»   » ನಿಖಿಲ್‌ಗೆ ಫಿಕ್ಸ್ ಆಗಿದ್ದ 'ಹೊಯ್ಸಳ' ಟೈಟಲ್ ಶಿವಣ್ಣನಿಗೆ ಮೀಸಲಂತೆ..

ನಿಖಿಲ್‌ಗೆ ಫಿಕ್ಸ್ ಆಗಿದ್ದ 'ಹೊಯ್ಸಳ' ಟೈಟಲ್ ಶಿವಣ್ಣನಿಗೆ ಮೀಸಲಂತೆ..

Posted By:
Subscribe to Filmibeat Kannada

ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಎರಡನೇ ಚಿತ್ರದ ಶೂಟಿಂಗ್ ಸದ್ಯದಲ್ಲೇ ಶುರುವಾಗಲಿದ್ದು, ಈ ಚಿತ್ರಕ್ಕೆ 'ಹೊಯ್ಸಳ' ಎಂಬ ಟೈಟಲ್ ಇಡಲಾಗಿದೆ ಎಂದು ಸುದ್ದಿಯಾಗಿತ್ತು. ಆದರೆ ಈಗ ಚಿತ್ರದ ಟೈಟಲ್ ಶಿವಣ್ಣನಿಗೆ ಮೀಸಲು ಎಂಬ ಹೊಸ ಸುದ್ದಿ ಕೇಳಿಬಂದಿದೆ.[ನಿಖಿಲ್ ಕುಮಾರ್ ಎರಡನೇ ಚಿತ್ರಕ್ಕೆ ರಾಜ ವಂಶದ ಹೆಸರು]

ಹೌದು, 'ಬಹದ್ದೂರ್' ಖ್ಯಾತಿಯ ಚೇತನ್ ಕುಮಾರ್ ಕಥೆ, ಚಿತ್ರಕಥೆ ಬರೆದು ನಿಖಿಲ್ ಕುಮಾರ್ ಗೆ ಆಕ್ಷನ್ ಕಟ್ ಹೇಳಲಿರುವ ಚಿತ್ರಕ್ಕೆ 'ಹೊಯ್ಸಳ' ಟೈಟಲ್ ಬಹುತೇಕ ಕ್ಯಾನ್ಸಲ್ ಆಗಲಿದೆ. ಮುಂದೆ ಓದಿರಿ..

ಟೈಟಲ್ ಬಿಡುವುದಿಲ್ಲ ಎಂದ ರಾಮು

ನಿರ್ಮಾಪಕ ರಾಮು ರವರು ತಮ್ಮ ಬಳಿಯಿದ್ದ 'ಹೊಯ್ಸಳ' ಟೈಟಲ್ ಅನ್ನು ಈ ಹಿಂದೆ ನಿಖಿಲ್ ಕುಮಾರ್ ಎರಡನೇ ಸಿನಿಮಾಗೆ ಚಿತ್ರತಂಡದ ಮನವಿ ಮೇರೆಗೆ ಕೊಡಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿತ್ತು. ಆದರೆ ಈಗ ರಾಮು ರವರು ತಮ್ಮ ಬ್ಯಾನರ್ ಅಡಿಯಲ್ಲಿ ನೊಂದಾಯಿಸಿರುವ ಟೈಟಲ್ ಅನ್ನು ಕೊಡುವುದಿಲ್ಲ ಎಂದು ಚೆನ್ನಾಂಬಿಕ ಫಿಲ್ಮ್ಸ್ ಸಂಸ್ಥೆಗೆ ತಿಳಿಸಿದ್ದಾರಂತೆ.

ಶಿವಣ್ಣನಿಗೆ 'ಹೊಯ್ಸಳ' ಟೈಟಲ್

ಅಂದಹಾಗೆ 'ಹೊಯ್ಸಳ' ಟೈಟಲ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಮೀಸಲಾಗಿದ್ದು, ಚಿತ್ರಕ್ಕೆ ಈಗ ಕಥೆಯನ್ನು ರೆಡಿ ಮಾಡಲಾಗುತ್ತಿದೆ. ಟೈಟಲ್ ಸಹ ಕಥೆಗೆ ಹೊಂದಿಕೊಳ್ಳುತ್ತದೆ ಎಂದು ನಿರ್ಮಾಪಕ ರಾಮು ರವರು ತಿಳಿಸಿದ್ದಾರೆ.

ನಿಖಿಲ್ ಚಿತ್ರಕ್ಕೆ ಹೊಸ ಟೈಟಲ್ ಹುಡುಕಾಟ

'ಹೊಯ್ಸಳ' ಟೈಟಲ್ ಕೈತಪ್ಪಿರುವುದರಿಂದ ಈಗ ನಿಖಿಲ್ ಕುಮಾರ್ ನಿರಾಸೆಗೊಂಡಿದ್ದು, ಚಿತ್ರತಂಡ ಹೊಸ ಟೈಟಲ್ ಗಾಗಿ ಹುಡುಕಾಟ ನಡೆಸಿದೆ.

ಜೂನ್ 5 ರಿಂದ ಚಿತ್ರೀಕರಣ ಆರಂಭ

ನಿಖಿಲ್ ಕುಮಾರ್ ಎರಡನೇ ಸಿನಿಮಾದಲ್ಲಿ ಅವರಿಗೆ ಜೊತೆಯಾಗಿ ಬೆಳಗಾವಿ ಮೂಲದ ರೂಪದರ್ಶಿ ರಿಯಾ ನಲವಾಡೆ ಅಭಿನಯಿಸಲಿದ್ದಾರೆ. ಚಿತ್ರೀಕರಣಕ್ಕೆ ದಿನಗಣನೆ ಶುರುವಾಗಿದ್ದು, ಜೂನ್ 5 ರಿಂದ ಚಿತ್ರತಂಡ ಶೂಟಿಂಗ್ ಶುರು ಮಾಡಲಿದೆ. ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ, ಶ್ರಿಶಾ ಕುದವಳ್ಳಿ ಛಾಯಾಗ್ರಹಣ ಇರಲಿದೆ.['ಜಾಗ್ವಾರ್' ನಾಯಕನಿಗಾಗಿ ಬಂದ್ಲು ಬೆಳಗಾವಿ ಸುಂದರಿ!]

English summary
Nikhil Kumar Second Film title 'Hoysala' has been in controversy. Reports says producer Ramu, who had registered name 'Hoysala' under his banner is not willing to give up this title.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada