»   »  ಹುಚ್ಚ ವೆಂಕಟ್ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ

ಹುಚ್ಚ ವೆಂಕಟ್ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ

Posted By:
Subscribe to Filmibeat Kannada

ಹುಚ್ಚ ವೆಂಕಟ್ ಬಗ್ಗೆ ಬಿಲ್ಡಪ್ ಕೊಡುವ ಬದಲು ನೇರವಾಗಿ ಮ್ಯಾಟರ್ ಗೆ ಬರ್ತೀವಿ. ಹುಚ್ಚ ವೆಂಕಟ್ ನಿರ್ದೇಶಿಸಿ, ನಟಿಸಿದ ಚೊಚ್ಚಲ ಸಿನಿಮಾ 'ಸ್ವತಂತ್ರಪಾಳ್ಯ' ಸದ್ಯದಲ್ಲೇ ರೀ ರಿಲೀಸ್ ಆಗಲಿದೆ.

ಹುಚ್ಚ ವೆಂಕಟ್ ಹುಚ್ಚಾಟವನ್ನ ಯೂಟ್ಯೂಬ್ ನಲ್ಲಿ ನೋಡಿ ಆನಂದ ಪಟ್ಟು, ಅವರಿಗೆ ಅಭಿಮಾನಿಗಳಾದವರಿಗೆಲ್ಲಾ 'ಸ್ವತಂತ್ರಪಾಳ್ಯ' ಸಿನಿಮಾ ನೋಡ್ಬೇಕ್.! ಅಂತ ಆಸೆ ಆಗಿದೆ.[ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

Huccha Venkat directorial 'Swatantrapalya' to re-release

ಸಾಮಾಜಿಕ ಜಾಲತಾಣಗಳಲ್ಲಿ ಹುಚ್ಚ ವೆಂಕಟ್ ಗೆ ಫ್ಯಾನ್ ಫಾಲೋವರ್ಸ್ ಜಾಸ್ತಿ ಆಗುತ್ತಿರುವ ಕಾರಣ, 'ಸ್ವತಂತ್ರಪಾಳ್ಯ' ಸಿನಿಮಾ ರೀ ರಿಲೀಸ್ ಮಾಡುವ ಪ್ಲಾನ್ ಮಾಡಿದ್ದಾರೆ ನಿರ್ಮಾಪಕ ಹೇಮಂತ್ ಸುವರ್ಣ.

ವೀಕ್ಷಕರ ಒತ್ತಾಯದ ಮೇರೆಗೆ ಹುಚ್ಚ ವೆಂಕಟ್ 'ಬಿಗ್ ಬಾಸ್' ಸೇರಿದ್ದಾಗಿದೆ. ಅಂದ್ಮೇಲೆ ಫ್ಯಾನ್ಸ್ ಗಾಗಿ 'ಸ್ವತಂತ್ರಪಾಳ್ಯ' ಚಿತ್ರಕ್ಕೆ ಮರು ಬಿಡುಗಡೆ ಯೋಗ ಸಿಗಲ್ವಾ ಹೇಳಿ.?[ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?]

2009 ರಲ್ಲಿ ತೆರೆಕಂಡ 'ಸ್ವತಂತ್ರಪಾಳ್ಯ' ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಅಷ್ಟಕಷ್ಟೆ. ಅಂದು ಫ್ಲಾಪ್ ಆಗಿದ್ದ ಈ ಚಿತ್ರಕ್ಕೆ ಮರುಜೀವ ಸಿಗುವ ಮುನ್ಸೂಚನೆ ಸಿಕ್ಕಿದೆ.

ಹ್ಹಾ...ಒಂದು ವಿಷಯ ನೆನಪಿಡಿ. ಇಂದು ನೀವು ನೋಡುತ್ತಿರುವ ಹುಚ್ಚ ವೆಂಕಟ್ ಬೇರೆ. ಅಂದಿನ 'ವೆಂಕಟ್' ಬೇರೆ. ಫ್ಲ್ಯಾಶ್ ಬ್ಯಾಕ್ ನಲ್ಲಿ ಅಣ್ಣ ಹೆಂಗಿದ್ರು ಅಂತ ತಿಳಿದುಕೊಳ್ಳುವ ಕುತೂಹಲ ಇದ್ರೆ, 'ಸ್ವತಂತ್ರಪಾಳ್ಯ' ಮತ್ತೆ ಬಿಡುಗಡೆ ಆಗುವವರೆಗೂ ನೀವು ಕಾಯ್ಲೇಬೇಕು.

English summary
Producer Hemanth Suvarna is planning to re-release YouTube Star Huccha Venkat directorial 'Swatantrapalya' shortly.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada