»   » ಸುದೀಪ್ ಗೆ ಏಕವಚನ; ಹುಚ್ಚ ವೆಂಕಟ್ v/s ಕಿಚ್ಚ ಫ್ಯಾನ್ಸ್ ಸಮರ

ಸುದೀಪ್ ಗೆ ಏಕವಚನ; ಹುಚ್ಚ ವೆಂಕಟ್ v/s ಕಿಚ್ಚ ಫ್ಯಾನ್ಸ್ ಸಮರ

Posted By:
Subscribe to Filmibeat Kannada

ತಂಟೆಗೆ ಬಂದ್ರೆ ತಮ್ಮದೇ ಸ್ಟೈಲ್ ನಲ್ಲಿ 'ಸಿಮೆಂಟ್ ಕೋಟಿಂಗ್' ಕೊಟ್ಟು ತರಾಟೆಗೆ ತೆಗೆದುಕೊಳ್ಳುವ ಜಾಯಮಾನ ಕಿಚ್ಚ ಸುದೀಪ್ ರದ್ದು. ಅವರ ಅಭಿಮಾನಿಗಳು ಕೂಡ ಹಾಗೆ, ಯಾರ ತಂಟೆಗೂ ಹೋಗಲ್ಲ. ಅವರ 'ಬಾಸ್' ತಂಟೆಗೆ ಬಂದ್ರೆ, ಯಾರನ್ನೂ ಸುಮ್ನೆ ಬಿಡಲ್ಲ.

ಇದಕ್ಕೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸದ್ಯ ನಡೆಯುತ್ತಿರುವ ಸಮರವೇ ಸಾಕ್ಷಿ. ಅಷ್ಟಕ್ಕೂ ಈ ಫೇಸ್ ಬುಕ್ ವಾರ್ ಗೆ ಪ್ರಮುಖ ಕಾರಣಕರ್ತ ಮಿಸ್ಟರ್ 'ಹುಚ್ಚ ವೆಂಕಟ್'.

ವೀಕ್ಷಕರ ಒತ್ತಾಯದ ಮೇರೆಗೆ 'ಬಿಗ್ ಬಾಸ್-3' ರಿಯಾಲಿಟಿ ಶೋನಲ್ಲಿ ಹುಚ್ಚ ವೆಂಕಟ್ ಭಾಗವಹಿಸಿದ್ದಾರೆ. ರಿಯಾಲಿಟಿ ಶೋ ಆದ ಕಾರಣ, ರಿಯಲ್ ನಲ್ಲಿ ಹೇಗಿರ್ತಾರೋ ಹಾಗೇ ಇರಬೇಕು ನಿಜ. ಆದ್ರೆ, ಹುಚ್ಚ ವೆಂಕಟ್ ಹುಚ್ಚಾಟ ಕಿಚ್ಚ ಸುದೀಪ್ ಮುಂದೆ ನಡೆದ್ರೆ, ಅವರ ಫ್ಯಾನ್ಸ್ ಸುಮ್ನೆ ಇರ್ತಾರಾ. ಖಂಡಿತ ಇಲ್ಲ. [ಎಡಗಾಲಿಟ್ಟು 'ಬಿಗ್ ಬಾಸ್' ಮನೆಗೆ ಅಂದರ್ ಆದ ಹುಚ್ಚ ವೆಂಕಟ್]

'ಬಿಗ್ ಬಾಸ್-3' ಪ್ರೀಮಿಯರ್ ಸಂಚಿಕೆಯಲ್ಲಿ ಹುಚ್ಚ ವೆಂಕಟ್ 'ಆವೇಷ'ದಲ್ಲಿ ಮಾಡಿದ ಸಣ್ಣ ಎಡವಟ್ಟು ಇದೀಗ ಫೇಸ್ ಬುಕ್ ನಲ್ಲಿ ಅವರ ವಿರುದ್ಧ ಎಲ್ಲರೂ ಬೆರಣಿ ತಟ್ಟುವಂತೆ ಆಗಿದೆ. ಹುಚ್ಚ ವೆಂಕಟ್ ವಿರುದ್ಧ ಕಿಚ್ಚ ಸುದೀಪ್ ಅಭಿಮಾನಿಗಳು ತೊಡೆ ತಟ್ಟಿ ನಿಂತಿದ್ದಾರೆ. ಮುಂದೆ ಓದಿ......

'ಬಿಗ್ ಬಾಸ್-3' ಪ್ರೀಮಿಯರ್ ಶೋ ನಲ್ಲಿ ಆಗಿದ್ದು ಏನು?

'ಬಿಗ್ ಬಾಸ್-3' ಕಾರ್ಯಕ್ರಮದ 7ನೇ ಸ್ಪರ್ಧಿಯಾಗಿ ಹುಚ್ಚ ವೆಂಕಟ್ ಎಂಟ್ರಿಕೊಟ್ಟರು. ಅವರಿಗೆ ಸ್ವಲ್ಪ ಬಿಲ್ಡಪ್ ಕೊಡುತ್ತಾ ಕಿಚ್ಚ ಸುದೀಪ್, ''ನಾನು ಎಲ್ಲೇ ಹೋದರೂ ಜನ ಕೇಳ್ತಿದ್ರು - 'ಸರ್ ಇವರು ಶೋ ನಲ್ಲಿ ಇರ್ತಾರಾ.? ಇವರು ಇರ್ಲೇಬೇಕ್...ಇವರು ಬರ್ಲೇಬೇಕ್' ಅಂತಿದ್ರು''' ಅಂತ ಹೇಳ್ತಾ ಹುಚ್ಚ ವೆಂಕಟ್ ರನ್ನ ಕಿಚ್ಚ ಸುದೀಪ್ ಸ್ವಾಗತ ಕೋರಿದರು. ಆದ್ರೆ, ಹುಚ್ಚ ವೆಂಕಟ್ ಎಂಟ್ರಿ ಆಗುತ್ತಲೇ ಕಿಚ್ಚ ಸುದೀಪ್ ಫ್ಯಾನ್ಸ್ ಗೆ ಕೆಂಡ ಕಾರುವಷ್ಟು ಕೋಪ ಬಂತು. ಅದಕ್ಕೆ ಕಾರಣ ಹೇಳ್ತೀವಿ, ಮುಂದಿನ ಸ್ಲೈಡ್ ಕ್ಲಿಕ್ ಮಾಡಿ... [ಹುಚ್ಚನ ಕಂಡು ಕಿಚ್ಚ ಕೂಡಾ ಸೈಲಂಟ್, ವೆಂಕಟ್ ಟ್ರೆಂಡಿಂಗ್]

ಕಿಚ್ಚ ಸುದೀಪ್ ಗೆ ಏಕವಚನ ಪ್ರಯೋಗ.!

'ಬಿಗ್ ಬಾಸ್' ವೇದಿಕೆಗೆ ಕಾಲಿಡುತ್ತಲೇ, ''ಎಲ್ಲರೂ ಸೈಲೆಂಟ್ ಆಗಿರ್ಬೇಕ್. ನಾನ್ ಮಾತನಾಡುವಾಗ ಎಲ್ಲರೂ ಸೈಲೆಂಟ್ ಆಗಿರ್ಬೇಕ್'' ಅಂತ ಆವಾಜ್ ಹಾಕಿದರು ಹುಚ್ಚ ವೆಂಕಟ್. ಅಲ್ಲಿವರೆಗೂ ಸೈಲೆಂಟ್ ಆಗಿದ್ದ ಕಿಚ್ಚ ಸುದೀಪ್, ಹುಚ್ಚ ವೆಂಕಟ್ ರನ್ನ ಮಾತನಾಡಿಸುವ ಸಲುವಾಗಿ, ''ವೆಂಕಟ್ ಅವರೇ...'' ಅಂತ ಶುರುಮಾಡಿದರು. ''ವೆಂಕಟ್ ಅನ್ನೋಲೋ...'' ಅಂತ
ಕಿಚ್ಚ ಸುದೀಪ್ ರಿಗೆ ಹುಚ್ಚ ವೆಂಕಟ್ ಏಕವಚನ ಪ್ರಯೋಗ ಮಾಡಿದರು.!

ವೇದಿಕೆ ಮೇಲೆ ತಿರುಗೇಟು ಕೊಟ್ಟ ಕಿಚ್ಚ.!

ಹುಚ್ಚ ವೆಂಕಟ್ ರವರ ಏಕವಚನ ಪ್ರಯೋಗಕ್ಕೆ ಕಿಚ್ಚ ಸುದೀಪ್ ಆ ಕ್ಷಣವೇ ತಿರುಗೇಟು ನೀಡಿದರು. ''ವೆಂಕಟ್ ಅವರೇ...ನೀವು ನೀವಾಗಿರಿ...ನಾವು ನಾವಾಗಿರ್ತೀವಿ...'' ಅಂತ ಸುದೀಪ್ ಹೇಳಿದರು. ಇದೀಗ ಈ ವಿಷಯವಾಗಿ ಫೇಸ್ ಬುಕ್ ನಲ್ಲಿ ದೊಡ್ಡ ಸಮರ ಶುರುವಾಗಿದೆ. ಏಕವಚನ ಪ್ರಯೋಗ ಮಾಡಿದ್ದಕ್ಕೆ ಹುಚ್ಚ ವೆಂಕಟ್ ವಿರುದ್ಧ ಕಿಚ್ಚ ಸುದೀಪ್ ಅಭಿಮಾನಿಗಳು ಸಖತ್ ಗರಂ ಆಗಿದ್ದಾರೆ. ಸುದೀಪ್ ಅಭಿಮಾನಿಗಳು ಹಾಕಿರುವ ಕಾಮೆಂಟ್ ಗಳನ್ನ ನಿಮಗೆ ತೋರಿಸ್ತೀವಿ....ಮುಂದಿನ ಸ್ಲೈಡ್ ಕ್ಲಿಕ್ ಮಾಡಿ.... [ವೆಂಕಟ್ ಹುಚ್ಚನ್ನು ಕೆರಳಿಸಿದ ಪೂಜಾಗಾಂಧಿ ಮಿನಿ ಸ್ಕರ್ಟ್!]

'ನಮ್ ಬಾಸ್' ಹುಚ್ಚ ಆಗಿದ್ದು ಮೊದಲು!

''ಹುಚ್ಚ ವೆಂಕಟೇಶ್ ನೀನು ಇವಾಗ ಹುಚ್ಚ ವೆಂಕಟೇಶ್ ಆಗಿರೋದು. ಆದ್ರೆ, ನಮ್ ಬಾಸ್ 2000 ಇಸವಿಯಲ್ಲೇ ಹುಚ್ಚ ಆಗಿದ್ದವರು ನಮ್ಮ ಕಿಚ್ಚ. ಸ್ವಲ್ಪ ಗೌರವ ಕೊಟ್ಟು ಮಾತಾಡು'' - ಚೇತನ್ ಚೇತು. ['ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಹೊಸ ಲವ್ ಸ್ಟೋರಿ.!]

ಏಕವಚನ ಪ್ರಯೋಗ ಮಾಡೋಕೆ ಇವರ್ಯಾರು?

''ಕಿಚ್ಚನಿಗೆ ಏಕವಚನ ಪ್ರಯೋಗ ಮಾಡೋಕೆ ಇವರ್ಯಾರು? ಅವರ ಧಿಮಾಕ್ ನ ಅವರ ಬಳಿ ಇಟ್ಟುಕೊಳ್ಳಲಿ.'' - ಶಿವರಾಜ್

ಹುಚ್ಚ ವೆಂಕಟ್ ವೇಸ್ಟ್.!

''ಬಿಗ್ ಬಾಸ್ ನಲ್ಲಿ ಹುಚ್ಚ ವೆಂಕಟ್ ವೇಸ್ಟ್ ಕ್ಯಾಂಡಿಡೇಟ್'' - ಪುಟ್ಟಿ ಸಾನಿಕ

ಕಿಚ್ಚ ಮಾತ್ರ ಹುಚ್ಚ.!

''ಗೌರವ ಕೊಟ್ಟು ತೆಗೆದುಕೊಳ್ಳುವುದನ್ನ ಕಲಿಯಬೇಕು. ಎಲ್ಲರಿಗೂ ಹಾಗೆ ಮಾತನಾಡುವುದು ಗೊತ್ತು. ಆದ್ರೆ, ನಾವು ಮನುಷ್ಯರು, ಮೃಗಗಳಲ್ಲ. ಕಿಚ್ಚ ಮಾತ್ರ ಹುಚ್ಚ.!'' - ಚೇತನ್ ಗೋವಿಂದ್

ಶೃತಿಗೂ ಗೌರವ ಕೊಡಲಿಲ್ಲ.!

''ನಟಿ ಶೃತಿಗೂ ಅಗೌರವ ತೋರಿದ್ದಾರೆ'' - ರಾಘವೇಂದ್ರ.ಎಸ್.ರಾವ್

''ಹುಚ್ಚ ವೆಂಕಟ್ ಮೊದಲು ಸುದೀಪ್ ಗೆ ಗೌರವ ಕೊಡೋದು ಕಲಿ'' - ಗುರುದತ್ತ ಎಂ.ಎಸ್.ಸಾವಲಗಿ

ಇದು ವಾರ್ನಿಂಗ್

ಸುದೀಪ್ ಅಣ್ಣನಿಗೆ ಗೌರವ ಕೊಟ್ಟರೆ ಒಳ್ಳೇದು. ಇದು ವಾರ್ನಿಂಗ್'' - ಪ್ರಕೃತಿ.

''ಮ್ಯೂಟ್ ಮಾಡಿ ನೋಡ್ಬೇಕು ಇವನು ಮಾತನಾಡಬೇಕಾದರೆ'' - ಭರತ್ ಗೌಡ ಎಸ್.

ಆಂಗ್ರಿ ಯಂಗ್ ಮ್ಯಾನ್

''ಕೂಲ್ ಆಗಿದ್ದಾಗ ಮಾತ್ರ ನಮ್ ಕಿಚ್ಚ ಜೆಂಟಲ್ ಮ್ಯಾನ್. ಕೋಪ ಬಂದ್ರೆ ಬಗ್ಗಿಸ್ಕೊಂಡು, ಬಗ್ಗಿಸ್ಕೊಂಡು ಬಾರ್ಸೋ ಆಂಗ್ರಿಯಂಗ್ ಮ್ಯಾನ್'' - ಗಣೇಶ್ ನಾಯಕ್

ನಾವು ಸುಮ್ನೆ ಇರಲ್ಲ.!

''ಹುಚ್ಚ ವೆಂಕಟ್ ಗೆ ಹೇಳಿ ಕಿಚ್ಚ ಸುದೀಪ್ ಅಣ್ಣನಿಗೆ ಮರ್ಯಾದೆ ಕೊಡೋಕೆ. ಇಲ್ಲಾ ಅಂದ್ರೆ ಸುಮ್ನೆ ಇರಲ್ಲ ನಾವು ಕಿಚ್ಚನ ಅಭಿಮಾನಿಗಳು. ಮರ್ಯಾದೆ ಕೊಟ್ಟು, ತೆಗೆದುಕೊಳ್ಳಿ ಮಿಸ್ಟರ್ ಹುಚ್ಚ ವೆಂಕಟ್'' - ಕಿಚ್ಚ ಕೃಷ್ಣ

ಬಿಗ್ ಬಾಸ್ ಕಥೆ ಏನೋ..!

''ಹುಚ್ಚ ವೆಂಕಟ್ ಸುದೀಪ್ ಸರ್ ಗೆ ಮರ್ಯಾದೆ ಇಲ್ಲದೇ ಇರೋ ತರಹ ಮಾತಾಡಿದ, ಸುದೀಪ್ ಸರ್ ಗೆ ಹಿಂಗೆ ಅಂದ್ರೆ ಒಳಗಡೆ ಬಿಗ್ ಬಾಸ್ ಕಥೆ ಇನ್ನೇನೋ.'' - ವಿನಾಯಕ್ ಜ್ಯೋತಿ

ಏಟುಗಳು ಬೀಳ್ತಾವೆ ಹುಷಾರ್.

''ಕಿಚ್ಚನಿಗೆ ಮರ್ಯಾದೆ ಕೊಡಿ ಮಿಸ್ಟರ್ ಹುಚ್ಚ ವೆಂಕಟ್. ಅತಿ ಮಾತಾಡಿದ್ರೆ, ಏಟುಗಳು ಬೀಳ್ತಾವೆ ಹುಷಾರ್. ಮೊದಲು ಸುದೀಪ್, ಆಮೇಲೆ ನೀವು. ನಾವು ನಿಮಗಿಂತ ಡಬಲ್ ಸ್ಟ್ರೇಟ್ ಫಾರ್ವರ್ಡ್. ಮಾತು ಲಿಮಿಟ್ ನಲ್ಲಿ ಇದ್ದರೆ ಒಳ್ಳೇದು'' - ಸಹನಾ ಸಾನು

ಇದೆಲ್ಲಾ ಸ್ಯಾಂಪಲ್ ಅಷ್ಟೇ..!

ಇದೆಲ್ಲಾ ಸ್ಯಾಂಪಲ್ ಅಷ್ಟೆ. ಹುಚ್ಚ ವೆಂಕಟ್ ವಿರುದ್ಧ ಕಿಚ್ಚ ಸುದೀಪ್ ಫ್ಯಾನ್ಸ್ ಬಾಯಿಗೆ ಬಂದಂತೆ ಕೂಡ ಬೈದಿದ್ದಾರೆ. ಅವನ್ನೆಲ್ಲಾ ನೀವೇ ಓದಿ....

ರೊಚ್ಚಿಗೆದ್ದ ಹುಡುಗಿಯರು.!

ಸುದೀಪ್ ಪರ ನಿಂತಿರುವ ಹೆಣ್ಮಕ್ಕಳು ಹುಚ್ಚ ವೆಂಕಟ್ ವಿರುದ್ಧ ಗರಂ ಆಗಿ ಮಾಡಿರುವ ಕಾಮೆಂಟ್ ಇದು.

ಮೊದಲು ಆಚೆ ಹಾಕಿ

ಇನ್ನೂ ಕೆಲವರು ಹುಚ್ಚ ವೆಂಕಟ್ ರನ್ನ ಮನೆಯಿಂದ ಆಚೆ ಹಾಕಿ ಅಂತ ಫೇಸ್ ಬುಕ್ ನಲ್ಲಿ ಪಟ್ಟು ಹಿಡಿದಿದ್ದಾರೆ.

ಹುಚ್ಚ V/S ಕಿಚ್ಚ

ಕಿಚ್ಚ ಸುದೀಪ್ ಫ್ಯಾನ್ಸ್ V/S ಹುಚ್ಚ ವೆಂಕಟ್ ನಡುವೆ ಸಮರ ಆರಂಭವಾಗಿದೆ. ಅದಕ್ಕೆ ಫೇಸ್ ಬುಕ್ ವೇದಿಕೆ ಆಗಿದೆ. ಈ ವಾರವೂ ಕಿಚ್ಚ ಸುದೀಪ್ ವಿರುದ್ಧ ಹುಚ್ಚ ವೆಂಕಟ್ ಏನಾದರೂ ತಲೆಹರಟೆ ಮಾಡಿದ್ರು ಅಂದ್ರೆ, ಸುದೀಪ್ ಫ್ಯಾನ್ಸ್ ರೊಚ್ಚಿಗೇಳುವುದು ಗ್ಯಾರೆಂಟಿ.

English summary
Kannada Actor Kiccha Sudeep fans are annoyed with Huccha Venkat, as he used singular form while speaking with Sudeep.
Please Wait while comments are loading...