸಿನಿಮಾ ಆರಂಭಿಸುತ್ತಿರುವುದಾಗಿ ಮಾಹಿತಿ ನೀಡಿದೆ. ಹೊಂಬಾಳೆ 11 ಚಿತ್ರದ ಬಗ್ಗೆ ಅಪ್‌ಡೇಟ್ ಕೊಟ್ಟಿದ್ದು, ಆಗಸ್ಟ್ 6 ರಂದು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಟೈಟರ್ ಅನಾವರಣ ಮಾಡುವುದಾಗಿ ಹೇಳಿದೆ.

  ಕನ್ನಡ ಟು ಪ್ಯಾನ್‌ಇಂಡಿಯಾ: 'ಹೊಂಬಾಳೆ ಸಂಸ್ಥೆ' ಬೆಳೆದು ಬಂದ ಕಥೆಕನ್ನಡ ಟು ಪ್ಯಾನ್‌ಇಂಡಿಯಾ: 'ಹೊಂಬಾಳೆ ಸಂಸ್ಥೆ' ಬೆಳೆದು ಬಂದ ಕಥೆ

  ಈ ಸಲ ಯಾವ ಹೀರೋ ಜೊತೆ ಹೊಂಬಾಳೆ ಸಂಸ್ಥೆ ಸಿನಿಮಾ ಮಾಡಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಪುನೀತ್ ರಾಜ್ ಕುಮಾರ್, ಯಶ್, ಪ್ರಭಾಸ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ ಬುಕ್ ಮಾಡಿಕೊಂಡಿರುವ ವಿಜಯ್ ಕಿರಗಂದೂರ್ ಮುಂದಿನ ಚಿತ್ರಕ್ಕೆ ಯಾವ ನಾಯಕನಟನನ್ನು ಕರೆತರಲಿದೆ ಎಂಬ ಥ್ರಿಲ್ ಜಾಸ್ತಿ ಮಾಡಿದೆ. ಈ ಮಧ್ಯೆ ಹೊಂಬಾಳೆ ಸಂಸ್ಥೆ ಕೊಟ್ಟಿರುವ ಸುಳಿವು ನೋಡಿದ್ರೆ ಕನ್ನಡದ ಸ್ಟಾರ್ ನಟನನ್ನೇ ಟಾರ್ಗೆಟ್ ಮಾಡಿರಬಹುದು ಎಂಬ ಊಹೆ ಶುರುವಾಗಿದೆ. ಮುಂದೆ ಓದಿ...

  ಕಿಚ್ಚು ನೋಡಿ ಕಿಚ್ಚನ ಅಭಿಮಾನಿಗಳು ಥ್ರಿಲ್

  ಕಿಚ್ಚು ನೋಡಿ ಕಿಚ್ಚನ ಅಭಿಮಾನಿಗಳು ಥ್ರಿಲ್

  ಹೊಂಬಾಳೆ 11 ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ''ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ'' ಎಂದು ಕ್ಯಾಪ್ಶನ್ ಹಾಕಲಾಗಿದೆ. 'ಕಿಚ್ಚು' ಎನ್ನುವ ಪದ ದೊಡ್ಡದಾಗಿ ಬಿಂಬಿಸಲಾಗಿದೆ. ಇದನ್ನು ನೋಡಿದ ಚಿತ್ರಪ್ರೇಮಿಗಳು ಇದು ಪಕ್ಕಾ ಕಿಚ್ಚ ಸುದೀಪ್ ಜೊತೆ ಸಿನಿಮಾ ಎಂದು ಹೇಳುತ್ತಿದ್ದಾರೆ.

  ರಿಷಬ್ ಶೆಟ್ಟಿ ಪಕ್ಕಾ?

  ರಿಷಬ್ ಶೆಟ್ಟಿ ಪಕ್ಕಾ?

  ರಿಷಬ್ ಶೆಟ್ಟಿ ಜೊತೆ ಹೊಂಬಾಳೆ ಸಿನಿಮಾ ಮಾಡುವ ಬಗ್ಗೆ ಈ ಹಿಂದಿನಿಂದಲೂ ಚರ್ಚೆಯಾಗುತ್ತಿದೆ. ಕಳೆದ ಬಾರಿ ಹೊಂಬಾಳೆ 10ನೇ ಪ್ರಾಜೆಕ್ಟ್ ಘೋಷಣೆ ಸಂದರ್ಭದಲ್ಲೂ ರಿಷಬ್ ಹೆಸರು ಹೆಚ್ಚು ಸದ್ದು ಮಾಡಿತ್ತು. ಸ್ವತಃ ರಿಷಬ್ ಶೆಟ್ಟಿ ಅವರೇ ನಟಿಸಿ, ನಿರ್ದೇಶನ ಮಾಡಲಿರುವ ಚಿತ್ರಕ್ಕೆ ವಿಜಯ್ ಕಿರಗಂದೂರ್ ಬಂಡವಾಳ ಹಾಕಲಿದ್ದಾರೆ ಎಂಬ ಸುದ್ದಿ ಇದೆ. ಬಹುಶಃ 11ನೇ ಪ್ರಾಜೆಕ್ಟ್ ಇದೇ ಇರಬಹುದು ಎಂದು ಊಹಿಸುತ್ತಿದ್ದಾರೆ.

  ಸ್ಟಾರ್ ನಿರ್ದೇಶಕಿ ಜೊತೆ ಹೊಂಬಾಳೆ ಹೊಸ ಸಿನಿಮಾ? ಹೀರೋ ಬಗ್ಗೆ ಚರ್ಚೆಸ್ಟಾರ್ ನಿರ್ದೇಶಕಿ ಜೊತೆ ಹೊಂಬಾಳೆ ಹೊಸ ಸಿನಿಮಾ? ಹೀರೋ ಬಗ್ಗೆ ಚರ್ಚೆ

  ಶಿವಣ್ಣನ ಹೆಸರು ಕಾಮೆಂಟ್‌ನಲ್ಲಿದೆ

  ಶಿವಣ್ಣನ ಹೆಸರು ಕಾಮೆಂಟ್‌ನಲ್ಲಿದೆ

  ಹೊಂಬಾಳೆ ಸಂಸ್ಥೆಯ ಜೊತೆ ಶಿವರಾಜ್ ಕುಮಾರ್ ಸಿನಿಮಾ ಮಾಡಲಿ ಎಂಬ ಅಭಿಲಾಷೆ ವ್ಯಕ್ತಪಡಿಸುತ್ತಿದ್ದಾರೆ ಹ್ಯಾಟ್ರಿಕ್ ಹೀರೋ ಅಭಿಮಾನಿಗಳು. ಬಹುಶಃ ಸರ್ಪ್ರೈಸ್ ಎನ್ನುವಂತೆ ಕರುನಾಡ ಚಿಕ್ರವರ್ತಿ ಜೊತೆ ಹೊಸ ಚಿತ್ರ ಏನಾದರೂ ಅನೌನ್ಸ್ ಮಾಡಬಹುದಾ ಎಂದು ಗೆಸ್ ಮಾಡುತ್ತಿದ್ದಾರೆ.

  ಕೆಜಿಎಫ್ ಅಪ್‌ಡೇಟ್ ಕೊಡಿ ಸಾರ್

  ಕೆಜಿಎಫ್ ಅಪ್‌ಡೇಟ್ ಕೊಡಿ ಸಾರ್

  ಒಂದರ ಹಿಂದೆ ಮತ್ತೊಂದರಂತೆ ಹೊಸ ಸಿನಿಮಾಗಳನ್ನು ಅನೌನ್ಸ್ ಮಾಡುತ್ತಿರುವ ಹೊಂಬಾಳೆ ಫಿಲಂಸ್‌, ಕೆಜಿಎಫ್ ಚಾಪ್ಟರ್2 ಚಿತ್ರದ ರಿಲೀಸ್ ಬಗ್ಗೆ ಯಾವುದೇ ಅಪ್‌ಡೇಟ್ ಕೊಟ್ಟಿಲ್ಲ. ಹೊಸ ಸಿನಿಮಾ ಅನೌನ್ಸ್ ಮಾಡ್ತೇವೆ ಎಂದು ಪೋಸ್ಟ್ ಹಾಕಿದ್ದರೂ, ಮೊದಲು ಕೆಜಿಎಫ್ ಚಾಪ್ಟರ್ 2 ರಿಲೀಸ್ ಬಗ್ಗೆ ಮಾಹಿತಿ ಕೊಡಿ ಎಂದು ಫ್ಯಾನ್ಸ್ ಆಗ್ರಹಿಸುತ್ತಿದ್ದಾರೆ.

  ಪ್ಯಾನ್ ಇಂಡಿಯಾ ನಿರ್ಮಾಣ ಸಂಸ್ಥೆ

  ಪ್ಯಾನ್ ಇಂಡಿಯಾ ನಿರ್ಮಾಣ ಸಂಸ್ಥೆ

  ''ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ'' ಎಂದು ಕನ್ನಡದಲ್ಲಿ ಪೋಸ್ಟ್ ಹಾಕಿರುವುದನ್ನು ಗಮನಿಸಿದರೆ ಇದು ಪಕ್ಕಾ ಕನ್ನಡ ಸಿನಿಮಾ ಎನ್ನುವುದು ಖಾತ್ರಿಯಾಗಿದೆ. ಜೊತೆಗೆ ಹೊಂಬಾಳೆ ಸಂಸ್ಥೆ ಎನ್ನುಬುದು ಈಗ ಪ್ಯಾನ್ ಮಟ್ಟದಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದೆ. ತಮಿಳು ನಿರ್ದೇಶಕಿ ಸುಧಾ ಕೊಂಗರಾ ಜೊತೆಯೂ ಮಾತುಕತೆ ಆಗ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಅಧಿಕೃತವಾದ ಮಾಹಿತಿ ಇಲ್ಲ.

  'ಸಲಾರ್' ಚಿತ್ರೀಕರಣ

  'ಸಲಾರ್' ಚಿತ್ರೀಕರಣ

  ಕೆಜಿಎಫ್ ಚಾಪ್ಟರ್ 2 ಸಿನಿಮಾ ಶೂಟಿಂಗ್ ಮುಗಿಸಿರುವ ಪ್ರಶಾಂತ್ ನೀಲ್, ಈಗ ಪ್ರಭಾಸ್ ಜೊತೆಗಿನ ಸಲಾರ್ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನೂ ಸಹ ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಪ್ರಸ್ತುತ, ಎರಡನೇ ಹಂತದ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಶ್ರುತಿ ಹಾಸನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Hombale Films to revealing their 11th project title and first look on 6th august at 11.43 am.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X