ಹೃತ್ತಿಕ್ ರೋಷನ್ ತಾತ, ನಿರ್ದೇಶಕ ಓಂ ಪ್ರಕಾಶ್ ನಿಧನ
ಬಾಲಿವುಡ್ ಚಿತ್ರ ನಿರ್ದೇಶಕ ಓಂ ಪ್ರಕಾಶ್ (92) ಇಂದು (ಬುದವಾರ) ಬೆಳಗ್ಗೆ ನಿಧನ ಹೊಂದಿದ್ದಾರೆ. ಓಂ ಪ್ರಕಾಶ್, ನಟ ಹೃತ್ತಿಕ್ ರೋಷನ್ ಅವರ ತಾಯಿಯ ತಂದೆ.
ನಟ ದೀಪಕ್ ಪರಾಶರ್ ಈ ವಿಷಯವನ್ನು ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ''ನನ್ನ ಪ್ರೀತಿಯ ಅಂಕಲ್ ಓಂ ಪ್ರಕಾಶ್ ಗಂಟೆಗಳ ಮುಂಚೆ ವಿಧಿವಶರಾದರು. ಚಿತ್ರರಂಗದ ಅವರು ನೀಡಿದ ಕೊಡುಗೆ ನಮ್ಮ ಜೊತೆಗೆ ಇರುತ್ತದೆ.'' ಎಂದು ತಿಳಿಸಿದ್ದಾರೆ.
ಓಂ ಪ್ರಕಾಶ್ ಸಾಕಷ್ಟು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಇವುಗಳಲ್ಲಿ 'ಆಪ್ ಕೀ ಕಸಮ್' ಹಾಗೂ 'ಅಖೀರ್ ಕೌನ್', 'ಆಯೀ ಮಿಲನ್ ಕಿ ಬೇಲಾ', 'ಆಯೆ ದಿನ್ ಬಹರ್ ಕೆ' ಚಿತ್ರಗಳು ಪ್ರಮುಖವಾಗಿವೆ. ಸಿನಿಮಾ ನಿರ್ದೇಶನ ಮಾತ್ರವಲ್ಲದೆ 1995 - 96 ರಲ್ಲಿ ಫಿಲ್ಮ್ ಫೌಂಡೇಷನ್ ಆಫ್ ಇಂಡಿಯಾದಲ್ಲಿ ಅವರು ಸೇವೆ ಸಲ್ಲಿಸಿದರು.

ಇತ್ತೀಚಿಗಷ್ಟೆ ತಮ್ಮ 'ಸೂಪರ್ 30' ಸಿನಿಮಾ ಪ್ರಚಾರದ ಸಮಯದಲ್ಲಿ ತಮ್ಮ ತಾತನ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹೃತ್ತಿಕ್ ರೋಷನ್ ಹಂಚಿಕೊಂಡಿದ್ದರು. ಇವರೇ ನನ್ನ ಸೂಪರ್ ಶಿಕ್ಷಕ ಎಂದು ಬರೆದುಕೊಂಡಿದ್ದರು.
English summary
Bollywood actor Hrithik Roshan grandfather, director Om Prakash passed away today (August 7th).


Click it and Unblock the Notifications