For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಅಭಿನಯದ ಬ್ಲಾಕ್ ಬಸ್ಟರ್ 'ಸಂಪತ್ತಿಗೆ ಸವಾಲ್' ಸೆಟ್ಟೇರಿದ ಹಿಂದಿನ ಅಸಲಿ ಕಥೆ

  |

  ಕನ್ನಡದ ಸಿನಿ ಪ್ರೇಕ್ಷಕರಿಗೆ ಬಹಳಷ್ಟು ಪ್ರಭಾವ ಬೀರಿದ ಸಿನಿಮಾಗಳು ಯಾರದ್ದು ಎಂದಾಗ ಮಂಚೂಣಿಯಲ್ಲಿ ಬರುವ ಹೆಸರು ವರನಟ ಡಾ.ರಾಜಕುಮಾರ್ ಅವರ ಸಿನಿಮಾಗಳು.

  ಪೌರಾಣಿಕ ಪಾತ್ರದಿಂದ ಹಿಡಿದು, ಯಾವುದೇ ಪಾತ್ರಕ್ಕೂ ನ್ಯಾಯ ಒದಗಿಸುವ ಡಾ.ರಾಜ್ ಅವರ ಹಿಟ್ ಸಿನಿಮಾಗಳ ಸಂಖ್ಯೆ ಲೆಕ್ಕವಿಲ್ಲದಷ್ಟು. ಅದರಲ್ಲಿ ಒಂದು 'ಸಂಪತ್ತಿಗೆ ಸವಾಲ್' ಸಿನಿಮಾ.

  ಸಂಪೂರ್ಣ ಹಳ್ಳಿ ಸೊಗಡಿನಲ್ಲಿ ಸಾಗುವ ಈ ಸಿನಿಮಾ ಬಿಡುಗಡೆಯಾಗಿದ್ದು 1974ರಲ್ಲಿ. ಎ.ವಿ.ಶೇಷಗಿರಿ ರಾವ್ ನಿರ್ದೇಶನದ ಈ ಚಿತ್ರ, ರಾಜ್ ವೃತ್ತಿ ಜೀವನದ ಬ್ಲಾಕ್ ಬಸ್ಟರ್ ಸಿನಿಮಾಗಳ ಪೈಕಿ ಒಂದು.

  ವಾವ್.. ಡಾ.ರಾಜ್ ಕುಮಾರ್ ಬಗ್ಗೆ 'ಬಾಹುಬಲಿ' ನಟ ರಾನಾ ಬಾಯಿಂದ ಬಂದಿದ್ದು ಎಂಥಾ ಮಾತು.!

  ಈ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು 1974ರಲ್ಲಿ. ಈ ಸಿನಿಮಾ ಸೆಟ್ಟೇರಲು ಕಾರಣವಾಗಿದ್ದು ಒಂದು ನಾಟಕ. ಆ ನಾಟಕ ನೋಡಿದ ಮೇಲೆ, ಅಣ್ಣಾವ್ರು ಈ ಸಿನಿಮಾ ಮಾಡಲು ಸೂಚಿಸಿದರಂತೆ. ಅದ್ಯಾವ ನಾಟಕ.

  ಯಾರೇ ಕೂಗಾಡಲಿ.. ಊರೇ ಹೋರಾಡಲಿ

  ಯಾರೇ ಕೂಗಾಡಲಿ.. ಊರೇ ಹೋರಾಡಲಿ

  ಸಿನಿಮಾ ಸೆಟ್ಟೇರಿದ್ದು ಒಂದು ಕಥೆಯಾದರೆ, ಚಿತ್ರದ ಹಾಡಿಗೂ ಒಂದು ಹಿನ್ನಲೆಯಿದೆ. ಈಗಲೂ ಜನರ ಬಾಯಲ್ಲಿ ಗುನುಗುವ ಹಾಡು, 'ಯಾರೇ ಕೂಗಾಡಲಿ.. ಊರೇ ಹೋರಾಡಲಿ'. ಖುದ್ದು, ಡಾ. ರಾಜಕುಮಾರ್ ಅವರೇ ಹಾಡಿರುವ ಈ ಹಾಡಿನ ಹಿಂದಿನ ಕಲ್ಪನೆ ಯಾರದ್ದು ಎನ್ನುವುದನ್ನು ಸಂಗೀತ ನಿರ್ದೆಶಕ ಜಿ.ಕೆ.ವೆಂಕಟೇಶ್ ಹಿಂದೆ ಹೇಳಿದ್ದರು. ಆಕಾಶವಾಣಿಯಲ್ಲಿನ ಸಂದರ್ಶನವೊಂದರಲ್ಲಿ ವೆಂಕಟೇಶ್, ತಾನೇ ರಾಜ್ ಅವರಿಗೆ ಈ ಹಾಡು ಹಾಡುವಂತೆ ಸೂಚಿಸಿದ್ದು ಎಂದಿದ್ದರು.

  ರಾಜ್ ಕನಕಪುರಕ್ಕೆ ಒಂದು ನಾಟಕವನ್ನು ನೋಡಲು ಹೋಗುತ್ತಾರೆ

  ರಾಜ್ ಕನಕಪುರಕ್ಕೆ ಒಂದು ನಾಟಕವನ್ನು ನೋಡಲು ಹೋಗುತ್ತಾರೆ

  ಚಿತ್ರ ಬಿಡುಗಡೆಯಾದ ಒಂದು ವರ್ಷದ ಹಿಂದೆ, ಅಂದರೆ 1973ರಲ್ಲಿ ಡಾ. ರಾಜ್ ಕನಕಪುರಕ್ಕೆ ಒಂದು ನಾಟಕವನ್ನು ನೋಡಲು ಹೋಗುತ್ತಾರೆ. ಆ ನಾಟಕದ ಹೆಸರು ಕೂಡಾ 'ಸಂಪತ್ತಿಗೆ ಸವಾಲ್' ಎಂದು. ಶಾರದಾ ಸಂಗೀತ ನಾಟಕ ಮಂಡಳಿಯ ಈ ನಾಟಕ, ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಈ ನಾಟಕವನ್ನು ನೋಡಿದ ಮೇಲೆ, ರಾಜ್, ಇದನ್ನು ಸಿನಿಮಾ ಮಾಡಲು ನಿರ್ಧರಿಸಿದರು.

  'ರಾಜ್'ಗೂ ಮೊದಲು 'ಕಸ್ತೂರಿ ನಿವಾಸ' ಈ ನಟ ಮಾಡಬೇಕಿತ್ತು! ಆ ಹೀರೋ ರಿಜೆಕ್ಟ್ ಮಾಡಿದ್ದೇಕೆ?'ರಾಜ್'ಗೂ ಮೊದಲು 'ಕಸ್ತೂರಿ ನಿವಾಸ' ಈ ನಟ ಮಾಡಬೇಕಿತ್ತು! ಆ ಹೀರೋ ರಿಜೆಕ್ಟ್ ಮಾಡಿದ್ದೇಕೆ?

  ಸಂಪತ್ತಿಗೆ ಸವಾಲ್ ಸಿನಿಮಾ

  ಸಂಪತ್ತಿಗೆ ಸವಾಲ್ ಸಿನಿಮಾ

  ಸಿನಿಮಾ ಮಾಡುವ ವಿಚಾರವನ್ನು ಶಾರದಾ ನಾಟಕ ಮಂಡಳಿಯ ಮಾಲೀಕ ಬಸವರಾಜಪ್ಪ ಮತ್ತು ಕಥೆ ಬರೆದಿದ್ದ ಪಿ.ಬಿ.ಧುತ್ತರಿಗೆ ಅವರಲ್ಲಿ ರಾಜ್ ಮನವಿ ಮಾಡುತ್ತಾರೆ. ಇವರ ಒಪ್ಪಿಗೆ ಪಡೆದ ನಂತರ, ಎ.ಎನ್.ಮೂರ್ತಿ ಚಿತ್ರಕ್ಕೆ ಬಂಡವಾಳ ಹೂಡಲು ಮುಂದಾಗುತ್ತಾರೆ. ಎ.ವಿ.ಶೇಷಗಿರಿ ರಾವ್ ಚಿತ್ರದ ನಿರ್ದೇಶಕರಾಗಿ ಮತ್ತು ಜಿ,ಕೆ.ವೆಂಕಟೇಶ್ ಅವರು ಸಂಗೀತ ನಿರ್ದೇಶಕರಾಗುತ್ತಾರೆ.

  ಸಾಹುಕಾರ ಸಿದ್ದಪ್ಪನ ಪಾತ್ರದಲ್ಲಿ ವಜ್ರಮುನಿ

  ಸಾಹುಕಾರ ಸಿದ್ದಪ್ಪನ ಪಾತ್ರದಲ್ಲಿ ವಜ್ರಮುನಿ

  ಸಂಪತ್ತಿಗೆ ಸವಾಲ್ ಸಿನಿಮಾದ ಎಲ್ಲಾ ಪಾತ್ರಧಾರಿಗಳಿಗೆ ಮೊದಲು ಆ ನಾಟಕವನ್ನು ನೋಡಲು ಡಾ.ರಾಜ್ ಮತ್ತು ನಿರ್ದೇಶಕರು ಸೂಚಿಸಿದ್ದರಂತೆ. ಡಾ.ರಾಜ್ ಮತ್ತು ಸಾಹುಕಾರ ಸಿದ್ದಪ್ಪನ ಪಾತ್ರದಲ್ಲಿ ವಜ್ರಮುನಿ, ನೆನಪಿನಲ್ಲಿ ಉಳಿಯುವ ನಟನೆಯನ್ನು ನೀಡಿದ್ದರು. ಮಂಜುಳಾ, ರಾಜಾಶಂಕರ್, ಬಾಲಕೃಷ್ಣ ಮುಂತಾದವರು ಚಿತ್ರದ ಪಾತ್ರವರ್ಗದಲ್ಲಿದ್ದರು.

  English summary
  How Yesteryear Blockbuster Dr.Rajkumar, Manjula, Vajramuni In The Lead Role Sampattige Saval Movie Started.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X