For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಜಾಲದಲ್ಲಿ ರಾಗಿಣಿ ಪಾತ್ರವೇನು? ಜಾಲ ಕಾರ್ಯನಿರ್ವಹಿಸುತ್ತಿದ್ದಿದ್ದು ಹೇಗೆ?

  |

  ಡ್ರಗ್ಸ್ ಜಾಲದೊಂದಿಗೆ ನಂಟು ಆರೋಪದಡಿಯಲ್ಲಿ ನಟಿ ರಾಗಿಣಿಯ ಬಂಧನವಾಗಿದೆ. ಮೊದಲಿಗೆ ರಾಗಿಣಿ ಬಂಧನವಾದಾಗ, ಆಕೆ ಡ್ರಗ್ಸ್‌ನ ಗ್ರಾಹಕಳಿರಬಹುದಷ್ಟೆ ಎಂದೇ ಬಹುತೇಕರು ಅಂದುಕೊಂಡಿದ್ದರು. ಆದರೆ ಪೊಲೀಸರು ಹೇಳುತ್ತಿರುವುದೇ ಬೇರೆ.

  ರಾಗಿಣಿ ಮಾದಕ ವಸ್ತುವಿನ ಗ್ರಾಹಕರಾಗಿರಲಿಲ್ಲ, ಬದಲಿಗೆ ವ್ಯಾಪಾರಿ ಅಥವಾ ಪ್ರೊಮೋಟರ್ ಆಗಿದ್ದರಂತೆ. ಮಾದಕ ವಸ್ತುವಿನ ವ್ಯವಹಾರದಲ್ಲಿ ರಾಗಿಣಿ ತೊಡಗಿಸಿಕೊಂಡಿದ್ದು, ಕೋಟ್ಯಂತರ ಲಾಭವನ್ನೂ ಮಾಡಿದ್ದಾರೆ ಎನ್ನಲಾಗುತ್ತಿದೆ.

  ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿತ ವ್ಯಕ್ತಿಗಳು ಬಂಧನಕ್ಕೆ ಒಳಗಾಗುತ್ತಿರುವಂತೆ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಗಳು ಹೊರಬೀಳುತ್ತಿವೆ. ರಾಗಿಣಿ, ಮಾಜಿ ಸಚಿವರ ಪುತ್ರ ಸೇರಿ ಒಟ್ಟು 12 ಮಂದಿಯ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ಹಲವರನ್ನು ಈಗಾಗಲೇ ಬಂಧಿಸಲಾಗಿದೆ.

  ಡ್ರಗ್ ಪೆಡ್ಲರ್‌ಗಳ ಜೊತೆಗೆ ನೇರ ಸಂಪರ್ಕ

  ಡ್ರಗ್ ಪೆಡ್ಲರ್‌ಗಳ ಜೊತೆಗೆ ನೇರ ಸಂಪರ್ಕ

  ನಟಿ ರಾಗಿಣಿ ಮತ್ತು ಆಕೆಯ ಗೆಳೆಯ ಸೇರಿಕೊಂಡು ಡ್ರಗ್ಸ್ ನ ವ್ಯಾಪಾರದಲ್ಲಿ ತೊಡಗಿದ್ದರು ಎಂಬ ಅಂಶ ಬಹಿರಂಗಗೊಂಡಿದೆ. ರಾಗಿಣಿ ಗೆಳೆಯರ ರವಿಶಂಕರ್, ಡ್ರಗ್ ಪೆಡ್ಲರ್‌ಗಳೊಂದಿಗೆ ನೇರ ಸಂಪರ್ಕ ಹೊಂದಿದ್ದನಂತೆ. ಆತನೇ ಡ್ರಗ್ಸ್ ಅನ್ನು ರಾಗಿಣಿಗೆ ತಲುಪಸುತ್ತಿದ್ದನಂತೆ.

  ರಾಗಿಣಿ ಹಾಗೂ ತಂಡ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು

  ರಾಗಿಣಿ ಹಾಗೂ ತಂಡ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು

  ರಾಗಿಣಿ ಹಾಗೂ ಆಕೆಯ ಗೆಳೆಯರು ಸೇರಿ ಒಳಸಂಚು ರೂಪಿಸಿ ನಗರದ ಹಲವೆಡೆ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದರು, ಪಾರ್ಟಿಗೆ ಬರುವ ರಾಜಕಾರಣಿಗಳು, ಕಾರ್ಪೊರೇಟ್ ಮುಖ್ಯಸ್ಥರು, ಡಿಜೆಗಳು, ಸಾಫ್ಟ್‌ವೇರ್ ಉದ್ಯೋಗಿಗಳು, ನಟ-ನಟಿಯರಿಗೆ ಡ್ರಗ್ಸ್ ಸೇವನೆಗೆ ನೀಡುತ್ತಿದ್ದರಂತೆ.

  ವೀರೇನ್ ಖನ್ನಾ ಅಂತರರಾಷ್ಟ್ರೀಯ ಮಟ್ಟದ ಇವೆಂಟ್ ಆರ್ಗನೈಸರ್

  ವೀರೇನ್ ಖನ್ನಾ ಅಂತರರಾಷ್ಟ್ರೀಯ ಮಟ್ಟದ ಇವೆಂಟ್ ಆರ್ಗನೈಸರ್

  ರವಿಶಂಕರ್, ರಾಗಿಣಿ, ವೀರೇನ್ ಖನ್ನಾ, ರಾಹುಲ್ ಎಲ್ಲರೂ ಸೇರಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದರಂತೆ. ವೀರೇನ್ ಖನ್ನಾ ಅಂತರರಾಷ್ಟ್ರೀಯ ಮಟ್ಟದ ಪಾರ್ಟಿ ಆಯೋಜಕನಾಗಿ ಗುರುತಿಸಿಕೊಂಡಿದ್ದು, ದೆಹಲಿಯಲ್ಲಿ ಆತನ ಕಚೇರಿ ಇದೆ.

  ರಾಗಿಣಿ ಪಾತ್ರವೇನು?

  ರಾಗಿಣಿ ಪಾತ್ರವೇನು?

  ಸ್ಟಾರ್ ನಟ-ನಟಿಯರು ಪಾರ್ಟಿಗೆ ಬರುತ್ತಾರೆ ಎಂದು ಮೊದಲಿಗೆ ಜಾಹೀರಾತು ನೀಡಲಾಗುತ್ತಿತ್ತು. ರಾಗಿಣಿ ಇಂಥಹಾ ಪಾರ್ಟಿಗಳಲ್ಲಿ ಭಾಗವಹಿಸಿ, ಬಂದವರ ಬಳಿ ಸಲುಗೆಯಿಂದ ವರ್ತಿಸುತ್ತಿದ್ದರು. ಅವರೊಟ್ಟಿಗೆ ಡ್ರಗ್ಸ್ ಸೇವಿಸುತ್ತಿದ್ದರು. ಅವರಿಗೆ ಡ್ರಗ್ಸ್ ತೆಗೆದುಕೊಳ್ಳುವಂತೆ ಪ್ರಚೋದಿಸುತ್ತಿದ್ದರು. ರಾಗಿಣಿಯನ್ನು ಪಾರ್ಟಿಯ ಪ್ರಮುಖ ಆಕರ್ಷಣೆಯನ್ನಾಗಿ ಈ ಡ್ರಗ್ಸ್ ಗುಂಪು ಬಳಸಿಕೊಳ್ಳುತ್ತಿತ್ತು.

  Ganja ಬಗ್ಗೆ ತಪ್ಪು ಕಲ್ಪನೆ ಬೇಡ , ಮುಕ್ತವಾಗಿ ಚರ್ಚಿಸೋಣ ಬನ್ನಿ | Rakesh Adiga | Filmibeat Kannada
  ರಾಗಿಣಿಗೂ ದೊಡ್ಡ ಮೊತ್ತದ ಹಣ ಸಂದಾಯವಾಗಿದೆ

  ರಾಗಿಣಿಗೂ ದೊಡ್ಡ ಮೊತ್ತದ ಹಣ ಸಂದಾಯವಾಗಿದೆ

  ಪಾರ್ಟಿಗೆ ಬರುವವರಿಗೆ ಮೊದಲಿಗೆ ಕಡಿಮೆ ಹಣದಲ್ಲಿ ಡ್ರಗ್ಸ್ ಕೊಡಲಾಗುತ್ತಿತ್ತು. ಒಮ್ಮೆ ಡ್ರಗ್ಸ್ ಅಭ್ಯಾಸವಾದ ನಂತರ ಅವರುಗಳೇ ಪಾರ್ಟಿಗಳಿಗೆ ಬರಲು, ಡ್ರಗ್ಸ್ ಕೊಳ್ಳಲು ಮತ್ತೆ ಇವರನ್ನು ಸಂಪರ್ಕ ಮಾಡುತ್ತಿದ್ದರಂತೆ. ಹೀಗೆ ಕೋಟ್ಯಂತರ ಹಣವನ್ನುನ ಈ ಗುಂಪು ಸಂಪಾದಿಸಿದೆ. ರಾಗಿಣಿಗೂ ಸಹ ದೊಡ್ಡ ಪಾಲನ್ನು ಈ ಗುಂಪು ಕೊಡುತ್ತಿತ್ತು.

  English summary
  Drugs link to Kannada movie industry: How did the drug network operates in Sandalwood. What is the role of Ragini Dwivedi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X