»   » ಕನ್ನಡಕ್ಕೆ ಅಡಿಯಿಟ್ಟ ಹಾಟ್ ಬೆಡಗಿ ಮೇಘನಾ ಪಟೇಲ್

ಕನ್ನಡಕ್ಕೆ ಅಡಿಯಿಟ್ಟ ಹಾಟ್ ಬೆಡಗಿ ಮೇಘನಾ ಪಟೇಲ್

Posted By:
Subscribe to Filmibeat Kannada

ಪ್ರಧಾನಿ ನರೇಂದ್ರ ಮೋದಿ ಪರ ವಿಭಿನ್ನ ಪ್ರಚಾರ ಮಾಡಿ ಎಲ್ಲರ ಗಮನಸೆಳೆದಿದ್ದ ರೂಪದರ್ಶಿ ಮೇಘನಾ ಪಟೇಲ್ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. ಭಾರತೀಯ ಜನತಾ ಪಕ್ಷ ಹಾಗೂ ಮೋದಿಗೆ ಪ್ರಚಾರ ನೀಡಲು ಮೇಘನಾ ಆಯ್ಕೆ ಮಾಡಿಕೊಂಡ ದಾರಿಯೇ ಸಂಪೂರ್ಣ ಭಿನ್ನವಾಗಿತ್ತು.

ಅದೇನೆಂದರೆ ಎಲ್ಲರೂ ಹೊರಗಡೆ ಹೋಗಿ ರೋಡ್ ಶೋ ಮೂಲಕ ಪ್ರಚಾರ ನೀಡಿದರೆ ಮೇಘನಾ ಅವರು ಬಾತ್ ರೂಮಿನಿಂದಲೇ ಪ್ರಚಾರ ಆರಂಭಿಸಿದ್ದರು! ತಮ್ಮ ಅರೆನಗ್ನ ಫೋಟೋಗಳ ಮೂಲಕ ಬಿಜೆಪಿಗೆ ಓಟಾಕಿ ಎಂದು ಬಿಸಿಬಿಸಿ ಪ್ರಚಾರ ಮಾಡಿದ್ದು ಇದೀಗ ಇತಿಹಾಸ. [ನರೇಂದ್ರ ಮೋದಿಗೆ ಮೇಘನಾ ಪಟೇಲ್ ನಗ್ನ ಪ್ರಚಾರ]

Hot model Meghana Patel1

ಈ ರೂಪದರ್ಶಿ ಈಗ ಗಾಂಧಿನಗರಕ್ಕೆ ಅಡಿಯಿಡುತ್ತಿದ್ದು ಸಾಧು ಕೋಕಿಲ ಜೊತೆ ಅಭಿನಯಿಸಲಿದ್ದಾರೆ. ಈ ಹಿಂದೆ 'ಸಿಲ್ಕ್ ಸಖತ್ ಹಾಟ್' ಚಿತ್ರದ ಮೂಲಕ ಪಾಕಿಸ್ತಾನಿ ತಾರೆ ವೀಣಾ ಮಲಿಕ್ ಅವರನ್ನು ಕನ್ನಡಕ್ಕೆ ಕರೆತಂದಿದ್ದ ನಿರ್ದೇಶಕ ತ್ರಿಶೂಲ್ ಈ ಬಾರಿ ಮೇಘನಾ ಅವರಿಗೆ ಮಣೆಹಾಕಿದ್ದಾರೆ.

ಮೇಘನಾ ಪಟೇಲ್ ಅವರು ಈಗಾಗಲೆ ತ್ರಿಶೂಲ್ ಚಿತ್ರಕ್ಕೆ ಸಹಿಹಾಕಿದ್ದು ಇನ್ನು ಗಾಂಧಿನಗರಕ್ಕೆ ಅಡಿಯಿಡುವುದೊಂದು ಬಾಕಿ ಇದೆ. ಇನ್ನೂ ಶೀರ್ಷಿಕೆ ಇಡದ ಈ ಚಿತ್ರದ ಫೋಟೋ ಶೂಟ್ ಡಿಸೆಂಬರ್ ಕೊನೆಯಲ್ಲಿ ನಡೆಯಲಿದೆ ಎನ್ನುತ್ತವೆ ಮೂಲಗಳು.

Hot model Meghana Patel2

ಎಲ್ಲವೂ ಸುಸೂತ್ರವಾಗಿ ನಡೆದರೆ ಮೇಘನಾ ಚಿತ್ರ ಜನವರಿಯಲ್ಲಿ ಸೆಟ್ಟೇರಲಿದೆ. ಚುನಾವಣಾ ಪೂರ್ವದಲ್ಲಿ ನರೇಂದ್ರ ಮೋದಿಗೆ ಜೈ ಎಂದಿದ್ದ ಈ ಬೆಡಗಿ ಮತ್ತೆ ನಾಪತ್ತೆಯಾಗಿದ್ದರು. ಪೂನಂ ಪಾಂಡೆ ಹಾದಿಯಲ್ಲೇ ಸಾಗಿಬರುತ್ತಿರುವ ಮೇಘನಾ ಇದೀಗ ಕನ್ನಡಕ್ಕೆ ಅಡಿಯಿಡುತ್ತಿದ್ದು ತ್ರಿಶೂಲ್ ಏನೆಲ್ಲಾ ಕಮಾಲ್ ಮಾಡುತ್ತಾರೋ ಕಾದುನೋಡಬೇಕು. (ಏಜೆನ್ಸೀಸ್)

English summary
Hot model Meghana Patel to make her debut Sandalwood. Meghana has signed a new untitled film opposite Sadhu Kokila. The film is being directed by Trishul who earlier directed 'Silk - Sakath Maga'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada