»   » ನಿಖಿಲ್ ಕುಮಾರ್ ಎರಡನೇ ಚಿತ್ರಕ್ಕೆ ರಾಜ ವಂಶದ ಹೆಸರು

ನಿಖಿಲ್ ಕುಮಾರ್ ಎರಡನೇ ಚಿತ್ರಕ್ಕೆ ರಾಜ ವಂಶದ ಹೆಸರು

Posted By:
Subscribe to Filmibeat Kannada

'ಜಾಗ್ವಾರ್' ನಾಯಕ ನಿಖಿಲ್ ಕುಮಾರ್ ಎರಡನೇ ಚಿತ್ರಕ್ಕೆ ಸಿದ್ದವಾಗಿದ್ದು, ಜೂನ್ 5 ರಂದು ಶುರುವಾಗಲಿದೆ. ಇದೀಗ, ಈ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದ್ದು, ಕನ್ನಡ ನಾಡು ಸೇರಿದಂತೆ ದಕ್ಷಿಣ ಭಾರತವನ್ನ ಆಳಿದ ರಾಜರ ವಂಶದ ಹೆಸರನ್ನ ಇಡಲು ಚಿತ್ರತಂಡ ನಿರ್ಧರಿಸಿದೆ.[ಜೂನ್ 5 ರಿಂದ ನಿಖಿಲ್ ಕುಮಾರ್ 2ನೇ ಸಿನಿಮಾ ಚಿತ್ರೀಕರಣ ಆರಂಭ]

ಮೂಲಗಳ ಪ್ರಕಾರ ನಿಖಿಲ್ ಕುಮಾರ್ ಎರಡನೇ ಚಿತ್ರಕ್ಕೆ 'ಹೊಯ್ಸಳ' ಎಂದು ಹೆಸರಿಡಲಾಗಿದೆಯಂತೆ. ಸದ್ಯ, ಈ ಟೈಟಲ್ ನಿರ್ಮಾಪಕ ರಾಮು ಅವರ ಬಳಿಯಿದೆ. ಈಗಾಗಲೇ ಚಿತ್ರತಂಡ, ರಾಮು ಅವರು ಬಳಿ ಈ ಬಗ್ಗೆ ಮಾತನಾಡಿದ್ದು, ರಾಮು ಅವರು ಕೂಡ ಟೈಟಲ್ ಕೊಡಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.[ನಿಖಿಲ್ ಕುಮಾರ್ ಎರಡನೇ ಚಿತ್ರಕ್ಕೆ ನಿರ್ದೇಶಕರು ಫಿಕ್ಸ್?]

Actor Nikhil Kumar Second Movie Titled As A Hoysala

ಅಂದ್ಹಾಗೆ, ಚೇತನ್ ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಶ್ರಿಶಾ ಕುದವಳ್ಳಿ ಛಾಯಗ್ರಹಣ ಇರಲಿದೆ. ವಿ.ಹರಿಕೃಷ್ಣ ರವರು ಸಂಗೀತ ಸಂಯೋಜನೆ ನೀಡಲಿದ್ದಾರೆ.['ಜಾಗ್ವಾರ್' ನಾಯಕನಿಗಾಗಿ ಬಂದ್ಲು ಬೆಳಗಾವಿ ಸುಂದರಿ!]

ಇನ್ನು ನಿಖಿಲ್ ಕುಮಾರ್ ಗೆ ನಾಯಕಿಯಾಗಿ ಬೆಳಗಾವಿ ಮೂಲದ ಸುಂದರಿ ಹಾಗೂ ರೂಪದರ್ಶಿ ರಿಯಾ ನಲವಾಡೆ ಅಭಿನಯಿಸಲಿದ್ದಾರೆ. ರಿಯಾ 2017 ರ ಮಾರ್ಚ್ ನಲ್ಲಿ ನಡೆದ, 'ಟ್ಯಾಲೆಂಟ್ ಹಂಟ್ ನ್ಯಾಷನಲ್ ಫ್ರೆಶ್ ಫೇಸ್' ಸ್ಪರ್ಧೆಯ ಫಿನಾಲೆಯಲ್ಲಿ ಬೆಂಗಳೂರನ್ನು ಪ್ರತಿನಿಧಿಸಿ ವಿಜೇತರಾಗಿದ್ದರು. ಉಳಿದಂತೆ ಶೋಭ್ ರಾಜ್ ಹಾಗೂ ಸಾಧುಕೋಕಿಲಾ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಲಿದ್ದಾರೆ.

English summary
Nikhil Kumar's second film which is all set to be launched on the 05th of June is likely to be titled as 'Hoysala'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada