For Quick Alerts
  ALLOW NOTIFICATIONS  
  For Daily Alerts

  ಮದುವೆ ಆಗಿದ್ದೇನೆ ಎಂದು ಬಕ್ರಾ ಮಾಡಿದ ಹುಚ್ಚ ವೆಂಕಟ್

  By Pavithra
  |

  ಹುಚ್ಚ ವೆಂಕಟ್ ಮತ್ತೊಂದು ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಕಳೆದ ಎರಡು ದಿನಗಳ ಹಿಂದೆ ಜೋರಾಗಿತ್ತು. ಇದು ಯಾರೂ ಹರಡಿದ ಸುದ್ದಿ ಅಲ್ಲ. ಸ್ವತಃ ಹುಚ್ಚ ವೆಂಕಟ್ ನಾನು ಮದುವೆ ಆಗಿದ್ದೇನೆ. ನನ್ನ ಚಿತ್ರದಲ್ಲಿ ಅಭಿನಯ ಮಾಡಿದ್ದ ನಟಿ ಐಶ್ವರ್ಯಳನ್ನ ಪ್ರೀತಿಸಿ ವಿವಾಹ ಆಗಿದ್ದೇನೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

  ಹೆಸರಿನಲ್ಲೇ ಹುಚ್ಚ ಎಂದು ಸೇರಿಸಿಕೊಂಡಿರುವ ಹುಚ್ಚ ವೆಂಕಟ್ , ಹುಚ್ಚುತನದ ಕೆಲಸ ಮಾಡುತ್ತಾರೆ. ಮದುವೆ ಆಗಿದ್ದರೂ ಆಗಿರುತ್ತಾರೆ. ಅದಕ್ಕೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ ಎನ್ನುವುದು ಜನರ ಅಭಿಪ್ರಾಯವಾಗಿತ್ತು. ಅದಕ್ಕೆ ತಕ್ಕಂತೆ ನಟಿ ಐಶ್ವರ್ಯ ಅವರ ತಾಯಿ ಕೂಡ ನನ್ನ ಮಗಳ ತಲೆ ಕೆಡಿಸಿ ಮದುವೆ ಆಗಿದ್ದಾನೆ ಹಾಗೆ ಹೀಗೆ ಅಂತೆಲ್ಲಾ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದರು.

  ಹುಚ್ಚ ವೆಂಕಟ್ ಮತ್ತೊಂದು ಮದುವೆ: ಕೈಹಿಡಿದ ಪುಣ್ಯಾತ್ಗಿತ್ತಿ ಯಾರು.? ಹುಚ್ಚ ವೆಂಕಟ್ ಮತ್ತೊಂದು ಮದುವೆ: ಕೈಹಿಡಿದ ಪುಣ್ಯಾತ್ಗಿತ್ತಿ ಯಾರು.?

  ಚುನಾವಣೆಯ ದಿನ ಮದುವೆ ಆಗಿದ್ದೇನೆ ಅಂತ ಸುದ್ದಿ ಮಾಡಿಕೊಂಡಿದ್ದ ಹುಚ್ಚ ವೆಂಕಟ್ ಚುನಾವಣೆಯ ಫಲಿತಾಂಶದ ದಿನವೇ ತನ್ನ ಮದುವೆ ರಿಸೆಲ್ಟ್ ಹೊರ ಹಾಕಿದ್ದಾರೆ. ಮದುವೆ ಆಗಿದ್ದೇನೆ ಎಂದಿದ್ದ ಹುಚ್ಚ ವೆಂಕಟ್ ಈಗ ಹೊಸ ಕಥೆ ಹೇಳುತ್ತಿದ್ದಾರೆ. ಮುಂದೆ ಓದಿ

  ಮದುವೆ ನಾಟಕಕ್ಕೆ ತೆರೆ ಎಳೆದ ಹುಚ್ಚ ವೆಂಕಟ್

  ಮದುವೆ ನಾಟಕಕ್ಕೆ ತೆರೆ ಎಳೆದ ಹುಚ್ಚ ವೆಂಕಟ್

  ಹುಚ್ಚ ವೆಂಕಟ್ ನಟಿಸಿ, ನಿರ್ದೇಶನ ಮಾಡಿರುವ 'ಡಿಕ್ಟೇಟರ್ ಹುಚ್ಚ ವೆಂಕಟ್' ಚಿತ್ರದ ಹೀರೋಯಿನ್ ಐಶ್ವರ್ಯ ಅವರನ್ನ ಮದುವೆ ಆಗಿದ್ದೇನೆ ಎಂದು ನಟ ಹುಚ್ಚ ವೆಂಕಟ್ ವಿಡಿಯೋ ಮಾಡಿ ತಮ್ಮ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದರು. ಆದರೆ ಈಗ ನಾನು ಮದುವೆ ಆಗಿಲ್ಲ ಅದು ಸುಳ್ಳು ಎಂದು ಅವರೇ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

  ನನಗೆ ಯಾರು ಬೇಕಾಗಿಲ್ಲ

  ನನಗೆ ಯಾರು ಬೇಕಾಗಿಲ್ಲ

  ಐಶ್ವರ್ಯ ಅವರನ್ನ ಪ್ರೀತಿಸಿ ಮದುವೆ ಆಗಿದ್ದೇನೆ ಎಂದಿದ್ದ ಹುಚ್ಚ ವೆಂಕಟ್ ಈಗ ಉಲ್ಟಾ ಹೊಡೆದಿದ್ದಾರೆ. ಅದು ಸಿನಿಮಾದಲ್ಲಿರುವ ದೃಶ್ಯ ಅಷ್ಟೇ, ಅದನ್ನೇ ವಿಡಿಯೋ ಮಾಡಿ ರಿಲೀಸ್ ಮಾಡಿದೆ ಅಷ್ಟೇ. ನಾನು ಯಾವತ್ತಿಗೂ ಒಬ್ಬನೇ, ನನಗೆ ಯಾರು ಬೇಕಾಗಿಲ್ಲ ಎಂದಿದ್ದಾರೆ.

  ಹುಚ್ಚ ವೆಂಕಟ್ ಮಾಡಿದ್ದು ಗಿಮಿಕ್ ಅಂತೆ

  ಹುಚ್ಚ ವೆಂಕಟ್ ಮಾಡಿದ್ದು ಗಿಮಿಕ್ ಅಂತೆ

  ವೆಂಕಟ್ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದು ಗಿಮಿಕ್ ಅಂತೆ. ಅದೂ ಐಶ್ವರ್ಯ ಹೇಳಿದಕ್ಕೆ ಆ ರೀತಿ ಮಾಡಿದ್ರಂತೆ. ನನಗೆ ಗಿಮಿಕ್ ಮಾಡಲು ಇಷ್ಟವಿಲ್ಲ ಅದಕ್ಕಾಗಿ ನಿಮ್ಮ ಮುಂದೆ ಎಲ್ಲವೂ ಹೇಳಿದ್ದೇನೆ ಅಂತಿದ್ದಾರೆ ಹುಚ್ಚ ವೆಂಕಟ್ .

  ಹುಚ್ಚ ವೆಂಕಟ್ ಹುಚ್ಚಾಟ

  ಹುಚ್ಚ ವೆಂಕಟ್ ಹುಚ್ಚಾಟ

  ಹುಚ್ಚ ವೆಂಟಕ್ ತಮ್ಮ ಮದುವೆ ಬಗ್ಗೆ ವಿಡಿಯೋ ಮಾಡಿ ಗಿಮಿಕ್ ಮಾಡಿದರೆ ಎಲ್ಲರನ್ನ ಬಕ್ರಾ ಮಾಡಬಹುದು ಎಂದುಕೊಂಡಿದ್ದರೆ ಅದು ಅವರ ಹುಚ್ಚುತನ. ಈಗಾಗಲೇ ಜನರು ವೆಂಕಟ್ ಅವರನ್ನ ಹುಚ್ಚ ಅಂತ ನಿರ್ಧಾರ ಮಾಡಿ ಬಿಟ್ಟಿದ್ದಾರೆ. ಆದರೂ ಹುಚ್ಚ ವೆಂಕಟ್ ಮಾತ್ರ ಸದಾ ಸುದ್ದಿಯಲ್ಲಿರಲು ಈ ರೀತಿಯ ಗಿಮಿಕ್ ಗಳನ್ನ ಮಾಡುತ್ತಾಲೇ ಇರುತ್ತಾರೆ.

  English summary
  Kannada actor Huccha Venkat Did Not Marry Aishwarya, Venkat Said It was Dictator Huccha Venkat Movie Shooting scenes

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X