Don't Miss!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ಯೂಟ್ಯೂಬ್ ನೋಡಿ ಕಳ್ಳತನ ಕಲಿತ ಜೋಡಿ: ಶಶಿಕಲಾ ಜೊಲ್ಲೆ ಮಾಲೀಕತ್ವದ ಬ್ಯಾಂಕ್ಗೆ ಕನ್ನ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೌತ್ ಇಂಡಿಯಾದ ಟಾಪ್ ವಿಲನ್: ಜಗಪತಿ ಬಾಬು ಸಂಭಾವನೆ ಎಷ್ಟಿದೆ?
ಒಂದು ಕಾಲದಲ್ಲಿ ಟಾಪ್ ಹೀರೋ ಅಗಿದ್ದ ತೆಲುಗು ನಟ ಜಗಪತಿ ಬಾಬು ಈಗ ಖಳನಾಯಕನಾಗಿ ಹೆಚ್ಚು ಬೇಡಿಕೆ ಹೊಂದಿದ್ದಾರೆ. ಹೀರೋ ಆಗಿ ವೃತ್ತಿ ಜೀವನ ಮುಗಿತು, ಇನ್ಮುಂದೆ ಸಣ್ಣ-ಪುಟ್ಟ ಪಾತ್ರಗಳನ್ನು ಮಾಡ್ಕೊಂಡು ಇರಬೇಕು ಎನ್ನುವ ಮಟ್ಟಕ್ಕೆ ಹೋಗಿದ್ದ ಜಗಪತಿ ಬಾಬು ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಹೀರೋ ಆಗಿ ಸಂಪಾದಿಸಿದಕ್ಕಿಂತ ಹೆಚ್ಚು ಖ್ಯಾತಿ, ಬೇಡಿಕೆಯನ್ನು ಈಗ ವಿಲನ್ ಆಗಿ ಪಡೆದುಕೊಂಡಿದ್ದಾರೆ.
ಕೇವಲ ತೆಲುಗಿನಲ್ಲಿ ಮಾತ್ರವಲ್ಲ, ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಜಗಪತಿ ಬಾಬು ಬ್ಯುಸಿಯಾಗಿದ್ದಾರೆ. ಸದ್ಯ ಸೌತ್ ಇಂಡಿಯಾದ ಟಾಪ್ ವಿಲನ್ ಯಾರು ಅಂದ್ರೆ ಜಗಪತಿ ಬಾಬು ಹೆಸರು ಮೊದಲ ನೆನಪಾಗುತ್ತದೆ. ಖ್ಯಾತ ನಿರ್ಮಾಪಕ ವಿಬಿ ರಾಜೇಂದ್ರ ಪ್ರಸಾದ್ ಅವರ ಮಗನಾದ ಜಗಪತಿ ಬಾಬು ಪ್ರಸ್ತುತ ನೆಗೆಟಿವ್ ಪಾತ್ರಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗಿದ್ದಾರೆ. ಎಷ್ಟೇ ದೊಡ್ಡ ಸಿನಿಮಾ ಆದರೂ ಆ ಚಿತ್ರದಲ್ಲಿ ಜಗಪತಿ ಬಾಬು ಇದ್ದಾರೆ ಅದಕ್ಕೆ ಮತ್ತಷ್ಟು ಮೈಲೇಜ್ ಸಿಗುವಂತಾಗಿದೆ. ಹಾಗಾಗಿ, ಸ್ಟಾರ್ ನಟರೆಲ್ಲಾ ಜಗಪತಿ ಬಾಬು ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದಾರೆ.
'ಜಗಪತಿ
ಬಾಬು
ಮನೆ
ಮಾರಿಕೊಂಡಿದ್ರು...ನಾನು
ಬಂದ್ಮೇಲೆ
ಕೋಟಿ
ಬಂದಿದ್ದು....'
ಸದ್ಯ ಜಗಪತಿ ಬಾಬು ಕೈಯಲ್ಲಿ ಹತ್ತಕ್ಕೂ ಹೆಚ್ಚು ಚಿತ್ರಗಳಿದ್ದು, ಒಂದಕ್ಕಿಂತ ಒಂದು ಬಹಳ ವಿಶೇಷ-ವಿಭಿನ್ನವಾಗಿದೆ. ಅಷ್ಟಕ್ಕೂ, ಜಗಪತಿ ಬಾಬು ಸಿನಿಮಾವೊಂದಕ್ಕೆ ಪಡೆಯುವ ಸಂಭಾವನೆ ಎಷ್ಟಿದೆ? ಮುಂದೆ ಓದಿ...

ಬ್ರೇಕ್ ಕೊಟ್ಟ ಲೆಜೆಂಡ್
ಜಗಪತಿ ಬಾಬು ವೃತ್ತಿ ಜೀವನ ಮುಗಿತು ಎನ್ನುವಷ್ಟರಲ್ಲಿ ಅಚಾನಕ್ ಆಗಿ ತೆಗೆದುಕೊಂಡ ನಿರ್ಧಾರ ತೆಲುಗು ನಟನಿಗೆ ಮರುಜನ್ಮ ಕೊಟ್ಟಿದೆ. 2014ರಲ್ಲಿ ತೆರೆಕಂಡ 'ಲೆಜೆಂಡ್' ಚಿತ್ರದಲ್ಲಿ ಬಾಲಕೃಷ್ಣ ಎದುರು ಜಗಪತಿ ಬಾಬು ಖಳನಾಯಕನಾಗಿ ಮಿಂಚಿದರು. ಜಿತೇಂದ್ರ ಪಾತ್ರದಲ್ಲಿ ಜಗಪತಿ ಬಾಬು ನಟನೆ ನೋಡಿ ಪ್ರೇಕ್ಷಕರು ಫಿದಾ ಆದರು. ವಿಲನ್ ಆಗಿ ಜಗಪತಿ ಬಾಬು ಅವರನ್ನು ಸ್ವಾಗತಿಸಿದರು. ವಿಲನ್ ಆಗಿ ಹಾಗೂ ಪೋಷಕನಟನಾಗಿ ಜಗಪತಿ ಬಾಬು ಇಷ್ಟವಾಗುವಂತಹ ನಟನೆ ಕೊಟ್ಟರು. ಎನ್‌ಟಿಆರ್ ಅಭಿನಯದ ನಾನ್ನತೋ ಪ್ರೇಮತೋ, ಮಹೇಶ್ ಬಾಬು ಅಭಿನಯದ ಮಹರ್ಷಿ, ಶ್ರೀಮಂತಡು, ಸಾಯಿ ಧರಮ್ ತೇಜ ನಟನೆ ವಿನ್ನರ್, ಕರೆಂಟ್ ತೀಗಾ ಅಂತಹ ಚಿತ್ರಗಳು ಜಗಪತಿ ಬಾಬುಗೆ ಕೈಹಿಡಿದವು.

ಪ್ಯಾನ್ ಇಂಡಿಯಾ ಪಾತ್ರಗಳು
ಸುಕುಮಾರ್ ನಿರ್ದೇಶನದಲ್ಲಿ ರಾಮ್ ಚರಣ್ ನಾಯಕನಾಗಿ ನಟಿಸಿದ್ದ 'ರಂಗಸ್ಥಲಂ' ಚಿತ್ರದಲ್ಲಿ ಜಗಪತಿ ಬಾಬು ವಿಲನ್ ಆಗಿ ನಟಿಸಿದ್ದರು. ಈ ಪಾತ್ರ ನೋಡಿದ ಟಾಲಿವುಡ್ ಪ್ರೇಕ್ಷಕರು ದಂಗಾದರು. ಜಗಪತಿ ಬಾಬು ಪವರ್‌ಫುಲ್ ಆಕ್ಟಿಂಗ್‌ಗೆ ಮರುಳಾದರು. ಈಗ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಸೌಂದರ್ಯ
ಜೊತೆಗಿದ್ದ
ಸುಂದರ
ಸಂಬಂಧದ
ಬಗ್ಗೆ
ಜಗಪತಿ
ಬಾಬು
ಮಾತು

ರಾಜಾಮಾನರ್ ಲುಕ್ ಬಹಿರಂಗ
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಸಲಾರ್ ಚಿತ್ರದಲ್ಲಿ ಜಗಪತಿ ಬಾಬು ರಾಜಾಮಾನರ್ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ರಾಜಾಮಾನರ್ ಲುಕ್ ಮತ್ತು ಜಗಪತಿ ಬಾಬು ಹೆಸರು ಅಧಿಕೃತವಾಗಿ ಘೋಷಣೆಯಾಗಿದೆ.

ದಿನದ ಲೆಕ್ಕದಲ್ಲಿ ಸಂಭಾವನೆ
ಜಗಪತಿ ಬಾಬು ಸಿನಿಮಾ ಲೆಕ್ಕದಲ್ಲಿ ಸಂಭಾವನೆ ಪಡೆಯುವುದಿಲ್ಲ. ದಿನದ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗಿದೆ. ಹಾಗ್ನೋಡಿದ್ರೆ, ಸಿನಿಮಾವೊಂದರಲ್ಲಿ ಒಂದು ಕೋಟಿಯಿಂದ ಮೂರು ಕೋಟಿಯವರೆಗೂ ಸಂಪಾದನೆ ಮಾಡ್ತಾರಂತೆ. ಚಿತ್ರದ ಕಾಲ್‌ಶೀಟ್ ಮೇಲೆ ಜಗಪತಿ ಬಾಬು ಸಂಭಾವನೆ ನಿರ್ಧಾರವಾಗುತ್ತದೆ ಎಂದು ತೆಲುಗು ಫಿಲ್ಮಿಬೀಟ್ ವರದಿ ಮಾಡಿದೆ.

ಮದಗಜ-ಅಣ್ಣಾತ್ತೆ ಚಿತ್ರಗಳಲ್ಲಿ ನಟನೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾದಲ್ಲಿ ಜಗಪತಿ ಬಾಬು ವಿಲನ್ ಆಗಿ ನಟಿಸಿದ್ದರು. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ದೊಡ್ಡ ಸಕ್ಸಸ್ ಕಂಡಿತ್ತು. ಶ್ರೀಮುರಳಿ ನಟನೆಯ 'ಮದಗಜ' ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸುತ್ತಿರುವ 'ಅಣ್ಣಾತ್ತೆ' ಚಿತ್ರದಲ್ಲೂ ಜಗಪತಿ ಬಾಬು ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ತಮಿಳಿನಲ್ಲಿ ಲಾಭಂ, ತೆಲುಗಿನಲ್ಲಿ ಟಕ್ ಜಗದೀಶ್, ರಿಪಬ್ಲಿಕ್, ಗುಡ್ ಲಕ್ ಸಖಿ, ಅಲ್ಲು ಅರ್ಜುನ್ ನಟನೆಯ ಪುಷ್ಪ, ಮಹಾ ಸಮುದ್ರಂ, ಲಕ್ಷ್ಯಂ ಸಿನಿಮಾದಲ್ಲಿ ಜಗಪತಿ ಬಾಬು ಇದ್ದಾರೆ.