»   » 'ಟಗರು' ನೋಡಿದ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಏನು ಇಷ್ಟ ಆಯ್ತು?

'ಟಗರು' ನೋಡಿದ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಏನು ಇಷ್ಟ ಆಯ್ತು?

Posted By:
Subscribe to Filmibeat Kannada
'ಟಗರು' ನೋಡಿದ ಸಚಿವ ರಾಮಲಿಂಗಾ ರೆಡ್ಡಿ ಏನಂದ್ರು ? | Filmibeat Kannada

ಶಿವರಾಜ್ ಕುಮಾರ್ ಅವರ 'ಟಗರು' ಸಿನಿಮಾವನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಡಿಫರೆಂಟ್ ಸ್ಕ್ರೀನ್ ಪ್ಲೇ ಮೂಲಕ ಬಂದಿರುವ 'ಟಗರು' ನೋಡುಗರಿಗೆ ಹೊಸ ಅನುಭವನ್ನು ನೀಡುತ್ತಿದೆ. ಸದ್ಯ ಈ ಚಿತ್ರವನ್ನು ಗೃಹ ಸಚಿವ ರಾಮಲಿಂಗಾ ರೆಡ್ಡಿ ಸಹ ನೋಡಿದ್ದಾರೆ.

ಸಚಿವ ರಾಮಲಿಂಗಾ ರೆಡ್ಡಿ ಜಿ.ಪಿ.ನಗರದ ಸಿದ್ಧಲಿಂಗೇಶ್ವರ ಚಿತ್ರಮಂದಿರದಲ್ಲಿ ನಿನ್ನೆ 'ಟಗರು' ಸಿನಿಮಾವನ್ನು ವೀಕ್ಷಿಸಿದ್ದಾರೆ. ಶಿವರಾಜ್ ಕುಮಾರ್ ಸಿನಿಮಾದಲ್ಲಿ ಶಿವ ಎಂಬ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದು, ರಾಮಲಿಂಗಾ ರೆಡ್ಡಿ ಅವರಿಗೆ ಆ ಪಾತ್ರ ತುಂಬ ಇಷ್ಟ ಆಗಿದೆಯಂತೆ.

ಸಿನಿಮಾ ನೋಡಿ ಬಂದ ಸಚಿವರು ''ಸಿನಿಮಾ ತುಂಬ ಚೆನ್ನಾಗಿದೆ. ಶಿವರಾಜ್ ಕುಮಾರ್ ಅವರ ನಟನೆ ಇಷ್ಟ ಆಯ್ತು. ಒಬ್ಬ ಪೊಲೀಸ್ ಅಧಿಕಾರಿ ಹೇಗೆ ಕರ್ತವ್ಯ ಪ್ರಜ್ಞೆ ಮೆರೆಯುತ್ತಾನೆ ಎನ್ನುವುದನ್ನು ಸಿನಿಮಾದಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಇಡೀ ಸಿನಿಮಾ ನೈಜವಾಗಿ ಮೂಡಿಬಂದಿದೆ.'' ಎಂದು ಹೇಳಿದ್ದಾರೆ.

Home minister Ramalinga Reddy spoke about Tagaru kannada movie

ಅಂದಹಾಗೆ, 'ಟಗರು' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದೆ. ಸಿನಿಮಾದಲ್ಲಿ ಮುಖ್ಯವಾಗಿ ಪಾತ್ರಗಳ ಬಗ್ಗೆ ಸ್ಕ್ರೀನ್ ಪ್ಲೇ ಬಗ್ಗೆ ಮೆಚ್ಚುಗೆ ಕೇಳಿಬಂದಿದೆ. ಟಗರು ಶಿವ, ಡಾಲಿ, ಚಿಟ್ಟೆ, ಕಾಕ್ರೋಜ್, ಕಾನ್ಸ್ ಟೇಬಲ್ ಸರೋಜ, ಅಂಕಲ್ ಪಾತ್ರಗಳು ನೋಡುಗರ ಗಮನ ಸೆಳೆಯುತ್ತಿದೆ.

ವಿಮರ್ಶೆ: ಟಗರು ಖದರು, ಡಾಲಿ ಪೊಗರು, ಸ್ಕ್ರೀನ್ ಪ್ಲೇ ಸೂಪರ್ರು

'ಟಗರು' ಸಿನಿಮಾದ 'ಕಾನ್ಸ್ ಟೇಬಲ್ ಸರೋಜ' ಯಾರು ಗೊತ್ತಾ ?

English summary
Home minister of karnataka Ramalinga Reddy spoke about Kannada actor Shiva Rajkumar's Tagaru kannada movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada