»   » 'ಉಳಿದವರು ಕಂಡಂತೆ' ಆಂಡ್ರಾಯ್ಡ್ ಆಪ್ ಹೇಗಿದೆ?

'ಉಳಿದವರು ಕಂಡಂತೆ' ಆಂಡ್ರಾಯ್ಡ್ ಆಪ್ ಹೇಗಿದೆ?

Posted By:
Subscribe to Filmibeat Kannada

ಈಗ ಆಪ್ ಗಳ ಕಾಲ. ಪ್ರತಿಯೊಬ್ಬರ ವಯೋಮಾನಕ್ಕೆ, ಅಭಿರುಚಿಗೆ ತಕ್ಕಂತೆ ಲಕ್ಷಾಂತರ ಆಪ್ ಗಳು ಆಂಡ್ರಾಯ್ಡ್ ಬಳಕೆದಾರರಿಗೆ ಸಿಗುತ್ತವೆ. ಕನ್ನಡ ಚಿತ್ರೋದ್ಯಮವೂ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಪ್ರೇಕ್ಷಕರ ಅಭಿರುಚಿಯನ್ನು ತಣಿಸಲು ಹಲವಾರು ಆಂಡ್ರಾಯ್ಡ್ ಆಪ್ ಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ.

ಇದೀಗ ರಕ್ಷಿತ್ ಶೆಟ್ಟಿ ರಚಿಸಿ, ನಟಿಸಿ, ನಿರ್ದೇಶಿಸುತ್ತಿರುವ 'ಉಳಿದವರು ಕಂಡಂತೆ' ಆಂಡ್ರಯ್ಡ್ ಆಪ್ ಮಾರುಕಟ್ಟೆಗೆ ದಾಂಗುಡಿ ಇಟ್ಟಿದೆ. ಅದಾಗಲೇ ಈ ಆಪ್ ನ್ನು ಐನೂರಕ್ಕೂ ಅಧಿಕ ಚಿತ್ರರಸಿಕರು ಡೌನ್ ಮಾಡಿಕೊಂಡಿದ್ದಾರೆ. ಇಷ್ಟಕ್ಕೂ ಏನಿದೆ ಈ ಆಪ್ ನಲ್ಲಿ ಎಂದರೆ...[ಗೂಗಲ್ ಪ್ಲೇನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು]


'ಉಳಿದವರು ಕಂಡಂತೆ' ಚಿತ್ರಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನೂ ಈ ಆಪ್ ತೆರೆದಿಡುತ್ತದೆ. ಚಿತ್ರದ ವಾಲ್ ಪೇಪರ್, ಲೇಟೆಸ್ಟ್ ಸ್ಟಿಲ್ಸ್, ವಿಡಿಯೋಗಳು, ಹಾಡುಗಳು, ಚಿತ್ರಕ್ಕೆ ಸಂಬಂಧಿಸಿದಂತೆ ಲೇಟೆಸ್ಟ್ ಸಮಾಚಾರ...ಹೀಗೆ ಎಲ್ಲವನ್ನೂ ಉಳಿದವರು ಕಂಡಂತೆ ಆಪ್ ಮೂಲಕ ಪಡೆಯಬಹುದಾಗಿದೆ. [ಶೀತಲ್ ಶೆಟ್ಟಿ ಸಂದರ್ಶನ]

ಈ ಆಪ್ ನ ರೂಪ ಕಲ್ಪನೆ ಮಾಡಿರುವುದು Niveus Solutions Pvt. Ltd ಎಂಬ ಕಂಪನಿ. ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಕನ್ನಡ ಸಿನಿಪ್ರೇಮಿಗಳನ್ನು ಸಾಕಷ್ಟು ಆಕರ್ಷಿಸುತ್ತಿದೆ. ಹೇಮಂತ್, ಸುನಿ ಹಾಗೂ ಅಭಿ ಚಿತ್ರದ ನಿರ್ಮಾಪಕರು. ಬಿ ಅಜನೀಶ್ ಲೋಕನಾಥ್ ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

ಚಿತ್ರದ ಪಾತ್ರವರ್ಗದಲ್ಲಿ ಶಂಕರ್ ಪೂಜಾರಿಯಾಗಿ ದಿನೇಶ್ ಮಂಗಳೂರು, ರತ್ನಕ್ಕಳಾಗಿ ತಾರಾ, ಮುನ್ನಾ ಪಾತ್ರದಲ್ಲಿ ಕಿಶೋರ್, ರಿಚಿ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ, ರಿಶಬ್ ಆಗಿ ರಘು, ಬಾಲು ಪಾತ್ರದಲ್ಲಿ ಅಚ್ಯುತ ಕುಮಾರ್, ಶಾರದಾ ಪಾತ್ರದಲ್ಲಿ ಯಜ್ಞಾ ಶೆಟ್ಟಿ ಹಾಗೂ ರೆಜೀನಾ ಪಾತ್ರದಲ್ಲಿ ಶೀತಲ್ ಶೆಟ್ಟಿ.

ಈ ಬಾರಿ ರಕ್ಷಿತ್ ಶೆಟ್ಟಿ ತಮ್ಮ ಚಿತ್ರದ ಮೂಲಕ ಏನೆಲ್ಲಾ ಕೊಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಪ್ರೇಕ್ಷಕರು ಇದ್ದಾರೆ. ಮಲ್ಪೆ, ಕರಾವಳಿ, ಉಡುಪಿಯ ಸುಂದರ ತಾಣಗಳ ಹಿನ್ನೆಲೆಯಲ್ಲಿ ಸಾಗುವ ಚಿತ್ರದ ಬಗ್ಗೆ ಸ್ಯಾಂಡಲ್ ವುಡ್ ಸಹ ಕುತೂಹದಿಂದ ನಿರೀಕ್ಷಿಸುತ್ತಿದೆ. (ಒನ್ಇಂಡಿಯಾ ಕನ್ನಡ)

English summary
Ulidavaru Kandante android app released, Kannada feature film written and directed by Rakshit Shetty and Produced by Suvin Cinemas, makers of SIMPALLAG ONDH LOVE STORY. Download the app for regular updates on this suspense thriller.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada