For Quick Alerts
  ALLOW NOTIFICATIONS  
  For Daily Alerts

  ಶೀಘ್ರದಲ್ಲೇ ಮದುವೆ ಆಗಲಿದ್ದಾರಂತೆ ಹುಚ್ಚ ವೆಂಕಟ್

  By Bharath Kumar
  |

  , ನಿರ್ದೇಶಕ, ನಿರ್ಮಾಪಕ ರಾಜಕಾರಣಿ ಹುಚ್ಚ ವೆಂಕಟ್ ತಮ್ಮ ವಿಭಿನ್ನ ವ್ಯಕ್ತಿತ್ವ ಮತ್ತು ನೇರ ಮಾತುಗಳಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಸದ್ಯ, ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ವೆಂಕಟ್ ಸ್ಪರ್ಧೆ ಮಾಡ್ತಿದ್ದಾರೆ.

  ಈ ನಡುವೆ ಮಂಗಳೂರು, ಮಡಿಕೇರಿಗೆ ಹೋಗಿರುವ ಹುಚ್ಚ ವೆಂಕಟ್ ಬ್ರೇಕಿಂಗ್ ನ್ಯೂಸ್ ವೊಂದನ್ನ ನೀಡಿದ್ದಾರೆ. ಮಡಿಕೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹುಚ್ಚ ವೆಂಕಟ್ ''ಸದ್ಯದಲ್ಲೇ ಅಂದ್ರೆ ಮೂರು ತಿಂಗಳಲ್ಲೇ ಮದುವೆಯಾಗುತ್ತಿದ್ದೇನೆ'' ಎಂಬ ವಿಷ್ಯವನ್ನ ಹಂಚಿಕೊಂಡಿದ್ದಾರೆ.

  ವರದಿಗಾರರೊಬ್ಬರು ಮದುವೆ ಆಗಲ್ವಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ವೆಂಕಟ್ ''ಮದುವೆ ಆಗ್ತೀನಿ, ಹುಡುಗಿ ನೋಡಬೇಕು. ಈಗ ಸಮಯ ಬಂದಿದೆ. ಎಲ್ಲರಿಗೂ ಹೇಳ್ತಿನಿ, ಪೆನ್ನು, ಕ್ಯಾಮರಾ ಬದಿಗಿಟ್ಟು ನೀವುಗಳು ಮದುವೆಗೆ ಬರಬೇಕೆಂದು, ನಮ್ಮ ಸಂಬಂಧಿಕರನ್ನ ಕರೆಯಲ್ಲ, ಸಿನಿಮಾದವರನ್ನ ಕೂಡ ಕರೆಯಲ್ಲ, ನಿಮ್ಮನ್ನ ಕರೆಯುತ್ತೇನೆ'' ಎಂದು ತಿಳಿಸಿದರು.

  ಹುಚ್ಚ ವೆಂಕಟ್ ಗೆ 'ಎಕ್ಕಡ' ಚಿಹ್ನೆ ಸಿಗೋದಕ್ಕೆ ಕಾರಣ ಗೊತ್ತಾ.?ಹುಚ್ಚ ವೆಂಕಟ್ ಗೆ 'ಎಕ್ಕಡ' ಚಿಹ್ನೆ ಸಿಗೋದಕ್ಕೆ ಕಾರಣ ಗೊತ್ತಾ.?

  ಹುಚ್ಚ ವೆಂಕಟ್ ಅವರು 2006ರಲ್ಲಿ ಈಗಾಗಲೇ ಮದುವೆಯಾಗಿದ್ದು, ಪತ್ನಿಯಿಂದ ದೂರವಿದ್ದಾರೆ ಎಂಬ ಆರೋಪವೂ ಅವರ ಮೇಲಿದೆ. ಇನ್ನು ರಾಜಕೀಯದ ಜೊತೆಗೆ 'ತಿಕ್ಲಾ ಹುಚ್ಚ ವೆಂಕಟ್', 'ಡಿಕ್ಟೆಟರ್ ಹುಚ್ಚ ವೆಂಕಟ್', 'ದುರಹಂಕಾರಿ ಹುಚ್ಚ ವೆಂಕಟ್' ಅಂತಹ ಸಿನಿಮಾಗಳನ್ನ ಮಾಡುತ್ತಿದ್ದಾರೆ.

  English summary
  Kannada actor, director Rajarajeshwari nagar constituency independence candidate Huccha Venkat Ready to married. venkat spoke about his marriage in madikeri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X