For Quick Alerts
  ALLOW NOTIFICATIONS  
  For Daily Alerts

  ಅಷ್ಟಕ್ಕೂ 'ಕಿಲ್ಲಿಂಗ್ ವೀರಪ್ಪನ್' ಬೇಟೆಗೆ ಪಾರುಲ್ ಬಂದಿದ್ದಾದರೂ ಹೇಗೆ?

  By Suneetha
  |

  ಫಟಾ ಫಟ್ ಐದೇ ಐದು ನಿಮಿಷದಲ್ಲಿ ನಟಿ ಪಾರುಲ್ ಯಾದವ್ ಅವರು ಶಿವಣ್ಣ ಜೊತೆ ಸೇರಿ ವೀರಪ್ಪನ್ ಬೇಟೆ ಆಡಲು ತಯಾರಾದ್ರು.

  ಗ್ಲಾಮರ್ ಬೆಡಗಿ 'ಪ್ಯಾರ್ಗೆ ಆಗ್ಬುಟ್ಟೈತೆ' ಹುಡುಗಿ ಪಾರುಲ್ ಯಾದವ್ ಅವರು 'ಕಿಲ್ಲಿಂಗ್ ವೀರಪ್ಪನ್' ಚಿತ್ರಕ್ಕೆ ಅದು ಹೇಗೆ ಆಯ್ಕೆ ಆದ್ರು ಅನ್ನೋ ಅಭಿಮಾನಿಗಳ ಪ್ರಶ್ನೆಗೆ ಸ್ವತಃ ಅವರೇ ಉತ್ತರ ನೀಡಿದ್ದಾರೆ.

  ಹೌದು ನಟಿ ಪಾರುಲ್ ಯಾದವ್ ಅವರು 'ಕಿಲ್ಲಿಂಗ್ ವೀರಪ್ಪನ್' ಸಿನಿಮಾದಲ್ಲಿ ನಟನೆ ಮಾಡಲು ಒಪ್ಪಿಕೊಳ್ಳಲು ತೆಗೆದುಕೊಂಡ ಸಮಯ ಕೇವಲ ಐದೇ ಐದು ನಿಮಿಷವಂತೆ.

  ಅಂದಹಾಗೆ ಒಂದು ದಿನ ದಿಢೀರ್ ಅಂತ ಪಾರುಲ್ ಅವರಿಗೆ ನಿರ್ದೇಶಕ ಆರ್.ಜಿ.ವಿ ಅವರಿಂದ ಫೋನ್ ಕಾಲ್ ಬಂತಂತೆ, ಆ ಕಡೆಯಿಂದ ಮಾತನಾಡುತ್ತಿರುವುದು ವರ್ಮಾ ಎಂದಾಗ, ಅದನ್ನು ನಂಬದ ಪಾರುಲ್ ಯಾದವ್ ಅವರು ಫೋನ್ ಕಟ್ ಮಾಡಿದ್ರಂತೆ. ಮುಂದೇನಾಯ್ತು?, ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

  10 ನಿಮಿಷ ಬಿಟ್ಟು ಪುನಃ ಕರೆ

  10 ನಿಮಿಷ ಬಿಟ್ಟು ಪುನಃ ಕರೆ

  ಆಮೇಲೆ 10 ನಿಮಿಷ ಬಿಟ್ಟು ಯೋಚನೆ ಮಾಡಿ ಸುಧಾರಿಸಿಕೊಂಡು ಅದು ವರ್ಮಾ ಅವರೇ ಅಂತ ಕನ್ ಫರ್ಮ್ ಆದ ಮೇಲೆ ಪಾರುಲ್ ಅವರೇ ಮತ್ತೆ ವಾಪಸ್ ಕಾಲ್ ಮಾಡಿ ಮಾತನಾಡಿದರಂತೆ.

  ಚಿತ್ರಕಥೆ ವಿವರಿಸಿದ ವರ್ಮಾ

  ಚಿತ್ರಕಥೆ ವಿವರಿಸಿದ ವರ್ಮಾ

  ಆಗ ಚಿತ್ರದ ಕಥೆ ಹೇಳಿದ ನಿರ್ದೇಶಕ ವರ್ಮಾ ಅವರು ಪಾರುಲ್ ಗೆ ಇರುವ ಪಾತ್ರದ ಬಗ್ಗೆ ಹೇಳಿ, ಈ ಪಾತ್ರ ಮಾಡ್ತೀರಾ ಅಂದರಂತೆ. ವರ್ಮಾ ಅವರ ಚಿತ್ರದಲ್ಲಿ ನಟಿಸೋದು ಅಂದ್ರೆ ಸುಮ್ಮನೇನಾ, ಯಾರು ಬೇಡ ಅಂತಾರೆ. ಅದಕ್ಕೆ ಪಾರುಲ್ ಅವರು ಐದೇ ನಿಮಿಷದಲ್ಲಿ ಎಸ್ ಅಂದು ಚಿತ್ರತಂಡ ಸೇರಿಕೊಂಡರಂತೆ.

  ಸವಾಲೊಡ್ಡಿದ ಪಾತ್ರ

  ಸವಾಲೊಡ್ಡಿದ ಪಾತ್ರ

  'ಬದುಕಿರುವ ವ್ಯಕ್ತಿಯ ಪಾತ್ರ ಮಾಡೋದು ಅಷ್ಟು ಸುಲಭವಲ್ಲ. ಮೇಲಾಗಿ ಕಲಾವಿದೆಯಾಗಿ ನನಗೆ ನನ್ನ ತಾಕತ್ತು ಗೊತ್ತಿದೆ. ಅದನ್ನೂ ಮೀರಿಸುವಂತಹ ಅಭಿನಯವನ್ನು ನನ್ನಿಂದ ನಿರ್ದೇಶಕ ವರ್ಮಾ ಅವರು ತೆಗೆಸಿದ್ದಾರೆ'.

  ಇಲ್ಲಿಯವರೆಗೂ ಮಾಡಿದ್ದು, ಕೇವಲ ಕಾಲ್ಪನಿಕ

  ಇಲ್ಲಿಯವರೆಗೂ ಮಾಡಿದ್ದು, ಕೇವಲ ಕಾಲ್ಪನಿಕ

  'ಗೋವಿಂದಾಯ ನಮಃ' ಚಿತ್ರದಿಂದ ಹಿಡಿದು ಇಲ್ಲಿಯವರೆಗೆ ನಾನು ಮಾಡಿರೋ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ. ಇದೇ ಮೊದಲ ಬಾರಿಗೆ ನೈಜ ಪಾತ್ರದಲ್ಲಿ ಅಭಿನಯಿಸಿರುವ ಹೆಮ್ಮೆ ತನಗಿದೆ ಅಂತಾರೆ ಈ ಗ್ಲಾಮರ್ ಬೆಡಗಿ.

  ವರ್ಮಾ ಅವರು ಸಂಶೋಧಕನಿದ್ದಂತೆ,

  ವರ್ಮಾ ಅವರು ಸಂಶೋಧಕನಿದ್ದಂತೆ,

  ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಒಂದು ಸಂಶೋಧನಾ ಭಂಡಾರ ಇದ್ದಂತೆ. ಸುಮಾರು 10 ವರ್ಷಕ್ಕೂ ಹೆಚ್ಚಿನ ಸಮಯವನ್ನು ಈ ಚಿತ್ರದ ಕುರಿತಾದ ಸಂಶೋಧನೆಗೆ ಮೀಸಲಿಟ್ಟಿದ್ದರು. ನಾನು ಅಥವಾ ಶಿವಣ್ಣ ಮಾಡುವ ಪಾತ್ರವಾಗಲಿ, ಜೊತೆಗೆ ಅಂತಹ ವ್ಯಕ್ತಿಗಳು ಇದ್ರು ಅನ್ನೋದೇ ಈ ಜಗತ್ತಿಗೆ ಗೊತ್ತಿಲ್ಲ. ಅದನ್ನು ಈ ಚಿತ್ರದ ಮೂಲಕ ತೋರಿಸಿದ್ದಾರೆ ವರ್ಮಾ ಅವರು.

  ವೀರಪ್ಪನ್ ಬೇಟೆಗೆ ತಂಡ ಸಿದ್ದ

  ವೀರಪ್ಪನ್ ಬೇಟೆಗೆ ತಂಡ ಸಿದ್ದ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪಾರುಲ್ ಯಾದವ್, ಯಜ್ಞಾ ಶೆಟ್ಟಿ, ಸಂದೀಪ್ ಭಾರದ್ವಾಜ್, ಸಂಚಾರಿ ವಿಜಯ್, ನಿರ್ದೇಶಕ ಗಡ್ಡಾ ವಿಜಿ ಮುಂತಾದವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಇನ್ನೇನು ಸದ್ಯದಲ್ಲೇ ತೆರೆ ಮೇಲೆ ಅಪ್ಪಳಿಸಲಿದೆ.

  English summary
  Kannada Actress Parul Yadav revealed how she will be entered Varma's 'Killing Veerappa' movie team. Here is complete details check it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X