»   » ಹುಚ್ಚ ವೆಂಕಟ್ ಗೆ 'ಎಕ್ಕಡ' ಚಿಹ್ನೆ ಸಿಕ್ಕಿದೆಯಂತೆ.! ಇದು ನಿಜಾನ.?

ಹುಚ್ಚ ವೆಂಕಟ್ ಗೆ 'ಎಕ್ಕಡ' ಚಿಹ್ನೆ ಸಿಕ್ಕಿದೆಯಂತೆ.! ಇದು ನಿಜಾನ.?

Posted By:
Subscribe to Filmibeat Kannada
Karnataka Elections 2018 : ಹುಚ್ಚ ವೆಂಕಟ್ ಎಕ್ಕಡ ಗುರುತಿಗೆ ನಿಮ್ಮ ಮತ ಕೊಡಿ | Oneindia Kannada

ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ರಾಜರಾಜೇಶ್ವರಿ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಹಾಗಿದ್ರೆ, ಹುಚ್ಚ ವೆಂಕಟ್ ಗೆ ಮತ ಹಾಕಬೇಕು ಅಂದ್ರೆ ಯಾವ ಚಿಹ್ನೆಗೆ ವೋಟ್ ಮಾಡಬೇಕು ಎಂಬ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ.

ಹೌದು, ಚುನಾವಣೆ ಆಯೋಗವೂ ಹುಚ್ಚ ವೆಂಕಟ್ ಅವರಿಗೆ ತಕ್ಕ ಚಿಹ್ನೆ ನೀಡಿದೆ ಎನ್ನಲಾಗಿದೆ. ವೆಂಕಟ್ ಅವರು ನೆಚ್ಚಿನ 'ಚಪ್ಪಲಿ' ಚಿಹ್ನೆ ನೀಡಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಒಂದು ವೇಳೆ ಇದು ನಿಜವೇ ಆದ್ರೆ, ಇದೊಂದು ರೀತಿಯಲ್ಲಿ ಕಾಕತಾಳೀಯ ಎನ್ನಬಹುದು.

ಇನ್ನು ಇಷ್ಟು ದಿನ ಇತರರನ್ನ ಬೈಯಲು ನನ್ ಎಕ್ಕಡ ಎನ್ನುತ್ತಿದ್ದ ಹುಚ್ಚಾ ವೆಂಕಟ್‌ ಇಂದಿನಿಂದ 'ನನ್ ಎಕ್ಕಡ'ಕ್ಕೆ ವೋಟ್ ಹಾಕಿ ಎನ್ನಬೇಕಾಗುತ್ತೆ. ಇದು ಕೇವಲ ವದಂತಿ ಅಷ್ಟೇ, ಅಧಿಕೃತವಲ್ಲವೆನ್ನಲಾಗುತ್ತಿದೆ. ಕಾದು ನೋಡೋಣ.

ಹುಚ್ಚ ವೆಂಕಟ್ 'ಆಸ್ತಿ' ವಿವರ ನೋಡಿ ಹೇಳಿ ಈತ 'ಶ್ರೀಮಂತನಾ-ಬಡವನಾ.?

Hucha Venkat gets Slipper symbol Election commission

ಅಂದ್ಹಾಗೆ, ಹುಚ್ಚಾ ವೆಂಕಟ್‌ ಪಕ್ಷೇತರವಾಗಿ ಚುನಾವಣೆಗೆ ನಿಂತಿದ್ದಾರೆ. ಆದ್ರೆ, ಇವರು ಸ್ಪರ್ಧೆ ಮಾಡುತ್ತಿರುವ ಸಾಮಾನ್ಯವಾದ ವ್ಯಕ್ತಿಗಳ ಎದುರಲ್ಲ, ಹಾಲಿ ಶಾಸಕ ಕಾಂಗ್ರೆಸ್‌ನ ಮುನಿರತ್ನ ಮತ್ತು ಅಮೂಲ್ಯ ಅವರ ಮಾವ ರಾಮಚಂದ್ರಪ್ಪ ಅವರನ್ನ ಎದುರಿಸುತ್ತಿದ್ದಾರೆ.

ಹುಚ್ಚ ವೆಂಕಟ್ ಚುನಾವಣೆ ಪ್ರಣಾಳಿಕೆಯಲ್ಲಿ ಬಂಪರ್ ಕೊಡುಗೆಗಳು: ಊಹೆಗೂ ಮೀರಿದ್ದು.!

ಇಷ್ಟು ದಿನ ಸಿನಿಮಾ ವಿಚಾರಕ್ಕೆ ಸುದ್ದಿಯಾಗುತ್ತಿದ್ದ ವೆಂಕಟ್, ಈಗ ಚುನಾವಣ ಅಖಾಡಕ್ಕೆ ಇಳಿದು ಇಲ್ಲಿಯೂ ಅಬ್ಬರಿಸುವ ಸೂಚನೆ ನೀಡಿದ್ದಾರೆ. 'ನಾನು ಮತ ಕೇಳಲ್ಲ, ನನ್ ಮಗಂದ್ ನಾನು ಶಾಸಕನಾಗಬೇಕಂದ್ರೆ ವೋಟ್ ಹಾಕಿ' ಘರ್ಜಿಸಿದ್ದಾರೆ.

English summary
Hucha Venkat who is contesting to Karnataka assembly elections from Rajarajeshwari Nagar gets Slipper as his voting symbol. He is contesting as independent candidate.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X