For Quick Alerts
  ALLOW NOTIFICATIONS  
  For Daily Alerts

  ಸರ್ಪ್ರೈಸ್ ಸುದ್ದಿಯೊಂದಿಗೆ ಮತ್ತೆ ಬಂದ ಹುಚ್ಚ ವೆಂಕಟ್

  |

  ಬಿಗ್ ಬಾಸ್ ಹಾಗೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ ಬಳಿಕ ಹುಚ್ಚ ವೆಂಕಟ್ ಬರಿ ಗಲಾಟೆಗಳಿಂದಲೇ ಸುದ್ದಿಯಾದರು. ಮಡಿಕೇರಿ, ಮಂಡ್ಯ, ತಮಿಳುನಾಡು ಹೀಗೆ ಹೋದಲ್ಲಿ ಬಂದಲ್ಲಿ ಗಲಾಟೆ ಮಾಡಿಕೊಂಡರು.

  ಎಂದಿನಂತೆ ಹುಚ್ಚ ವೆಂಕಟ್ ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಅನೇಕರು ಚರ್ಚೆ ಮಾಡಿದರೇ ಹೊರತು ಅದಾದ ಮೇಲೆ ವೆಂಕಟ್ ಸುದ್ದಿ ಸೈಲೆಂಟ್ ಆಗಿತ್ತು. ಇದೀಗ, ಹುಚ್ಚ ವೆಂಕಟ್ ಮತ್ತೆ ಬಂದಿದ್ದಾರೆ. ಈ ಸಲ ಯಾವುದೋ ಗಲಾಟೆ ಅಥವಾ ಬೇಡವಾದ ಸುದ್ದಿಯಲ್ಲ. ಇದು ಸಿನಿಮಾ ಸುದ್ದಿ. ಮುಂದೆ ಓದಿ....

  ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಪುತ್ರ ಈಗ ನಿರ್ದೇಶಕ ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಪುತ್ರ ಈಗ ನಿರ್ದೇಶಕ

  ಎಸ್ ನಾರಾಯಣ್ ಮಗನ ಚಿತ್ರದಲ್ಲಿ ವೆಂಕಟ್

  ಎಸ್ ನಾರಾಯಣ್ ಮಗನ ಚಿತ್ರದಲ್ಲಿ ವೆಂಕಟ್

  ಕಲಾ ಸಾಮ್ರಾಟ್ ಎಸ್ ನಾರಾಯಣ್ ಪುತ್ರ ಪವನ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ಹುಚ್ಚ ವೆಂಕಟ್ ನಟಿಸುತ್ತಿದ್ದಾರೆ. ಈ ಕುರಿತು ಸ್ವತಃ ಹುಚ್ಚ ವೆಂಕಟ್ ವಿಡಿಯೋ ಮೂಲಕ ಮಾತನಾಡಿದ್ದು, ಈ ವಿಡಿಯೂವನ್ನು ನಾಯಕ ನಟ ಯಶಸ್ ಅಭಿ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

  ನನ್ನ ಪಾತ್ರ ಇಷ್ಟ ಆಯ್ತು ಮಾಡ್ತೀನಿ

  ನನ್ನ ಪಾತ್ರ ಇಷ್ಟ ಆಯ್ತು ಮಾಡ್ತೀನಿ

  ''ಎಸ್ ನಾರಾಯಣ್ ಮಗ ಪವನ್ ನಿರ್ದೇಶನ ಮಾಡುತ್ತಿರುವ ನವಮಿ ಚಿತ್ರದಲ್ಲಿ ನಾನು ಅತಿಥಿ ಪಾತ್ರ ಮಾಡುತ್ತಿದ್ದೇನೆ. ನನ್ನ ಪಾತ್ರ ನನಗೆ ಇಷ್ಟ ಆಯ್ತು. ಈ ಚಿತ್ರದ ನಾಯಕ ನಟ ಯಶಸ್ ಅಭಿ ಅವರು ನಾನೇ ಮಾಡಬೇಕು ಎಂದು ಆಸೆ ಪಟ್ಟಿದ್ದಾರೆ. ಅವರಿಗೆ ಒಳ್ಳೆಯದಾಗಲಿ'' ಎಂದು ನಟ ಹುಚ್ಚ ವೆಂಕಟ್ ವಿಡಿಯೋದಲ್ಲಿ ಹೇಳಿದ್ದಾರೆ.

  ನಾರಾಯಣ್ ಮಗನ ಚಿತ್ರ ಸ್ವಚ್ಛವಾಗಿರುತ್ತದೆ

  ನಾರಾಯಣ್ ಮಗನ ಚಿತ್ರ ಸ್ವಚ್ಛವಾಗಿರುತ್ತದೆ

  ''ಎಸ್ ನಾರಾಯಣ್ ಮಗ ಆಗಿರುವುದರಿಂದ ಈ ಸಿನಿಮಾ ತುಂಬಾ ಚೆನ್ನಾಗಿ, ಸ್ವಚ್ಛವಾಗಿ ಬರಲಿದೆ ಎಂಬ ನಂಬಿಕೆ ನನಗಿದೆ. ಹೊಸಬರು ಮತ್ತು ಹಳೆಬರ ಚಿತ್ರ ಅಂತಲ್ಲ, ಹೊಸ ಥರ ಹಾಗೂ ಹಳೆ ಥರ ಸಿನಿಮಾ ಇದು. ನನ್ನ ಮೇಲೆ ನಂಬಿಕೆಯಿಟ್ಟು ಈ ಪಾತ್ರ ಮಾಡಲು ಅವಕಾಶ ನೀಡಿದ್ದಾರೆ. ಅವರ ನಿರೀಕ್ಷೆ ಮೀರಿದಂತೆ ನಟಿಸುತ್ತೇನೆ'' ಎಂದು ವೆಂಕಟ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ನವಮಿ ಚಿತ್ರದ ಬಗ್ಗೆ

  ನವಮಿ ಚಿತ್ರದ ಬಗ್ಗೆ

  ದಸರಾ ಹಬ್ಬದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ನಾಯಕನಾಗಿ ಯಶಸ್ ಕಾಣಿಸಿಕೊಂಡಿದ್ದಾರೆ. ಈ ಮೊದಲು ಯಶಸ್ ಪ್ರಸೆಂಟ್ ಪ್ರಪಂಚ ಜೀರೋ ಪರ್ಸೆಂಟ್ ಲವ್ ಹಾಗೂ ಕ್ರಿಟಿಕಲ್ ಕೀರ್ತನೆಗಳು ಚಿತ್ರಗಳಲ್ಲಿ ನಟಿಸಿದ್ದರು. ನವಮಿ 9.9.1991 ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆಯಂತೆ. ಚಿತ್ರದಲ್ಲಿ ನಾಯಕಿಯಾಗಿ ನಂದಿನಿ ಗೌಡ ಕಾಣಿಸಿಕೊಂಡಿದ್ದಾರೆ. ಪುತ್ರನ ಸಿನಿಮಾದಲ್ಲಿ ಎಸ್ ನಾರಾಯಣ್ ಸಹ ಬಣ್ಣಹಚ್ಚಿದ್ದಾರೆ. ಇನ್ನು ಉಳಿದಂತೆ ಶಂಕರ್ ಅಶ್ವಥ್, ಓಂ ಪ್ರಕಾಶ್ ರಾವ್ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ.

  Recommended Video

  ಒಂದು ವರ್ಷದ ಬಳಿಕ ಶೈನ್ ಶೆಟ್ಟಿ ಮನೆಗೆ ಬಂದ ಅದೃಷ್ಟ ಲಕ್ಷ್ಮಿ | Shine Shetty | Filmibeat Kannada
  ಡಿಕ್ಟೇಟರ್ ಸಿನಿಮಾ ಏನಾಯ್ತು?

  ಡಿಕ್ಟೇಟರ್ ಸಿನಿಮಾ ಏನಾಯ್ತು?

  ಹಾಗ್ನೋಡಿದ್ರೆ, ಎಸ್ ನಾರಾಯಣ್ ಮತ್ತು ಹುಚ್ಚ ವೆಂಕಟ್ ಜೋಡಿಯಲ್ಲಿ ಒಂದು ಸಿನಿಮಾ ಬರಬೇಕಿತ್ತು. ನಿರ್ಮಾಪಕ ವಿಜಯ್ ಕುಮಾರ್ ಈ ಚಿತ್ರ ನಿರ್ಮಿಸುವುದಾಗಿ ಘೋಷಿಸಿದ್ದರು. ಆಮೇಲೆ ಅದೇನ್ ಆಯ್ತೋ, ಈ ಸಿನಿಮಾ ಸೆಟ್ಟೇರಲೇ ಇಲ್ಲ.

  English summary
  Kannada actor-Director Huccha Venkat will do cameo role in Navami Movie. the movie directed by S Narayan son Pavan.
  Thursday, November 5, 2020, 9:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X