»   » 'ಹುಚ್ಚ ವೆಂಕಟ್' ಸಿನಿಮಾ ಹೌಸ್ ಫುಲ್ ಓಡ್ತಿದೆ ಕಣ್ರೀ!

'ಹುಚ್ಚ ವೆಂಕಟ್' ಸಿನಿಮಾ ಹೌಸ್ ಫುಲ್ ಓಡ್ತಿದೆ ಕಣ್ರೀ!

Posted By:
Subscribe to Filmibeat Kannada

ಒಂದು ವರ್ಷದ ಹಿಂದೆ ಇದೇ 'ಹುಚ್ಚ ವೆಂಕಟ್' ಸಿನಿಮಾ ರಿಲೀಸ್ ಆದಾಗ ಥಿಯೇಟರ್ ನಲ್ಲಿ 'ಕ್ಯಾರೆ' ಅನ್ನೋರೂ ಇರ್ಲಿಲ್ಲ.!

''ಕನ್ನಡಿಗರು ಯಾಕ್ ಸಿನಿಮಾ ನೋಡೋಕೆ ಬಂದಿಲ್ಲ...ನನ್ ಎಕ್ಕಡ...ಸಿನಿಮಾ ಚೆನ್ನಾಗಿಲ್ಲ ಅಂದ್ರೆ ನನ್ನ ವಾಂಚ್ರೀ...'' ಅಂತ 'ಹುಚ್ಚ ವೆಂಕಟ್' ಸಿನಿಮಾ ರಿಲೀಸ್ ಆದ ದಿನವೇ ವೆಂಕಟನ ಹುಚ್ಚಾಟ ಶುರುವಾಗಿದ್ದು ನಿಮಗೆಲ್ಲಾ ಗೊತ್ತೇಯಿದೆ. ಒಮ್ಮೆ ಫ್ಲ್ಯಾಶ್ ಬ್ಯಾಕ್ ಗೆ ಹೋಗ್ಬೇಕು ಅಂದ್ರೆ ಈ ವಿಡಿಯೋ ನೋಡಿ....ಅಂದು ಶುರುವಾದ ಹುಚ್ಚ ವೆಂಕಟ್ ಅಬ್ಬರಕ್ಕೆ ಇಂದು ಗಾಂಧಿನಗರದಲ್ಲಿ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ ನೋಡಿ. 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಹೋಗಿ ಬಂದ್ಮೇಲೆ ಹುಚ್ಚ ವೆಂಕಟ್ ಲಕ್ ಚೇಂಜಾಗಿದೆ. ಕಷ್ಟ ಪಟ್ಟು, ಇಷ್ಟ ಪಟ್ಟು ಮಾಡಿದ 'ಹುಚ್ಚ ವೆಂಕಟ್' ಸಿನಿಮಾ ಇಂದು (ಡಿಸೆಂಬರ್ 18) ಮರು ಬಿಡುಗಡೆ ಆಗಿದೆ. [ಈ ಹಾಡು ಕೇಳ್ಲೇಬೇಕು! ಇದು ಹುಚ್ಚ ವೆಂಕಟ್ ಆರ್ಡರ್!]


huccha-venkat

ಈ ಚಿತ್ರಕ್ಕೆ ನಿರೀಕ್ಷೆಗೂ ಮೀರಿದ ಓಪನ್ನಿಂಗ್ ಸಿಕ್ಕಿದೆ ಅಂದ್ರೆ ನೀವ್ ನಂಬಲ್ಲ. ನಂಬ್ಲಿಲ್ಲ ಅಂದ್ರೂ ಇದೇ ಸತ್ಯ. ಮೊದಲ ಶೋ ಹೌಸ್ ಫುಲ್ ಆಗಿದೆ. ಸಂತೋಷ್ ಚಿತ್ರಮಂದಿರ ತುಂಬಿ ತುಳುಕುತ್ತಿದೆ. ಅಭಿಮಾನಿಗಳು ಹುಚ್ಚ ವೆಂಕಟ್ ಗೆ ಜೈಕಾರ ಹಾಕುತ್ತಿದ್ದಾರೆ. ಆ ಮೂಲಕ ಹುಚ್ಚ ವೆಂಕಟ್ ಕಂಡ ಕನಸು ನನಸಾಗಿದೆ. ಅದೃಷ್ಟ ಅಂದ್ರೆ ಇದೇ ಅಲ್ವೇ..!?

English summary
YouTube Star Huccha Venkat starrer 'Huccha Venkat' movie has re-released today (December 18th). The movie has received good opening in Santhosh theater, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada