»   » ಕನ್ನಡದಲ್ಲಿ ವರ್ಷಕ್ಕೆ ತಯಾರಾಗೋ ಚಿತ್ರಗಳ ಲೆಕ್ಕ ಗೊತ್ತಾ?

ಕನ್ನಡದಲ್ಲಿ ವರ್ಷಕ್ಕೆ ತಯಾರಾಗೋ ಚಿತ್ರಗಳ ಲೆಕ್ಕ ಗೊತ್ತಾ?

Posted By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ತಯಾರಾಗೋ ಸಿನಿಮಾಗಳು ವರ್ಷಕ್ಕೆ 120 ರಿಂದ 130 ಅಂದುಕೊಂಡ್ರೆ ಅದು ತಪ್ಪು ಲೆಕ್ಕಾಚಾರ ಆಗುತ್ತದೆ. ಚಂದನವನದಲ್ಲಿ ವರ್ಷಕ್ಕೆ ನಿರ್ಮಾಣವಾಗೋ ಸಿನಿಮಾಗಳು ಒಟ್ಟು 250ಕ್ಕೂ ಹೆಚ್ಚು. ಇದೇನಪ್ಪ ವಾರಕ್ಕೆ ಮೂರು ನಾಲ್ಕು ಎಂದುಕೊಂಡರೂ ರಿಲೀಸಾಗೋದೇ 120-130 ಅಂತಿದ್ದೀರಾ.

ನಿಮಗೆ ಗೊತ್ತಾಗೋದು ಏನಿದ್ರೂ ರಿಲೀಸಾಗೋ ಸಿನಿಮಾಗಳಷ್ಟೇ. ಆದ್ರೆ ವರ್ಷಕ್ಕೆ ತಯಾರಾಗೋ ಸಿನಿಮಾಗಳ ಸಂಖ್ಯೆ ದೊಡ್ಡದು. ಬರಲಿರೋ ಫೆಬ್ರವರಿ ತಿಂಗಳೊಂದರಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳು ಥಿಯೇಟರ್ ಓನರ್ ಗಳ ಮುಂದೆ ಸಾಲುಗಟ್ಟಿವೆ. ['ಆರಂಭ' ಚಿತ್ರದ ಟೀಸರ್ ನಲ್ಲಿ ಇದೇನಿದು 'ಆ' ದೃಶ್ಯ?]

ಜನವರಿ ತಿಂಗಳಲ್ಲಿ ಸ್ಟಾರ್ ಸಿನಿಮಾಗಳು ಥಿಯೇಟರ್ ನಲ್ಲಿ ಭದ್ರವಾಗಿ ನೆಲೆಯೂರಿರೋದು ಹೊಸ ಸಿನಿಮಾಗಳ ಎಂಟ್ರಿಗೆ ತಡೆಯೊಡ್ಡಿದೆ. 'ಬಹದ್ದೂರ್' ನೂರು ದಿನ ಮುಗಿಸಿ ಮುನ್ನುಗ್ಗಿದ್ರೆ, ಶಿವಂ, ಖುಷಿಖುಷಿಯಾಗಿ ನೂರಾರು ಥಿಯೇಟರ್ ಹಂಚಿಕೊಂಡಿವೆ.

How many movies are produced in Kannada in a year?

ಯಶ್-ರಾಧಿಕಾ ಜೋಡಿಯ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಭರ್ಜರಿ ಕಲೆಕ್ಷನ್ ನಲ್ಲಿದೆ. ಒಟ್ಟಾರೆ ಸ್ಟಾರ್ ಸಿನಿಮಾಗಳೇ ಥಿಯೇಟರ್ ನಲ್ಲಿ ರಾರಾಜಿಸ್ತಿದ್ದು ಹೊಸ ಸಿನಿಮಾಗಳು ಮತ್ತು ಹೊಸಬರ ಸಿನಿಮಾಗಳು ಫೆಬ್ರುವರಿಯಲ್ಲಾದ್ರೂ ರಿಲೀಸ್ ಮಾಡೋಣ ಅಂತ ಯೋಚಿಸ್ತಿದ್ದಾರೆ. ಆದ್ರೆ ಅದಕ್ಕೆ ವರ್ಲ್ಡ್ ಕಪ್ ಕ್ರಿಕೆಟ್ ಕಾಟ ಬೇರೆ ಶುರುವಾಗ್ತಿದೆ. ಪಾಪ ಸಿನಿಮಾದವ್ರ ಸ್ಥಿತಿ ದೇವರಿಗೇ ಪ್ರೀತಿ.

ಫೆಬ್ರವರಿ 14ರಿಂದ ಮಾರ್ಚ್ 29ರ ತನಕ ವರ್ಲ್ಡ್ ಕಪ್ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಲ್ಲಿ ನಡೆಯಲಿದೆ. ಈ ಎರಡು ತಿಂಗಳುಗಳ ಕಾಲ ಸ್ಯಾಂಡಲ್ ವುಡ್ ಗಷ್ಟೇ ಅಲ್ಲ ಪಕ್ಕದ ಟಾಲಿವುಡ್, ಕೋಲಿವುಡ್ ನಿಂದ ಹಿಡಿದು ಬಾಲಿವುಡ್ ತನಕ ನಿರ್ಮಾಪಕರಿಗೆ, ನಾಯಕನಟರಿಗೆ ತಲೆನೋವು ತಪ್ಪಿದ್ದಲ್ಲ.

English summary
Guess, how many films are produced in Kannada in span of a year? Do you have any idea? Generally people are believing it may be around 120 to 130 movies. But the actual numbers are different. Nearly 250 movies are made in Sandalwood in a year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada