Don't Miss!
- News
Green Peas Health Benefits: ಚಳಿಗಾಲದಲ್ಲಿ ಹೇರಳವಾಗಿ ದೊರೆಯುವ ಹಸಿ ಬಟಾಣಿಯ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು?
- Sports
ಹ್ಯಾರಿಸ್ ರೌಫ್ ಜೊತೆ ಭಾರತದ ಈ ವೇಗಿಯನ್ನು ಹೋಲಿಸಬೇಡಿ ಎಂದ ಪಾಕ್ ಮಾಜಿ ಕ್ರಿಕೆಟಿಗ
- Finance
America IT Company Layoffs: ಐಟಿ ಕಂಪನಿಗಳಲ್ಲಿ ಉದ್ಯೋಗ ಕಡಿತ: ಲಕ್ಷಾಂತರ ವೃತ್ತಿಪರರ ಬದುಕು ಅತಂತ್ರ
- Automobiles
ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದೆ 2023ರ ಹೋಂಡಾ ಸಿಟಿ ಕಾರು
- Technology
ಭಾರತದಲ್ಲಿ ವಿಶ್ವದ ಮೊದಲ PTZ ಕ್ಯಾಮೆರಾ ಪರಿಚಯಿಸಿದ ಸೋನಿ! ಇದರ ಕಾರ್ಯವೈಖರಿ ಹೇಗಿದೆ?
- Lifestyle
ಜ್ವರ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವುದೇಕೆ? ಜ್ವರ ಕಡಿಮೆಯಾಗಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
20 ಸಿನಿಮಾಗೆ ಸಹಿ ಮಾಡಿದ್ರೂ ಮ್ಯೂಸಿಕ್ ಕೊಡಂಗಿಲ್ಲ ಅಜನೀಶ್ ಲೋಕನಾಥ್: ಹುಡುಗರ ರೂಲ್ಸ್!
'ಕಾಂತಾರ' ಸಿನಿಮಾ ಮೂಲಕ ರಿಷಬ್ ಶೆಟ್ಟಿ, ಸಪ್ತಮಿಗೌಡರಂತೆಯೇ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಶೈನ್ ಆದವರು ಅಜನೀಶ್ ಲೋಕನಾಥ್. ಒಂದ್ಕಡೆ ಸಿನಿಮಾದ ಹಾಡುಗಳಿಗೆ ಮೆಚ್ಚುಗೆನೂ ಸಿಕ್ಕಿದೆ. ಅದೇ ಇನ್ನೊಂದು ಕಡೆ ವಿವಾದಕ್ಕೂ ಸಿಲುಕಿದೆ.
'ವರಹ ರೂಪಂ' ಹಾಡನ್ನು ಕಾಪಿ ಮಾಡಲಾಗಿದೆ ಅನ್ನೋ ಆರೋಪ-ಪ್ರತ್ಯಾರೋಪ ಇನ್ನೂ ನಡೆಯುತ್ತಲೇ ಇದೆ. ಯಾರು ಅದೇನೆ ಆರೋಪ ಮಾಡಿದರೂ ಪ್ರೇಕ್ಷಕರಂತೂ ಸಿನಿಮಾದ ಬೆಂಬಲಕ್ಕೆ ನಿಂತಿದ್ದರು. ಅಜನೀಶ್ ಮ್ಯೂಸಿಕ್‌ಗೆ ಚಪ್ಪಾಳೆ ತಟ್ಟಿದ್ದರು.
ಆದರೆ, ಈಗ ಹೇಳೋಕೆ ಹೊರಟಿರೋ ಮ್ಯಾಟರ್ ಇದಲ್ಲ. 'ಕಾಂತಾರ' ಸಿನಿಮಾ ಗೆಲ್ಲುತ್ತಿದ್ದಂತೆ ಅಜನೀಶ್ ಲೋಕನಾಥ್ ಫುಲ್ ಬ್ಯುಸಿಯಾಗಿಬಿಟ್ಟಿದ್ದಾರೆ. ಅದಕ್ಕೆ ಹುಡುಗರ ಗ್ಯಾಂಗ್ ಫುಲ್ ಗರಂ ಆಗಿಬಿಟ್ಟಿದೆ. ಅಸಲಿಗೆ ಏನಿದು ಮ್ಯಾಟರ್ ಅನ್ನೋದನ್ನು ತಿಳಿಯಲು ಮುಂದೆ ಓದಿ.

20 ಸಿನಿಮಾಗೆ ಅಜನೀಶ್ ಸಹಿ
'ಕಾಂತಾರ' ಸಿನಿಮಾ ಬಳಿಕ ಅಜನೀಶ್ ಲೋಕನಾಥ್ ಸುಮಾರು 20 ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದಕ್ಕೆ 8 ತಿಂಗಳಿನಿಂದ ಸಾಂಗ್ ಕಂಪೋಸ್ ಮಾಡಿಕೊಟ್ಟಿಲ್ಲ ಅನ್ನೋ ಆರೋಪ ಮಾಡ್ತಿದ್ದಾರೆ. ಈಗಾಗಲೇ ಒಂದು ವಿವಾದದಲ್ಲಿ ಸಿಕ್ಕಿಕೊಂಡಿರೋ ಅಜನೀಶ್ ಲೋಕನಾಥ್ ಮತ್ತೊಂದು ಕಾಮಟ್ರವರ್ಸಿಗೆ ಸಿಕ್ಕಿಕೊಂಡರೇ ಅನ್ನೋ ಅನುಮಾನ ಬರೋದು ಸಹಜ. ಆದರೆ, ಅಂತಹದ್ದೇನೂ ಆಗಿಲ್ಲ. ಮೊನ್ನೆ ತಾನೇ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ತಂಡ ಪ್ರಚಾರಕ್ಕಾಗಿ ಅಜನೀಶ್ ಲೋಕನಾಥ್ ಕಿಡ್ನಾಪ್ ಮಾಡಿರೋ ಪೋಸ್ಟರ್ ಬಿಟ್ಟಿದ್ದರು. ಅದರ ಮುಂದುವರೆದ ಭಾಗವಾಗಿ ಇಂದು (ನವೆಂಬರ್ 27) ಪ್ರಮೋಷನಲ್ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ.

ವಿಭಿನ್ನ ಪ್ರಯೋಗಕ್ಕೆ ಇಳಿದ 'ಹುಡುಗರ ಗ್ಯಾಂಗ್'
ಸಿನಿಮಾ ಆರಂಭ ಆದಲ್ಲಿಂದ ಹಾಸ್ಟೆಲ್ ಹುಡುಗರ ಗ್ಯಾಂಗ್ ಪ್ರಚಾರಕ್ಕೆ ವಿಶಿಷ್ಟ ಪ್ರಯತ್ನ ಮಾಡುತ್ತಲೇ ಇದೆ. ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್‌ಗಳು ಕೂಡ ಹಾಸ್ಟೆಲ್ ಹುಡುಗರ ಪ್ರಚಾರಕ್ಕೆ ನೆರವಾಗಿದ್ದರು. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್, ರಕ್ಷಿತ್ ಶೆಟ್ಟಿ, ಮೋಹಕತಾರೆ ರಮ್ಯಾ ಈಗಾಗಲೇ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ತಂಡದ ವಿಭಿನ್ನ ಪ್ರಚಾರ ಶೈಲಿಯಲ್ಲಿ ಭಾಗಿಯಾಗಿದ್ದರು. ಈಗ ಅಜನೀಶ್ ಲೋಕನಾಥ್ ಸರದಿ. ಈ ಕಿಡ್ನ್ಯಾಪ್ ಕೇಸ್ ಕೂಡ ಪ್ರಚಾರದ ಒಂದು ಭಾಗವೇ.

ಸಾಂಗ್ ಕೊಟ್ಟಿಲ್ಲ ಅನ್ನೋದೇ ಹೈಲೈಟ್
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಬಹುತೇಕ ಹೊಸಬರ ಸಿನಿಮಾ. ಗುಲ್ಮೊಹರ್ ಫಿಲಂಸ್ ಹಾಗೂ ವರುಣ್ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಈ ಸಿನಿಮಾವನ್ನು ನಿರ್ಮಿಸಿದೆ. ಪ್ರಜ್ವಲ್ ಬಿಪಿ, ವರುಣ್ ಕುಮಾರ್, ನಿತಿನ್ ಮತ್ತು ಅರವಿಂದ್ ಈ ಚಿತ್ರದ ನಿರ್ಮಾಪಕರು. ಸದ್ಯವೇ ಈ ಸಿನಿಮಾ ಹಾಡೊಂದನ್ನು ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಮಾಡೋಕೆ ಸಜ್ಜಾಗಿದ್ದಾರೆ. ಆದರೆ, ಈ ಪ್ರಮೋಷನ್ ವಿಡಿಯೋ ನೋಡಿದ್ರೆ, ಅಜನೀಶ್ ಇನ್ನೂ ಸಾಂಗ್ ಕೊಟ್ಟಿಲ್ವಾ ಅನ್ನೋ ಅನುಮಾನ ಬರುತ್ತೆ. ಅದು ಏನೇ ಇದ್ದರೂ, ಡಿಸೆಂಬರ್‌ನಲ್ಲಿ ಸಾಂಗ್ ಸಿಗೋದು ಪಕ್ಕಾ.

ರಕ್ಷಿತ್ ಶೆಟ್ಟಿ ಎಂಟ್ರಿ ಸೂಪರ್
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ. ಮುಂದಿನ ವರ್ಷ ಈ ಸಿನಿಮಾ ರಿಲೀಸ್ ಆಗಬಹುದು. ಈ ವಿಡಿಯೋದಲ್ಲಿ ರಕ್ಷಿತ್ ಶೆಟ್ಟಿ ಸ್ಪೆಷಲ್ ಎಂಟ್ರಿ ಮಜವಾಗಿದೆ. ವಿಡಿಯೋದ ಕೊನೆಯಲ್ಲಿ ರಕ್ಷಿತ್ ಶೆಟ್ಟಿ ಪೋನ್ ಕಾಲ್ ನೋಡುಗರಿಗೆ ಮಸ್ತ್ ಮಜಾ ಕೊಡುತ್ತೆ. ಏನಕ್ಕೂ 'ಹಾಸ್ಟೆಲ್ ಹುಡುಗರು' ಥಿಯೇಟರ್‌ಗೆ ಬಂದ್ಮೇಲೆ ಅದೇನು ಹಾವಳಿ ಇಡುತ್ತಾರೋ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಇದೆ.