For Quick Alerts
  ALLOW NOTIFICATIONS  
  For Daily Alerts

  ಪತ್ನಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ 'ಫೈರಿಂಗ್ ಸ್ಟಾರ್'

  By Suneetha
  |

  ಬರೀ ಯೂಟ್ಯೂಬ್ ಸ್ಟಾರ್ ಆಗಿದ್ದ ಹುಚ್ಚ ವೆಂಕಟ್ ಅವರು ಬಿಗ್ ಬಾಸ್ ರಿಯಾಲಿಟಿ ಶೋಗೆ ಕಾಲಿಟ್ಟ ಮೇಲೆ ರಾತ್ರೋ ರಾತ್ರಿ ಇಡೀ ವಿಶ್ವವೇ ಹಿಂತಿರುಗಿ ತಮ್ಮತ್ತ ನೋಡುವಷ್ಟು ಫೇಮಸ್ ಆದರು.

  ತದನಂತರ 'ಫೈರಿಂಗ್ ಸ್ಟಾರ್' ವೆಂಕಟ್ ಅಂತ ಗಾಂಧಿನಗರದಲ್ಲಿ ಸುದ್ದಿ ಮಾಡಿದ ವೆಂಕಟ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಾಗಿದ್ದು ಮಾತ್ರ ಡೈವೋರ್ಸ್ ವಿಚಾರದಲ್ಲಿ.[ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಮದುವೆ ರಹಸ್ಯ ಬಯಲು]

  ಹೌದು 'ಫೈರಿಂಗ್ ಸ್ಟಾರ್' ವೆಂಕಟ್ ಅವರು ತಮ್ಮ ಪತ್ನಿಯಿಂದ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

  ಮದುವೆಯಾದ ನಂತರ 'ಫೈರಿಂಗ್ ಸ್ಟಾರ್' ವೆಂಕಟ್ ಅವರನ್ನು ಅವರ ಪತ್ನಿ ಬಿಟ್ಟು ಹೋಗಿದ್ದರು ಎಂದು ಸ್ವತಃ ವೆಂಕಟ್ ಅವರೇ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು. ಈ ಬಗ್ಗೆ ಮಾಧ್ಯಮಗಳು ಕೂಡ ಈ ಮೊದಲು ವರದಿ ಮಾಡಿದ್ದವು.

  ಬಿಗ್ ಬಾಸ್ ಮನೆಗೆ ಬರುವ ಮೊದಲು ನನಗೆ ಮದುವೆಯೇ ಆಗಿಲ್ಲ ಎಂದಿದ್ದ ಹುಚ್ಚ ವೆಂಕಟ್ ಅವರು ಬಿಗ್ ಬಾಸ್ ಮನೆಯಿಂದ ಕಿಕ್ ಔಟ್ ಆದ ಬಳಿಕ ನನಗೆ ಮದುವೆಯಾಗಿದೆ, ಮದುವೆ ಆದ ಬಳಿಕ ನನ್ನ ಪತ್ನಿ ನನ್ನನ್ನು ಬಿಟ್ಟು ಹೋಗಿದ್ದಾರೆ ಎಂದು ಹೇಳಿಕೆ ನೀಡಿದ್ದರು.[ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

  ಜನವರಿ 3, 2007 ರಂದು ವೆಂಕಟ್ ಅವರು ಸಂಪಂಗಿರಾಮನಗರದ ಬನಶಂಕರಿ ದೇವಾಲಯದಲ್ಲಿ ರೇಷ್ಮಾ ಎಂಬುವವರನ್ನು ವಿವಾಹವಾಗಿದ್ದು, ದೊಮ್ಮಲೂರಿನ ನೋಂದಣಿ ಕಛೇರಿಯಲ್ಲಿ ವಿವಾಹ ನೋಂದಣಿ ಮಾಡಿಕೊಂಡಿದ್ದರು.

  ಇದೀಗ 'ಫೈರಿಂಗ್ ಸ್ಟಾರ್' ವೆಂಕಟ್ ಅವರು ತಮ್ಮ ಸಂಬಂಧಕ್ಕೆ ತೀಲಾಂಜಲಿ ನೀಡಲು ನಿರ್ಧರಿಸಿದ್ದು, ಪತ್ನಿಯಿಂದ ವಿಚ್ಛೇದನ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

  English summary
  Bigg Boss' controversial actor-director Huccha Venkat- who is known as firing star Venkat in Sandalwood filed for divorce from his wife Reshma in a family court in Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X