For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್ 'ಹೃದಯ'ಕ್ಕೆ ಲಗ್ಗೆ ಹಾಕಿದ ಕನ್ನಡ 'ಅವಂತಿ'

  By Harshitha
  |

  'ಒರಟ ಐ ಲವ್ ಯು' ಚಿತ್ರ ಗೊತ್ತಲ್ವಾ.....ಅದ್ರಲ್ಲಿರುವ ಸೂಪರ್ ಹಿಟ್ ಸಾಂಗ್ ''ಯಾರೋ....ಕಣ್ಣಲ್ಲಿ...ಕಣ್ಣನ್ನಿಟ್ಟು....'' ಹಾಡು ಕೇಳಿದ್ದೀರಾ...? ಆ ಹಾಡಲ್ಲಿ ಬರುವ ಮುದ್ದು ಮುದ್ದು ಹುಡುಗಿಯ ಮುಖ ನೆನಪಿದೆಯಾ..? ಇಲ್ಲಾಂದ್ರೆ, ಮೊದಲು ಈ ಫೋಟೋ ನೋಡಿಬಿಡಿ....

  ಅರೇ...ಈಕೆ ನಿಜವಾಗಿಯೂ 'ಒರಟ'ನ ಹುಡುಗಿನಾ ಅಂತ ಆಶ್ಚರ್ಯ ಆಗುತ್ತೆ ಅಲ್ವಾ. ಬರೋಬ್ಬರಿ ಎಂಟು ವರ್ಷಗಳನ್ನ ತೆಗೆದುಕೊಂಡು ರೂಪಾಂತರವಾಗಿ ನಿಮ್ಮೆಲ್ಲರನ್ನ ರಂಜಿಸೋಕೆ ಮತ್ತೆ ಪ್ರತ್ಯಕ್ಷವಾಗಿರುವ ಈಕೆ ಸೌಮ್ಯ ಅಲಿಯಾಸ್ ಹೃದಯ ಅವಂತಿ.

  'ಒರಟ ಐ ಲವ್ ಯು' ಸಿನಿಮಾ ತೆರೆಕಂಡಾಗ ಗಾಂಧಿನಗರ ಈಕೆಗೆ ಕೊಟ್ಟ ಹೆಸರು ಸೌಮ್ಯ. ಆಗಿನ್ನೂ ಈಕೆಗೆ ಚಿಕ್ಕವಯಸ್ಸು. ಮೊದಲ ಚಿತ್ರದಲ್ಲಿ (ಒರಟ ಐ ಲವ್ ಯು) ಹೇಳಿಕೊಳ್ಳುವ ದೊಡ್ಡ ಮಟ್ಟದ ಯಶಸ್ಸು ಸಿಗದಿದ್ದರೂ, ಈಕೆಗೆ ಅವಕಾಶಗಳೇನೂ ಕಮ್ಮಿಯಾಗಿರಲಿಲ್ಲ.

  ಆದ್ರೆ, ನಟನೆಗಿಂತ ಹೆಚ್ಚಾಗಿ ಓದಿಗೆ ಪ್ರಾಮುಖ್ಯತೆ ಕೊಟ್ಟ ಸೌಮ್ಯ, ಇದೀಗ ಎಂಜಿನಿಯರಿಂಗ್ ಪದವೀಧರೆ. ಓದಿನ ಜೊತೆಗೆ ಡಯೆಟ್, ವರ್ಕೌಟ್ ಎಲ್ಲಾ ಪ್ಲಾನ್ ಮಾಡಿ ಇದೀಗ ಸೆಕೆಂಡ್ ಇನ್ನಿಂಗ್ಸ್ ನ ಧೂಮ್ ಧಾಮ್ ಆಗಿ ಶುರುಮಾಡಬೇಕು ಅಂತಿರುವ ಸೌಮ್ಯ, ಮಾಡಿಸಿರುವ ಹೊಚ್ಚ ಹೊಸ ಫೋಟೋಶೂಟ್ ನ ಝಲಕ್ ಗಳಿವು.

  ಈಗಾಗಲೇ ಟಾಲಿವುಡ್ ಅಂಗಳದಲ್ಲಿ ಸೌಮ್ಯ(ಹೃದಯ ಅವಂತಿ) ಫೋಟೋಗಳನ್ನ ನೋಡಿರುವ ಕೆಲ ನಿರ್ಮಾಪಕರು, ಅದಾಗಲೇ ಚಿತ್ರಗಳಿಗೆ ಅವಕಾಶ ನೀಡಿದ್ದಾಗಿದೆ. ತೆಲುಗು ಸಿನಿ ಅಂಗಳದಲ್ಲಿ ಎರಡರಿಂದ ಮೂರು ಚಿತ್ರಗಳನ್ನ ಸಹಿ ಹಾಕಿರುವ ಸೌಮ್ಯ, ಕನ್ನಡದಲ್ಲೂ ಅವಕಾಶಗಳನ್ನ ಎದುರು ನೋಡುತ್ತಿದ್ದಾರೆ.

  ಅಂದ್ಹಾಗೆ, ಈಕೆಯ ನಿಜನಾಮ ಹೃದಯ ಅವಂತಿ. ಈ ಹೆಸರಿನಿಂದಲೇ ಮತ್ತೆ ಬಣ್ಣ ಹಚ್ಚುವ ಉತ್ಸುಕದಲ್ಲಿದ್ದಾರೆ ಈ ಚೆಲುವೆ. ದುನಿಯಾ ರಶ್ಮಿ ಹೈಫೈ ಹುಡುಗಿಯಾಗಿ ಬದಲಾದ ಮೇಲೆ ಆಫರ್ ಗಳನ್ನ ಗಿಟ್ಟಿಸಿಕೊಂಡಿರುವಂತೆ, ಹೃದಯ ಅವಂತಿ ಕೂಡ ಯಾವ ಹೀರೋಯಿನ್ ಗಳಿಗೂ ಕಮ್ಮಿ ಇಲ್ಲದ ಹಾಗೆ ರೆಡಿಯಾಗಿದ್ದಾರೆ.

  ಹಾಗೆ, ಚೆಂದಕ್ಕಿಂತ ಚೆಂದವಾಗಿರುವ ಹೃದಯ ಅವಂತಿ ಕನ್ನಡ ಬೆಳ್ಳಿತೆರೆಮೇಲೆ ಮಿಂಚಬೇಕು ಅಂದ್ರೆ, ಅವರ ಈ ಲೇಟೆಸ್ಟ್ ಫೋಟೋಶೂಟ್ ಕನ್ನಡ ನಿರ್ಮಾಪಕರ ಕಣ್ಣಿಗೆ ಬೀಳಬೇಕು. ಇಲ್ಲಾಂದ್ರೆ, ಕನ್ನಡದ ಮನೆಮಗಳು, ಟಾಲಿವುಡ್ ನಲ್ಲಿ ಸೆಟ್ಲ್ ಆಗುವುದು ಗ್ಯಾರೆಂಟಿ.

  English summary
  Hridaya Avanthi (Soumya) of Orata I Love You fame is all set to start second innings. Hridaya Avanthi has already bagged offers in Tollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X