Just In
- 10 hrs ago
ನ್ಯಾಯಾಲಯಕ್ಕೆ ಹಾಜರಾದ ರಕ್ಷಿತ್ ಶೆಟ್ಟಿ, ಇದು ಸುಲಿಗೆ ತಂತ್ರ ಎಂದ ಸಿಂಪಲ್ ಸ್ಟಾರ್
- 10 hrs ago
50 ಲಕ್ಷ ವಂಚನೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂಜನಾ ಗಲ್ರಾನಿ ಸಹೋದರಿ
- 11 hrs ago
ರಾಜ್ಕುಮಾರ್ ಪುಣ್ಯಸ್ಮರಣೆ: ಅಣ್ಣಾವ್ರನ್ನು ದರ್ಶನ್ ಸ್ಮರಿಸಿದ್ದು ಹೀಗೆ
- 12 hrs ago
ಬಾಫ್ಟಾ 2021: ರಿಷಿ ಕಪೂರ್, ಇರ್ಫಾನ್ಗೆ ಗೌರವ, 'ವೈಟ್ ಟೈಗರ್'ಗೆ ನಿರಾಸೆ
Don't Miss!
- News
ಮಧ್ಯ ಪ್ರಾಚ್ಯದಲ್ಲಿ ಮಹಾಯುದ್ಧ! ಇರಾನ್ ಅಣುಸ್ಥಾವರದ ಮೇಲೆ ಅಟ್ಯಾಕ್!
- Finance
ಏಪ್ರಿಲ್ 13ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ
- Automobiles
ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮೇಲೆ ಒಟ್ಟು ರೂ.12 ಸಾವಿರ ಕೋಟಿ ಹೂಡಿಕೆ ಮಾಡಿದ ಮಹೀಂದ್ರಾ
- Sports
ಐಪಿಎಲ್ ಇತಿಹಾಸದಲ್ಲಿ ದಾಖಲೆಗಳ ದಾಖಲೆ ಬರೆದ ಸಂಜು ಸ್ಯಾಮ್ಸನ್!
- Lifestyle
ಮಂಗಳವಾರದ ದಿನ ಭವಿಷ್ಯ: ಯುಗಾದಿಯಂದು ಹೇಗಿದೆ ನಿಮ್ಮ ರಾಶಿಫಲ
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಡಿಯೋ: ಶಿವಣ್ಣ ಬಗ್ಗೆ ಬಾಯಿಗೆ ಬಂದ್ಹಂಗೆ ಮಾತನಾಡಿರುವ ಹುಚ್ಚ ವೆಂಕಟ್
ಐಟಂ ಸಾಂಗ್ ಬ್ಯಾನ್ ಆಗ್ಬೇಕ್... ನನ್ ಎಕ್ಕಡ... ನನ್ ಸಿನಿಮಾ ಯಾಕ್ ನೋಡಲ್ಲ... ಅಂತ ಇಷ್ಟು ದಿನ ವಿಡಿಯೋಗಳಲ್ಲಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದ ಹುಚ್ಚ ವೆಂಕಟ್ ಇದೀಗ ಏಕ್ದಂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಶಿವರಾಜ್ ಕುಮಾರ್ ಅಜಾತಶತ್ರು. ಎಷ್ಟೋ ಜನರಿಗೆ ಸಹಾಯ ಹಸ್ತ ಚಾಚಿರುವ ಅಣ್ಣಾವ್ರ ಮಗನಿಗೆ ಶಿವ'ಅಣ್ಣ' ಅಂತಲೇ ಎಲ್ಲರೂ ಪ್ರೀತಿಯಿಂದ ಬಾಯ್ತುಂಬ ಕರೆಯುತ್ತಾರೆ. ಅಂತಹ ಶಿವಣ್ಣನ ಬಗ್ಗೆ ಹುಚ್ಚ ವೆಂಕಟ್ ಮನಬಂದಂತೆ ಮಾತನಾಡಿದ್ದಾರೆ.
ಶಿವರಾಜ್ ಕುಮಾರ್ ಅವರನ್ನ ಭೇಟಿ ಮಾಡಲು, ಅವರ ಮನೆಗೆ ಹುಚ್ಚ ವೆಂಕಟ್ ಹೋಗಿದ್ರಂತೆ. ಶಿವಣ್ಣ ಇರ್ಲಿಲ್ವಂತೆ. ಸೆಕ್ಯೂರಿಟಿ ಗಾರ್ಡ್ ಒಳಗಡೆ ಬಿಡಲಿಲ್ವಂತೆ. ಕುಡಿಯೋಕೆ ಒಂದು ಗ್ಲಾಸ್ ನೀರು ಕೊಡಲಿಲ್ವಂತೆ. ಹೀಗಾಗಿ ಶಿವಣ್ಣನ ಬಗ್ಗೆ ವಿಡಿಯೋದಲ್ಲಿ ಹುಚ್ಚ ವೆಂಕಟ್ ಬೆಂಕಿ ಉಂಡೆಗಳನ್ನ ಉಗುಳಿದ್ದಾರೆ. ವಿಡಿಯೋದಲ್ಲಿ ಹುಚ್ಚ ವೆಂಕಟ್ ಹೇಳಿರುವುದೇನು.? ಮುಂದೆ ಓದಿರಿ...

ಎರಡು ದಿನಗಳಿಂದ ಏನೇನಾಯ್ತು.?
''ಶಿವಣ್ಣ ಅವರೇ... ಎರಡು ದಿನಗಳಿಂದ ನಾನು ನಿಮ್ಮನ್ನ ಭೇಟಿ ಮಾಡಬೇಕು ಅಂತ ಪ್ರಯತ್ನ ಪಡುತ್ತಿದ್ದೇನೆ. ನಿಮ್ಮ ಡ್ರೈವರ್ ನಂಬರ್ ತೆಗೆದುಕೊಂಡೆ. ನಾನು ಯಾರನ್ನೂ ಭೇಟಿ ಮಾಡಲ್ಲ. ವಿಷ್ಣುವರ್ಧನ್ ಅವರನ್ನು ಬಿಟ್ಟರೆ, ಸಿನಿಮಾರಂಗದಲ್ಲಿ ನಾನು ಯಾರನ್ನೂ ಇಷ್ಟ ಪಟ್ಟಿಲ್ಲ. ಆದ್ರೀಗ ನಿಮ್ಮನ್ನೆಲ್ಲ ಇಷ್ಟ ಪಡಬೇಕು ಅಂತ ಆಸೆ ಪಟ್ಟೆ. ನಿಮ್ಮ ಡ್ರೈವರ್ ನನ್ನ ಫೋನ್ ಹೆಂಗ್ ಕಟ್ ಮಾಡ್ತಾನೆ ಗೊತ್ತಾ.? ಫೋನ್ ಕಟ್ ಮಾಡ್ಲಿ ನಾನು ಎದುರಿಗೆ ಇರುವಾಗ... ಅವನೇ ಇರಲ್ಲ'' - ಹುಚ್ಚ ವೆಂಕಟ್
ಮತ್ತೆ ರೊಚ್ಚಿಗೆದ್ದ ಹುಚ್ಚ ವೆಂಕಟ್: 'ಥೂ' ಎಂದು ಉಗಿದ ಟಿ.ಆರ್.ಪಿ ಕಿಂಗ್.!

ಹುಚ್ಚ ವೆಂಕಟ್ ಗೆ ಬೇಜಾರಾಗಿದೆ
''ನಿಮ್ಮ ಡ್ರೈವರ್ ನಿನ್ನೆ ನಿಮ್ಮ ಜೊತೆಗೆ ಇದ್ದ. ಫೋನ್ ಕೊಡ್ತೀನಿ ಒಂದು ಗಂಟೆಯಲ್ಲಿ ಎಂದ. ಒಂದು ಗಂಟೆಯಲ್ಲಿ ನಾನು ನಿಮ್ಮ ಮನೆ ಹತ್ತಿರ ಬಂದೆ. ನೀವು ಮನೆಯಲ್ಲಿ ಇರಲಿಲ್ಲ. ಫೋನ್ ಮಾಡಿದ್ರೆ, ಶಿವರಾಜ್ ಕುಮಾರ್ ಅವರೇ ಫೋನ್ ಮಾಡ್ತಾರಂತೆ. ಅವರಿಗೆ ನಂಬರ್ ಕೊಟ್ಟಿದ್ದೇನೆ ಎಂದರು. ಅದು ಬೇಜಾರಾಯ್ತು'' - ಹುಚ್ಚ ವೆಂಕಟ್
ಎಲ್ಲಾ ಮುಗಿದ್ಮೇಲೆ ಹುಚ್ಚ ವೆಂಕಟ್ ದಿಢೀರ್ ಪ್ರೆಸ್ ಮೀಟ್ ಮಾಡಿದ್ಯಾಕೆ?

ಒಂದು ನಿಮಿಷ ಮಾತನಾಡಲು ಆಗಲ್ವಾ.?
''ಒಂದೇ ಒಂದು ನಿಮಿಷ ನನ್ನ ಹತ್ತಿರ ಮಾತನಾಡೋಕೆ ಆಗಲ್ವಾ ಶಿವರಾಜ್ ಕುಮಾರ್ ಅವರೇ.? ನನ್ನ ಮೇಲೆ ಅಷ್ಟೂ ಪ್ರೀತಿ ಇಲ್ವಾ.? ಮತ್ತೆ ನಾನ್ಯಾಕೆ ನಿಮ್ಮನ್ನ ಅಷ್ಟು ಪ್ರೀತಿಸಬೇಕು.? ಬೇರೆಯವರ ವಿರೋಧ ಕಟ್ಟಿಕೊಳ್ಳಬೇಕು.? ಸೂರಿ ಅಂಥವರನ್ನ ಬೈಯ್ಯಬೇಕು.?'' - ಹುಚ್ಚ ವೆಂಕಟ್
ಹುಚ್ಚ ವೆಂಕಟ್ ಮೂತಿಗೆ ಮಂಗಳಾರತಿ ಎತ್ತಿದ ಪತ್ರಕರ್ತ ಯತಿರಾಜ್.!

ಹುಚ್ಚ ವೆಂಕಟ್ ಗೆ ನೋವಾಗಿದೆ
''ನಿಮ್ಮ ಬಾಡಿಗಾರ್ಡ್ ಗೆ ಫೋನ್ ಮಾಡಿದ್ರೆ, ಪೂರ್ತಿ ಮಾತನಾಡಲು ಬಿಡುವುದಿಲ್ಲ. ಅರ್ಧಕ್ಕೆ ಫೋನ್ ಕಟ್ ಮಾಡ್ತಾರೆ. ನನಗೆ ನೋವಾಗಿದೆ. ಕೋಪ ಅಲ್ಲ, ನೋವಾಗಿದೆ'' - ಹುಚ್ಚ ವೆಂಕಟ್

ವಿವಾದಾತ್ಮಕ ಹೇಳಿಕೆ
''ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್ ಅವರು ಸಾಕು ನನಗೆ. ಇನ್ನು ಯಾವ ಆರ್ಟಿಸ್ಟ್ ಕೂಡ ಬೇಡ. ಜೀವನದಲ್ಲಿ ಇದೇ ಮೊದಲ ಬಾರಿಗೆ ವಿಷ್ಣುವರ್ಧನ್ ಅವರನ್ನ ಬಿಟ್ಟು (ಮರೆತಿಲ್ಲ) ಇನ್ನೊಬ್ಬ ಆರ್ಟಿಸ್ಟ್ ನ ಇಷ್ಟ ಪಡಲು ಹೋದೆ. ಇವತ್ತು ವಿಷ್ಣುವರ್ಧನ್ ಅವರು ತಿಳಿಸಿಕೊಟ್ರು, ನನ್ನ ತರಹ ಯಾರೂ ಇಲ್ಲ ಅಂತ'' - ಹುಚ್ಚ ವೆಂಕಟ್

ಒಂದು ಗ್ಲಾಸ್ ನೀರಿಗೆ ಬರವೇ.?
''ಶಿವರಾಜ್ ಕುಮಾರ್ ಅವರೇ ಇನ್ಯಾವತ್ತೂ ಬರಲ್ಲ. ಯಾರಾದರೂ ಮನೆ ಹತ್ತಿರ ಬಂದರೆ ನಿಮ್ಮ ಸೆಕ್ಯೂರಿಟಿ ಗಾರ್ಡ್ ಗೆ ಹೇಳಿ ಒಂದು ಗ್ಲಾಸ್ ನೀರು ಕೊಡೋಕೆ. ನೀರಿನ ಬರ ಇದ್ದರೆ, ಸೆಕ್ಯೂರಿಟಿ ಗಾರ್ಡ್ ಗೆ ಹೇಳಿ ಹುಚ್ಚ ವೆಂಕಟ್ ಗೆ ಫೋನ್ ಮಾಡೋಕೆ. ನಾನು ಟ್ಯಾಂಕರ್ ಕಳುಹಿಸುತ್ತೇನೆ'' - ಹುಚ್ಚ ವೆಂಕಟ್

