»   » 'ಫಿಲ್ಮ್ ಚೇಂಬರ್' ಆಯ್ತು 'ರಣರಂಗ': ಪತ್ರಕರ್ತರ ಜೊತೆ ಹುಚ್ಚ ವೆಂಕಟ್ ಮಹಾ ಸಂಘರ್ಷ

'ಫಿಲ್ಮ್ ಚೇಂಬರ್' ಆಯ್ತು 'ರಣರಂಗ': ಪತ್ರಕರ್ತರ ಜೊತೆ ಹುಚ್ಚ ವೆಂಕಟ್ ಮಹಾ ಸಂಘರ್ಷ

Posted By:
Subscribe to Filmibeat Kannada

''ನಾನು ಬೆಳದಿದ್ದು ಮಾಧ್ಯಮದವರಿಂದ, ನನಗೆ ಪ್ರಚಾರ ಸಿಕ್ಕಿದ್ದು ಮಾಧ್ಯಮದವರಿಂದ. ನನ್ನ ಈ ಯಶಸ್ಸಿಗೆ ಅವರೇ ಕಾರಣವೆನ್ನುತ್ತಿದ್ದ ಹುಚ್ಚ ವೆಂಕಟ್, ಇಂದು ಅದೇ ಮಾಧ್ಯಮದವರು ಜೊತೆ ಸಂಘರ್ಷಕ್ಕೆ ಇಳಿದಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಅವರ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಹುಚ್ಚ ವೆಂಕಟ್ ಪತ್ರಕರ್ತರ ವಿರುದ್ಧ ಯುದ್ಧ ಸಾರಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಅಹಂಕಾರದ ಮಾತಿನ ಮೂಲಕ ಪತ್ರಕರ್ತರ ಜೊತೆ ಜಗಳವಾಡಿಕೊಂಡಿದ್ದಾರೆ.

ಅಷ್ಟಕ್ಕೂ, ಹುಚ್ಚ ವೆಂಕಟ್ ಮತ್ತು ಪತ್ರಕರ್ತರ ನಡುವಿನ ಈ ಸಂಘರ್ಷಕ್ಕೆ ಕಾರಣವೇನು? ಮುಂದೆ ಓದಿ......

ಫಿಲ್ಮ್ ಚೇಂಬರ್'ನಲ್ಲಿ ಹುಚ್ಚಾಟ ಪ್ರದರ್ಶಿಸಿದ ವೆಂಕಟ್!

'ಬೆಂಗಳೂರು ಮಿರರ್' ಪತ್ರಕರ್ತನ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದ ವೆಂಕಟ್, ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ಸುದ್ದಿಗೋಷ್ಠಿಯಲ್ಲಿ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಪತ್ರಕರ್ತರ ವಿರುದ್ಧ ಅದ್ಯಾಕೋ ಸಿಕ್ಕಾಪಟ್ಟೆ ಫೈರ್ ಆಗಿಬಿಟ್ಟರು.

ವೆಂಕಟ್ ಅವರನ್ನ ತರಾಟೆಗೆ ತೆಗೆದುಕೊಂಡ ಪತ್ರಕರ್ತರು!

'ಬೆಂಗಳೂರು ಮಿರರ್' ಪತ್ರಕರ್ತ ಬಗ್ಗೆ ಅಸಹ್ಯವಾಗಿ ಮಾತನಾಡಿದ್ದ ವೆಂಕಟ್ ಅವರನ್ನ, ಇತರೆ ಪತ್ರಕರ್ತರು ತರಾಟೆಗೆ ತೆಗೆದುಕೊಂಡರು. ಮಾಧ್ಯಮದವರನ್ನ ಬೈಯುವುದಕ್ಕೆ ನೀನು ಯಾರು? ಜನರನ್ನ ಬೈಯುವುದಕ್ಕೆ ನೀನು ಯಾರು ಎಂದು ಫುಲ್ ಕ್ಲಾಸ್ ತಗೊಂಡರು.[ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ರವರ ಹೊಸ 'ಫೈರಿಂಗ್' ವಿಡಿಯೋ...]

ಸಮರ್ಥಿಸಿಕೊಂಡ ಹುಚ್ಚ ವೆಂಕಟ್!

ತನ್ನನ್ನ ತಾನೇ ಸಮರ್ಥಿಸಿಕೊಂಡ ವೆಂಕಟ್, ನಾನು ಮಾಡಿದ್ದೇ ಸರಿ ಎಂದು ಕಿರುಚಾಡಿದರು. ಪತ್ರಕರ್ತರು ಸರಿಯಿಲ್ಲ, ಕನ್ನಡ ಸಿನಿಮಾವನ್ನ ನೋಡಲ್ಲ ಎಂದು ಅಹಂಕಾರದ ಮಾತುಗಳನ್ನ ಆಡಿದರು.

ವಿಮರ್ಶೆ ಬರೆಯಬೇಡಿ!

ನಿಮಗೆ ಸಿನಿಮಾ ಚೆನ್ನಾಗಿಲ್ಲ ಎಂದ ಮೇಲೆ ನೀವು ವಿಮರ್ಶೆ ಬರೆಯಬೇಡಿ. ಬರೆಯುವ ಅಧಿಕಾರ ನಿಮಗಿಲ್ಲ. ನಾವು ಕೋಟಿ ಕೋಟಿ ಹಾಕಿ ಸಿನಿಮಾ ಮಾಡ್ತಿವಿ. ಒಬ್ಬೊಬ್ಬರಿಗೆ ಒಂದೊಂದು ಅಭಿರುಚಿ ಇರುತ್ತೆ. ಸಿನಿಮಾ ಚೆನ್ನಾಗಿಲ್ಲ ಅಂತ ನೀವು ಹೇಗೆ ತೀರ್ಮಾನ ಮಾಡ್ತಿರಾ ಎಂದು ಪತ್ರಕರ್ತರಿಗೆ ಪ್ರಶ್ನಿಸಿದರು.

'ರಣರಂಗ'ವಾದ ವಾಣಿಜ್ಯ ಮಂಡಳಿ

ಹುಚ್ಚ ವೆಂಕಟ್ ಅವರ ರಂಪಾಟಕ್ಕೆ ಕೋಪಗೊಂಡ ಮಾಧ್ಯಮದವರು, ವೆಂಕಟ್ ಅವರ ಮಾತಿನ ಶೈಲಿಯನ್ನ ಖಂಡಿಸಿದರು. ಮಾತಿಗೆ ಮಾತು ಬೆಳದು ವಾಣಿಜ್ಯ ಮಂಡಳಿ 'ರಣರಂಗ'ವಾಯಿತು. ಅಷ್ಟೇ ಅಲ್ಲದೇ, ಇನ್ಮುಂದೆ ನಿಮ್ಮ ಸಿನಿಮಾಗಳನ್ನ ನೋಡಲ್ಲ, ಬರೆಯವುದಿಲ್ಲ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಪ್ರೇಕ್ಷಕರನ್ನ 'ಥೂ' ಎಂದಿದ್ದ ವೆಂಕಟ್!

ವೆಂಕಟ್ ನಟಿಸಿ, ನಿರ್ದೇಶಿಸಿದ್ದ 'ಪೊರ್ಕಿ ಹುಚ್ಚ ವೆಂಕಟ್' ಚಿತ್ರವನ್ನ ನೋಡಲು ಯಾರು ಹೋಗಿಲ್ಲ ಎಂಬ ಕಾರಣಕ್ಕೆ, ಬೆಂಗಳೂರಿಗರನ್ನ ಹಾಗೂ ಕನ್ನಡ ಪ್ರೇಕ್ಷಕರನ್ನ 'ಥೂ....ನನ್ನ ಎಕ್ಕಡ' ಎಂದು ಬೈದಿದ್ದರು. ವಿಡಿಯೋ ಮೂಲಕ ಪ್ರೇಕ್ಷಕರನ್ನ ಹೀಯಾಳಿಸಿದ್ದರು.[ಮತ್ತೆ ರೊಚ್ಚಿಗೆದ್ದ ಹುಚ್ಚ ವೆಂಕಟ್: 'ಥೂ' ಎಂದು ಉಗಿದ ಟಿ.ಆರ್.ಪಿ ಕಿಂಗ್.!]

ವಿಮರ್ಶೆ ಬರೆದಿದ್ದಕ್ಕೆ ಬೈಗುಳ!

ಬೆಂಗಳೂರು ಮಿರರ್' ವರದಿಗಾರ, 'ಪೊರ್ಕಿ ಹುಚ್ಚ ವೆಂಕಟ್' ಚಿತ್ರದ ಬಗ್ಗೆ ವಿಮರ್ಶೆ ಬರೆದಿದ್ದರು. ಆದ್ರೆ, ಈ ವಿಮರ್ಶೆಯನ್ನ ಅರಗಿಸಿಕೊಳ್ಳದ ವೆಂಕಟ್ ''ವಿಡಿಯೋ ಮೂಲಕ ಆ ವರದಿಗಾರನ ಬಗ್ಗೆ ತುಂಬಾ ಕೀಳು ಮಟ್ಟದ ಭಾಷೆ ಬಳಸಿ ಮಾತನಾಡಿದ್ದರು.

ಕ್ಷಮೆ ಕೇಳಿದ ವೆಂಕಟ್

ಈ ಬಗ್ಗೆ ಸ್ವಷ್ಟನೆ ನೀಡಲು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಅವರ, ಜೊತೆ ಹುಚ್ಚ ವೆಂಕಟ್ ಸುದ್ದಿಗೋಷ್ಠಿ ನಡೆಸಿದರು. ಇಲ್ಲಿಯೂ ಅದೇ ಅಶಿಸ್ತಿನ ಮಾತಿನಿಂದ ವೆಂಕಟ್ ಕಿರುಚಾಡಿದರು. ಕೊನೆಗೆ ಪತ್ರಕರ್ತರಿಗೆ ನಾನು ತಲೆಬಾಗುತ್ತೇನೆ ಎಂದು ನನ್ನನ್ನ ಕ್ಷಮಿಸಿ ಎಂದು ಬಿಟ್ಟರು.

ಸಾರಾ ಗೋವಿಂದು ಏನು ಹೇಳಿದ್ರು?

ಇದು ಇಲ್ಲಿಗೆ ನಿಲ್ಲಿಸುವುದು ಉತ್ತಮ. ಮುಂದುವರೆಸುವುದು ಬೇಡ. ಬೆಂಗಳೂರು ವರದಿಗಾರರಿಗೆ ವೆಂಕಟ್ ಕ್ಷಮೆ ಕೇಳಿದ್ದಾರೆ. ಇನ್ಮುಂದೆ ಮಾತನಾಡುವಾಗ ಯೋಚನೆ ಮಾಡ್ತಾರೆ ಎಂದು ಸಂಧಾನ ಮಾಡಿಸಿದರು.

English summary
Kannada Director and Actor Huccha Venkat In KFCC regarding Making Allegations against Journalists. Here is the details.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada