For Quick Alerts
  ALLOW NOTIFICATIONS  
  For Daily Alerts

  ಹೆಣ್ಣುಮಕ್ಕಳನ್ನು ನಿಂದಿಸದೆ 30 ದಿನದಲ್ಲಿ ಬೈಯುವುದನ್ನು ಕಲಿಯಿರಿ

  |

  'ಶೇಕಡಾ 98ರಷ್ಟು ಗಂಡಸರು ಇತರೆ ಗಂಡಸರಿಗೆ ಬೈಯುವಾಗ ಹೆಣ್ಣು ಮಕ್ಕಳನ್ನು ನಿಂದಿಸುತ್ತಾರೆ'. ನಿಂದಿಸಿದ ನಂತರವೂ ಈ ಬಗ್ಗೆ ಯಾರೊಬ್ಬರು ಪಶ್ಚಾತ್ತಾಪ ಪಟ್ಟಿರುವ ಉದಾಹರಣೆ ಇಲ್ಲ ಬಿಡಿ. ಮನುಷ್ಯನಿಗೆ ಕೋಪ ಬಂದಾಗ ಅಮ್ಮಾ...ಅಕ್ಕ....ಎಂಬ ಕೆಟ್ಟ ಪದಗಳೇ ಬಾಯಿಗೆ ಬರುವುದು. ಇದಕ್ಕೆ ಪರ್ಯಾಯ ಮಾರ್ಗವಿಲ್ಲದೇ ಚಿಂತೆಗೀಡಾಗಿರುವ ಜನರಿಗೆ ಒಳ್ಳೆಯವ ಅವಕಾಶ ಸಿಕ್ಕಿದೆ. ಅಮ್ಮ....ಅಕ್ಕ ಎಂಬ ಕೆಟ್ಟ ಪದಗಳ ಬಳಕೆಯಿಂದ ಹೊರಬರಲು ಹೊಸ ಯೋಜನೆಯನ್ನು ಪರಿಚಯ ಮಾಡಿದೆ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡ.

  'ಹೆಣ್ಣು ಮಕ್ಕಳನ್ನು ನಿಂದಿಸದೆ ಬಳಸಬಹುದಾದ ಕರ್ನಾಟಕ ಸಜ್ಜನ ಬೈಗುಳ ಕೋಷ್ಟಕ'ವನ್ನು ಬಿಡುಗಡೆ ಮಾಡಿದ್ದು, ಇನ್ಮುಂದೆ ಯಾರಾದರೂ ಬೈಯಲು ಹೊಸ ಪದಗಳು ಸಿಗಲ್ಲ ಎಂದು ಯೋಚಿಸುವವರು ಈ ಪದಗಳನ್ನು ಬಳಸಿಕೊಳ್ಳಬಹುದು. A to Zವರೆಗೂ ಹೊಸ ರೀತಿಯ ಬೈಗುಳಗಳು 'ಅಮ್ಮ, ಅಕ್ಕ...' ಟೀಸರ್ ಕೊಟ್ಟಿದೆ.

  ಹಾಸ್ಟೆಲ್ ಹುಡುಗರ ಬಿಲ್ಡಪ್ ನೋಡಿ ಸಿಟ್ಟಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ಹಾಸ್ಟೆಲ್ ಹುಡುಗರ ಬಿಲ್ಡಪ್ ನೋಡಿ ಸಿಟ್ಟಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

  'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡದೊಂದಿಗೆ ಕೈ ಜೋಡಿಸಿರುವ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್‌ಆರ್ ರಂಗನಾಥ್ ಸಹ ಹೊಸ ಬೈಗುಳವನ್ನು ಕರ್ನಾಟಕ ಜನತೆ ಕೊಡುಗೆಯಾಗಿ ಕೊಟ್ಟಿದ್ದಾರೆ. ನಿಮಗೆ ಕೋಪ ಬಂದಾಗ 'ಪಟಾಳ್' ಎಂದು ಬೈಯಿರಿ, ಇದಕ್ಕೆ ಅರ್ಥ-ಪರ್ಥ ಇಲ್ಲ ಎಂದು ಹೊಸ ಪದವೊಂದನ್ನು ಪರಿಚಯ ಮಾಡಿದ್ದಾರೆ.

  ಅಂದ್ಹಾಗೆ, ಪ್ರತಿಯೊಂದು ಹಂತದಲ್ಲೂ ಬಹಳ ವಿಭಿನ್ನವಾಗಿ ಪ್ರಚಾರ ಮಾಡುತ್ತಿರುವ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡ ಮತ್ತೊಂದು ಪ್ರಯತ್ನ ಇದಾಗಿದೆ. ಈ ಟೀಸರ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ.

  ಇದಕ್ಕೂ ಮುಂಚೆ ಕಿಚ್ಚ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಅವರು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದ ಪ್ರಚಾರದ ವಿಧಾನವನ್ನು ಮೆಚ್ಚಿಕೊಂಡಿದ್ದರು. ಬುರ್ಜ್ ಖಲೀಫಾ ಕಟ್ಟಡದ ಮೇಲಿಂದ ಟೀಸರ್ ಲಾಂಚ್ ಮಾಡ್ತೇವೆ ಎಂದು ಹೇಳಿ ಸುದ್ದಿಯಾಗಿದ್ದರು.

  'ಹಾಸ್ಟೆಲ್ ಹುಡುಗರ' ಪ್ರಮೋಷನ್‌ಗೆ ಕಿಚ್ಚ ಸುದೀಪ್ ಫಿದಾ'ಹಾಸ್ಟೆಲ್ ಹುಡುಗರ' ಪ್ರಮೋಷನ್‌ಗೆ ಕಿಚ್ಚ ಸುದೀಪ್ ಫಿದಾ

  'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾಗೆ ನಿತಿನ್ ಕೃಷ್ಣಮೂರ್ತಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಗುಲ್‌ಮೊಹರ್‌ ಫಿಲ್ಮ್ಸ್‌ ಮತ್ತು ವರುಣ್‌ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ತಯಾರಾಗಿದೆ. ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಕೋವಿಡ್ ಬಿಕ್ಕಟ್ಟು ಇಲ್ಲವಾಗಿದ್ದರೆ ಇಷ್ಟೊತ್ತಿಗಾಗಲೇ ಚಿತ್ರ ತೆರೆಗೆ ಬರಬೇಕಿತ್ತು. ಆದ್ರೀಗ, ಸಹಜ ಸ್ಥಿತಿ ಬರಲಿ ಎಂದು ಕಾಯುವಂತಾಗಿದೆ.

  ಟೀಸರ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

  English summary
  'Hostel Hudugaru Bekagiddare' movie team has released Amma Akka teaser today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X