ನಿಮ್ಮಿಂದ ಫೋನ್ ಬರಲಿಲ್ಲ
''ಒಂದು ಅಭಿಮಾನಿಗೆ ನೀರು ಕೊಡಲಿಲ್ಲ ಅಂದ್ರೆ ತಪ್ಪು. ನಾನು ಹುಚ್ಚ ವೆಂಕಟ್ ನಿಮ್ಮ ಪರವಾಗಿ ನಿಂತೆ. ಒಂದು ಗ್ಲಾಸ್ ನೀರಿಲ್ಲ. ಮನೆ ಗೇಟ್ ಕೂಡ ತೆಗೆಯಲ್ಲ. ನಾನು ಬರಬಾರದಿತ್ತು. ಇನ್ಯಾವತ್ತೂ ಬರಲ್ಲ ಶಿವರಾಜ್ ಕುಮಾರ್ ಅವರೇ... ನೀವೇ ಫೋನ್ ಮಾಡ್ತೀರಾ ಅಂತ ಹೇಳಿದ್ರು. ಆದ್ರೆ, ನಿಮ್ಮಿಂದ ಫೋನ್ ಬರಲಿಲ್ಲ. ಚೆನ್ನಾಗಿರಿ. ಹುಚ್ಚ ವೆಂಕಟ್ ವಾಲ್ಯೂ ಯಾವತ್ತೂ ಕಮ್ಮಿ ಆಗಲ್ಲ. ವಿಷ್ಣುವರ್ಧನ್ ಬಿಟ್ಟರೆ, ನನಗೆ ಆಗುವುದು ಮಾಧ್ಯಮದವರು ಹಾಗೂ ಪತ್ರಕರ್ತರು ಮಾತ್ರ'' - ಹುಚ್ಚ ವೆಂಕಟ್

ಹುಚ್ಚ ವೆಂಕಟ್ ಏನೇನೆಲ್ಲ ಕೊಟ್ಟಿದ್ದಾರೆ ಗೊತ್ತಾ.?
''ನನ್ನ ದುರಹಂಕಾರ ಬಿಟ್ಟು, ನಿಮ್ಮ ಮನೆ ಮುಂದೆ ಬಂದು ನಿಂತು ಮಾತನಾಡುತ್ತಿದ್ದೇನೆ. ಇದು ಎರಡನೇ ದಿನ ನಿಮ್ಮ ಮನೆ ಮುಂದೆ ಬಂದಿರೋದು. ಇನ್ಯಾವತ್ತೂ ಬರಲ್ಲ. ಬಂದೋರಿಗೆ ನೀರು ಕೊಡೋದು ಮರೆಯಬೇಡಿ. ಹುಚ್ಚ ವೆಂಕಟ್ ಪೆಪ್ಸಿ ಕೊಟ್ಟೋವ್ನೆ, ಥಮ್ಸ್ ಅಪ್ ಕೊಟ್ಟೋವ್ನೆ, ಟೀ ಕೊಟ್ಟೋವ್ನೆ, ಕಾಫಿ ಕೊಟ್ಟೋವ್ನೆ ಅಭಿಮಾನಿಗಳಿಗೆ. ಸಿನಿಮಾ ಸ್ಟಾರ್ ಗಳಿಗಲ್ಲ. ನನಗೆ ನೀರು ಕೊಟ್ಟಿಲ್ಲ ಅಂತ ಬೇಜಾರಿಲ್ಲ. ಒಂದು ಅಭಿಮಾನಿಗಾದರೂ ನೀರು ಕೊಡೋಕೆ ಹೇಳಿ ನಿಮ್ಮ ಸೆಕ್ಯೂರಿಟಿ ಗಾರ್ಡ್ ಗೆ'' - ಹುಚ್ಚ ವೆಂಕಟ್