»   » ಶಿವಣ್ಣನ 'ಟಗರು' ನೋಡಲಿದ್ದಾರೆ ಗೃಹ ಸಚಿವ ರಾಮಲಿಂಗಾರೆಡ್ಡಿ

ಶಿವಣ್ಣನ 'ಟಗರು' ನೋಡಲಿದ್ದಾರೆ ಗೃಹ ಸಚಿವ ರಾಮಲಿಂಗಾರೆಡ್ಡಿ

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನವಾಗುತ್ತಿದೆ. ಇದೀಗ, ಶಿವಣ್ಣನ ಟಗರು ಚಿತ್ರವನ್ನ ಕರ್ನಾಟಕ ಸರ್ಕಾರದ ಗೃಹ ಸಚಿವರಾದ ರಾಮಲಿಂಗಾರೆಡ್ಡಿ ಅವರು ವೀಕ್ಷಿಸಲಿದ್ದಾರೆ.

ಜೆಪಿ ನಗರದ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಫೆಬ್ರವರಿ 28 ರಂದು ಸಂಜೆ 4 ಗಂಟೆ ಶೋವನ್ನ ನಟ ಶಿವರಾಜ್ ಕುಮಾರ್ ಮತ್ತು ತಂಡದ ಜೊತೆ ಹೋಮ್ ಮಿನಿಸ್ಟರ್ ನೋಡಲಿದ್ದಾರೆ. ವಿಶೇಷ ಆಹ್ವಾನಿತರಿಗೆ ಮಾತ್ರ ಪ್ರವೇಶ ಏರ್ಪಡಿಸಿಲಾಗಿದೆ.

ರಾಮಲಿಂಗಾರೆಡ್ಡಿ ಜೊತೆ ಅವರ ಮಗಳು ಸೌಮ್ಯರೆಡ್ಡಿ ಅವರು ಕೂಡ ಸಿನಿಮಾ ವೀಕ್ಷಿಸಲಿದ್ದಾರೆ. ಚಿತ್ರ ಆರಂಭಕ್ಕೂ ಮುನ್ನ ಅತಿಥಿಗಳ ಜೊತೆ ಒಂದು ಸಂವಾದ ಕೂಡ ಏರ್ಪಡಿಲಾಗಿದೆ.

Home minister ramalinga reddy watching tagaru

'ಟಗರು' ಸಿನಿಮಾದ 'ಕಾನ್ಸ್ ಟೇಬಲ್ ಸರೋಜ' ಯಾರು ಗೊತ್ತಾ ?

ಅಂದ್ಹಾಗೆ, ದುನಿಯಾ ಸೂರಿ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಇಲಾಖೆ ಮತ್ತು ಅಂಡರ್ ವರ್ಲ್ಡ್ ಕಥಾಹಂದರವನ್ನ ಒಳಗೊಂಡಿರುವ ಚಿತ್ರದಲ್ಲಿ ರೌಡಿಗಳನ್ನ ಪೊಲೀಸ್ ಆಫೀಸರ್ ಹೇಗೆ ಮಟ್ಟ ಹಾಕ್ತಾರೆ ಎಂಬುದನ್ನ ರೋಚಕವಾಗಿ ತೋರಿಸಲಾಗಿದೆ.

Home minister ramalinga reddy watching tagaru

ಟಗರು' ಹುಟ್ಟುಹಾಕಿದ ವಿವಾದ: ಸೂರಿ ವಿರುದ್ಧ ರೊಚ್ಚಿಗೆದ್ದ ಶಿವಣ್ಣ ಫ್ಯಾನ್ಸ್.!

ಶಿವರಾಜ್ ಕುಮಾರ್ ಜೊತೆಯಲ್ಲಿ ಧನಂಜಯ್ ಮತ್ತು ವಸಿಷ್ಠ ಸಿಂಹ ಖಳನಾಯಕರಾಗಿ ಅಭಿನಯಿಸಿದ್ದಾರೆ. ಭಾವನಾ ಮತ್ತು ಮಾನ್ವಿತ ಹರೀಶ್ ಇಬ್ಬರು ನಾಯಕಿಯರು. ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಫೆಬ್ರವರಿ 23ರಂದು ತೆರೆಕಂಡಿರುವ 'ಟಗರು' ಯಶಸ್ವಿ ಪ್ರದರ್ಶನ ಕಾಣುತ್ತಿದೆ.

English summary
Home Minister Of Karnataka Watching Tagaru With Dr Shivarajkumar Siddalingeshwara Theater 28th Feb 2018 Wednesday 4pm Show

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada