»   » ಶಾಸಕ ಮುನಿರತ್ನ ವಿರುದ್ಧ ರೊಚ್ಚಿಗೆದ್ದ ಹುಚ್ಚ ವೆಂಕಟ್

ಶಾಸಕ ಮುನಿರತ್ನ ವಿರುದ್ಧ ರೊಚ್ಚಿಗೆದ್ದ ಹುಚ್ಚ ವೆಂಕಟ್

Posted By:
Subscribe to Filmibeat Kannada

ರಾಜರಾಜೇಶ್ವರಿ ಶಾಸಕ ಮುನಿರತ್ನ ವಿರುದ್ಧ ನಟ-ನಿರ್ದೇಶಕ ಹುಚ್ಚ ವೆಂಕಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮತದಾರರನ್ನ ಸೆಳೆಯಲು 'ಕುಕ್ಕರ್' ಹಂಚುತ್ತಿದ್ದಾರೆ ಎಂದು ಫೈರಿಂಗ್ ಸ್ಟಾರ್ ಗರಂ ಆಗಿದ್ದಾರೆ.

'ನನ್ನ ತಂಗಿ ಮನೆಗೂ ಕೊಟ್ಟು ತಮಗೆ ಮತ ಹಾಕಿ ಎಂದಿದ್ದಾರೆ. ಅಷ್ಟೇ ಅಲ್ಲದೇ 'ಕುಕ್ಕರ್ ಬಾಕ್ಸ್' ಮೇಲೆ ಬರೆದಿರುವ ಡೈಲಾಗ್ ಕಂಡು ಶಾಸಕರನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಸಂಬಂಧ ಇಂದು ಪ್ರೆಸ್‌ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹುಚ್ಚ ವೆಂಕಟ್ ಕುಕ್ಕರ್ ಬಾಕ್ಸ್, ಸ್ಟೌವ್ ಹಾಗೂ ನೀರಿನ ಕ್ಯಾನ್ ಹಿಡಿದು ಆಗಮಿಸಿದ್ದರು. ತದ ನಂತರ ಮಾತನಾಡಿದ ಅವರು ''ರಾಜಕೀಯ ಇಂದು ಈ ಹಂತಕ್ಕೆ ಬಂದಿದೆ. ಜನರು ಇಂತಹ ಆಮಿಷಕ್ಕೆ ಒಳಗಾಗದೆ ಉತ್ತಮ ವ್ಯಕ್ತಿಯನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು‌'' ಎಂದು‌ ಜನರಿಗೆ ಸಲಹೆ ನೀಡಿದರು.

ಹುಚ್ಚ ವೆಂಕಟ್ ಅವರೇ... ಇದೆಲ್ಲ ನಿಮಗೆ ಮರೆತು ಹೋಯ್ತಾ.?

Huccha Venkat alleged against MLA Munirathna

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಮುನಿರತ್ನ ''ಇದನ್ನ ನಾನು ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದೇನೆ. ಬಡವರಿಗೆ, ಅಸಹಾಯಕರಿಗೆ, ನಿರ್ಗತಿಕರಿಗೆ ನೆರವಾಗಿದ್ದೇನೆ. ಇದಕ್ಕೂ ಚುನಾವಣೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇದು ಒಳ್ಳೆಯ ಉದ್ದೇಶದಿಂದ ಮಾಡುತ್ತಿರುವ ಕೆಲಸ'' ಎಂದಿದ್ದಾರೆ.

English summary
Kannada Actor Huccha Venkat has alleged against Rajarajeshwari nagar constituency MLA Munirathna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X